Asianet Suvarna News Asianet Suvarna News

RBI Annual Report : 2021-22ನೇ ಹಣಕಾಸು ಸಾಲಿನಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಏರಿಕೆ; ಖಾಸಗಿ ಬ್ಯಾಂಕುಗಳಲ್ಲೇ ಹೆಚ್ಚು

*2021-22ನೇ ಹಣಕಾಸು ಸಾಲಿನಲ್ಲಿ 9,103 ಬ್ಯಾಂಕ್ ವಂಚನೆ ಪ್ರಕರಣಗಳು ದಾಖಲು
*ಖಾಸಗಿ ವಲಯದ ಬ್ಯಾಂಕುಗಳಲ್ಲಿ 5,334 ವಂಚನೆ ಪ್ರಕರಣಗಳು ವರದಿ
*ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ 3,078 ಪ್ರಕರಣಗಳು
*2021-22ನೇ ಹಣಕಾಸು ಸಾಲಿನಲ್ಲಿ ಬ್ಯಾಂಕ್ ವಂಚನೆ ಹಿಂದಿನ ಸಾಲಿಗಿಂತ ಹೆಚ್ಚು
 

Bank fraud cases rise in FY22 private banks report most incidents says RBI Annual Report
Author
Bangalore, First Published May 27, 2022, 8:33 PM IST

ನವದೆಹಲಿ (ಮೇ 27):  ಭಾರತೀಯ ರಿಸರ್ವ್ ಬ್ಯಾಂಕಿನ (RBI) 2021-22ನೇ ಸಾಲಿನ ವಾರ್ಷಿಕ ವರದಿ (Annual Report) ಶುಕ್ರವಾರ ಬಿಡುಗಡೆಯಾಗಿದೆ. ಈ ವರದಿಯು 2021-22ನೇ ಹಣಕಾಸು ಸಾಲಿನಲ್ಲಿ(Financial Year) ಭಾರತದಲ್ಲಿ (India) ಖಾಸಗಿ ವಲಯದ (Private Sector) ಬ್ಯಾಂಕುಗಳಲ್ಲಿ ಅತ್ಯಧಿಕ ಸಂಖ್ಯೆಯ ವಂಚನೆಗಳು ವರದಿಯಾಗಿವೆ ಎಂದು ತಿಳಿಸಿದೆ. 

ಆರ್ ಬಿಐ (RBI) ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ 2021-22ನೇ ಹಣಕಾಸು ಸಾಲಿನಲ್ಲಿ ಖಾಸಗಿ ವಲಯದ ಬ್ಯಾಂಕುಗಳಲ್ಲಿ (Private Sector Banks) ಅತ್ಯಧಿಕ ಸಂಖ್ಯೆಯ 5,334 ವಂಚನೆ ಪ್ರಕರಣಗಳು ವರದಿಯಾಗಿವೆ. ಇನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ (Public sector Banks) 3,078 ವಂಚನೆ ಪ್ರಕರಣಗಳು ವರದಿಯಾಗಿವೆ. ಇನ್ನೊಂದೆಡೆ ವಿದೇಶಿ ಬ್ಯಾಂಕುಗಳು (Foreign Banks) ಹಾಗೂ ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ (Small Financial Banks) ಕ್ರಮವಾಗಿ 494 ಹಾಗೂ 155 ಪ್ರಕರಣಗಳು ವರದಿಯಾಗಿವೆ. 

ಇನ್ಮುಂದೆ ವೈಯಕ್ತಿಕ ಸಾಲ ಪಡೆಯಲು SBI ಶಾಖೆಗೆ ಭೇಟಿ ನೀಡಬೇಕಾಗಿಲ್ಲ,YONO App ಇದ್ರೆ ಸಾಕು

2021-22ನೇ ಹಣಕಾಸು ಸಾಲಿನಲ್ಲಿ ಬ್ಯಾಂಕ್ ವಂಚನೆ (Bank Fraud) ಪ್ರಕರಣಗಳ ಸಂಖ್ಯೆ ಅದರ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ ಎಂಬುದನ್ನು ಈ ಅಂಕಿಅಂಶಗಳು ಸಾಬೀತುಪಡಿಸುತ್ತವೆ. ಆದರೆ, ಈ ಪ್ರಕರಣಗಳಲ್ಲಿ ವಂಚಿಸಲಾದ ಹಣದ ಮೊತ್ತ ಮಾತ್ರ ಹಿಂದಿನ ಸಾಲಿಗಿಂತ ಅರ್ಧದಷ್ಟು ಕಡಿಮೆಯಿದೆ.
'ಖಾಸಗಿ ವಲಯದ ಬ್ಯಾಂಕುಗಳು ವರದಿ ಮಾಡಿರುವ ವಂಚನೆ ಪ್ರಕರಣಗಳು ಮುಖ್ಯವಾಗಿ ಸಣ್ಣ ವ್ಯಾಲ್ಯೂ ಕಾರ್ಡ್ (Small Value Card) ಅಥವಾ ಇಂಟರ್ನೆಟ್ ವಂಚನೆಗೆ (Internet Fraud) ಸಂಬಂಧಿಸಿದ್ದಾಗಿವೆ. ಇನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು ವರದಿ ಮಾಡಿರುವ ವಂಚನೆಗಳು ಮುಖ್ಯವಾಗಿ ಸಾಲ ವಿಭಾಗಕ್ಕೆ ಸಂಬಂಧಿಸಿದ್ದಾಗಿದೆ' ಎಂದು ಆರ್ ಬಿಐ ವಾರ್ಷಿಕ ವರದಿ ಹೇಳಿದೆ.

2022ನೇ ಆರ್ಥಿಕ ಸಾಲಿನಲ್ಲಿ ಒಟ್ಟು  9,103 ವಂಚನೆ ಪ್ರಕರಣಗಳು ವರದಿಯಾಗಿವೆ. ಅದರ ಹಿಂದಿನ ವರ್ಷ 7,359 ವಂಚನೆ ಪ್ರಕರಣಗಳು ವರದಿಯಾಗಿದ್ದವು. 2022ನೇ ಹಣಕಾಸು ಸಾಲಿನಲ್ಲಿ ಒಟ್ಟು ವಂಚನೆ ಮೊತ್ತ 60,414 ಕೋಟಿ ರೂ. ಅದರ ಹಿಂದಿನ ವರ್ಷ ಈ ಮೊತ್ತ 1,38,211 ಕೋಟಿ ರೂ. ಆಗಿತ್ತು. 

'ಕಳೆದ ಮೂರು ವರ್ಷಗಳಲ್ಲಿ ಬ್ಯಾಂಕ್ ಗುಂಪು ಆಧಾರಿತ ವಂಚನೆ ಪ್ರಕರಣಗಳ ಪರಿಶೀಲನೆಯಲ್ಲಿ ಖಾಸಗಿ ವಲಯದ ಬ್ಯಾಂಕುಗಳು ಗರಿಷ್ಠ ಸಂಖ್ಯೆಯ ವಂಚನೆಗಳನ್ನು ವರದಿ ಮಾಡಿವೆ. ಇನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು ವಂಚನೆ ಮೊತ್ತಕ್ಕೆ ಗರಿಷ್ಠ ಕೊಡುಗೆ ನೀಡಿವೆ. ವಂಚನೆಗಳ ಸಂಖ್ಯೆ ಹಾಗೂ ಮೌಲ್ಯ ಎರಡು ಕೂಡ ಮುಖ್ಯವಾಗಿ ಸಾಲ ವಿಭಾಗಕ್ಕೆ ಸಂಬಂಧಿಸಿದ್ದಾಗಿದೆ' ಎಂದು ವರದಿ ಹೇಳಿದೆ.

Privatization OF Banks:ಸಾರ್ವಜನಿಕ ವಲಯದ 2 ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ಚುರುಕು; ಆ ಎರಡು ಬ್ಯಾಂಕುಗಳು ಯಾವುವು?

ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಕಳೆದುಕೊಂಡ ಶೇ.90ರಷ್ಟು ಹಣವನ್ನು ಗ್ರಾಹಕರು 10 ದಿನಗಳಲ್ಲಿ ಹಿಂಪಡೆಯಬಹುದು. ಆದರೆ, ಅವರು ಸರಿಯಾದ ಸಮಯದಲ್ಲಿ ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಅನಧಿಕೃತ ವಹಿವಾಟಿನ ಬಗ್ಗೆ ತಕ್ಷಣ ಮಾಹಿತಿ ಹಂಚಿಕೊಳ್ಳುವ ಮೂಲಕ ಬ್ಯಾಂಕ್ ಗ್ರಾಹಕರು ವಂಚನೆ ಪ್ರಕರಣಗಳಲ್ಲಿನ ನಷ್ಟವನ್ನು ತಪ್ಪಿಸಬಹುದು. 

ಭಾರತೀಯ ಸ್ಟೇಟ್ ಬ್ಯಾಂಕ್ ಗೆ (SBI) ಸಂಬಂಧಿಸಿ ಖಾತೆಗಳನ್ನು ಬ್ಲಾಕ್ (Block) ಮಾಡಲಾಗಿದೆ ಎಂಬ ನಕಲಿ (Fake) ಎಸ್ ಎಂಎಸ್ (SMS)  ಇತ್ತೀಚೆಗೆ ಹರಿದಾಡುತ್ತಿದ್ದು, ಈ ಬಗ್ಗೆ ಎಚ್ಚರದಿಂದ ಇರುವಂತೆ ಕೇಂದ್ರ ಸರ್ಕಾರದ ಮಾಧ್ಯಮ ವಿಭಾಗ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಗ್ರಾಹಕರಿಗೆ ಸೂಚಿಸಿತ್ತು. ವೈಯಕ್ತಿಕ ಮಾಹಿತಿ ಅಥವಾ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳುವಂತೆ ಕೋರುವ ಎಸ್ ಎಂಎಸ್ (SMS) ಹಾಗೂ ಇ-ಮೇಲ್ ಗಳಿಗೆ (emails) ಪ್ರತಿಕ್ರಿಯಿಸದಂತೆ ಎಸ್ ಬಿಐ (SBI) ಖಾತೆದಾರರಿಗೆ ಮನವಿ ಮಾಡಿದೆ. ಹೀಗೆ ಮಾಡುವುದರಿಂದ ವಂಚನೆ ಚಟುವಟಿಕೆಗಳನ್ನು ತಡೆಯಲು ಸಾಧ್ಯವಿದೆ ಎಂದು ಪಿಐಬಿ (PIB) ಹೇಳಿದೆ.

Follow Us:
Download App:
  • android
  • ios