ಈ ಐಷಾರಾಮಿ ಪೆಂಟ್‌ಹೌಸ್‌ ಮೂರು ಮಹಡಿಗಳನ್ನು ಹೊಂದಿದ್ದು, ಅರಬ್ಬಿ ಸಮುದ್ರದ ಕಡೆಗೆ ಮುಖಮಾಡಿಕೊಂಡಿರುವ ಆಕರ್ಷಕ ವೀವ್‌ ಅನ್ನು ಹೊಂದಿದೆ. ಅದರೊಂದಿಗೆ ಮುಂಬೈ ನಗರದ ಗಗನಚುಂಬಿ ಕಟ್ಟಡಗಳು ಬಹಳ ಆಕರ್ಷಕವಾಗಿ ಇಲ್ಲಿಂದ ಕಾಣುತ್ತದೆ. ಈ ಆಸ್ತಿಗಾಗಿ ಬರೋಬ್ಬರಿ 252 ಕೋಟಿ ರೂಪಾಯಿಯನ್ನು ನೀರಜ್‌ ಬಜಾಜ್‌ ವೆಚ್ಚ ಮಾಡಿದ್ದಾರೆ.

ಮುಂಬೈ (ಮಾ.15): ದೇಶದ ಹಾಗೂ ಮುಂಬೈನ ರಿಯಲ್‌ ಎಸ್ಟೇಟ್‌ ವಲಯ ಅತೀದೊಡ್ಡ ಡೀಲ್‌ ಮೂಲಕ ಮತ್ತೆ ಸುದ್ದಿಯಲ್ಲಿದೆ. ಬಜಾಜ್‌ ಆಟೋ ಚೇರ್ಮನ್‌ ನೀರಜ್‌ ಬಜಾಜ್‌, ಸಮುದ್ರಮುಖಿ ಟ್ರಿಪ್ಲಾಕ್ಸ್‌ ಅಪಾರ್ಟ್‌ಮೆಂಟ್‌ ಖರೀದಿ ಮಾಡಿದ್ದಾರೆ. ಮುಂಬೈನಲ್ಲಿ ದೇಶದ ಪ್ರತಿಷ್ಠಿತ ಉದ್ಯಮಿಗಳೇ ಇರುವ ಮುಂಬೈನ ಮಲಬಾರ್‌ ಹಿಲ್‌ನಲ್ಲಿ ಮ್ಯಾಕ್ರೋಟೆಕ್‌ ಡೆವಲಪರ್ಸ್‌ ನಿರ್ಮಾಣ ಮಾಡಿರುವ ಐಷಾರಾಮಿ ಪೆಂಟ್‌ಹೌಸ್‌ಅನ್ನು ಬರೋಬ್ಬರಿ 252.5 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರೆ ಎಂದು ಇಂಡೆಕ್ಸ್‌ ಟಾಪ್‌. ಕಾಮ್‌ ವರದಿ ಮಾಡಿದೆ. ಇದಕ್ಕೂ ಮುನ್ನ ವೆಲ್‌ಸ್ಪನ್ ಗ್ರೂಪ್‌ನ ಚೇರ್ಮನ್‌ ಬಿಕೆ ಗೋಯೆಂಕಾ ಹಾಗೂ ಅವೆನ್ಯೂ ಸೂಪರ್‌ಮಾರ್ಟ್ಸ್‌ನ ಚೇರ್ಮನ್‌ ರಾಧಾಕೃಷ್ಣ ಧಮಾನಿ ಕೂಡ ಐಷಾರಾಮಿ ಮನೆಗಳನ್ನು ಖರೀದಿ ಮಾಡಿದ್ದರು. 2021ರ ಮೇ 1 ರಿಂದ ಬಜಾಜ್‌ ಆಟೋ ಚೇರ್ಮನ್‌ ಆಗಿ ಕೆಲಸ ಮಾಡುತ್ತಿರುವ ನೀರಜ್‌ ಬಜಾಜ್‌, ಮಾರ್ಚ್‌ 13 ರಂದು ಇದನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ವರದಿಯ ಪ್ರಕಾರ, ಮೂರು ಅಪಾರ್ಟ್‌ಮೆಂಟ್‌ಗಳ ಒಟ್ಟು ವಿಸ್ತೀರ್ಣ 18,008 ಚದರ ಅಡಿ (ಕಾರ್ಪೆಟ್ ಪ್ರದೇಶವು 12624 ಚದರ ಅಡಿ) ಮತ್ತು ಎಂಟು ಕಾರ್ ಪಾರ್ಕಿಂಗ್ ಸ್ಲಾಟ್‌ಗಳನ್ನು ಹೊಂದಿದೆ. ಈ ಅಪಾರ್ಟ್‌ಮೆಂಟ್‌ ಲೋಧಾ ಮಲಬಾರ್ ಪ್ಯಾಲೇಸ್‌ನಲ್ಲಿವೆ, ಇದು 31 ಮಹಡಿಗಳನ್ನು ಹೊಂದಿದೆ. ಒಪ್ಪಂದಕ್ಕೆ 15.15 ಕೋಟಿ ರೂಪಾಯಿ ಮುದ್ರಾಂಕ ಶುಲ್ಕ ಪಾವತಿಸಲಾಗಿದೆ ಎಂದು ವರದಿ ತಿಳಿಸಿದೆ.

ಫೆಬ್ರವರಿಯಲ್ಲಿ ವೆಲ್‌ಸ್ಪನ್ ಗ್ರೂಪ್ ಅಧ್ಯಕ್ಷ ಬಿ.ಕೆ.ಗೋಯೆಂಕಾ ಅವರು ಒಬೆರಾಯ್ ರಿಯಾಲ್ಟಿಯ ಐಷಾರಾಮಿ ಪ್ರಾಜೆಕ್ಟ್ ತ್ರೀ ಸಿಕ್ಸ್ಟಿ ವೆಸ್ಟ್‌ನಲ್ಲಿ ವರ್ಲಿಯಲ್ಲಿ 230 ಕೋಟಿ ರೂ.ಗೆ ಪೆಂಟ್‌ಹೌಸ್ ಖರೀದಿ ಮಾಡಿದ್ದರು. ಗೋಯೆಂಕಾ ಅವರ ಮನೆ ಬಿ ಟವರ್‌ನಲ್ಲಿ 63 ನೇ ಮಹಡಿಯಲ್ಲಿದೆ ಮತ್ತು ಹಿಂದೂಸ್ತಾನ್ ಟೈಮ್ಸ್ ಪ್ರಕಾರ 29,885 ಚದರ ಅಡಿ ಕಾರ್ಪೆಟ್ ಪ್ರದೇಶದಲ್ಲಿ ಹರಡಿದೆ. ಅಪಾರ್ಟ್ಮೆಂಟ್ 4,815 ಚದರ ಅಡಿಗಳ ಟೆರೇಸ್ ಪ್ರದೇಶ, 411 ಚದರ ಅಡಿ ಹೆಚ್ಚುವರಿ ಪ್ರದೇಶ ಮತ್ತು 13,0951 ಚದರ ಅಡಿ ಫ್ರೀ ಸೇಲ್‌ ಭೂಮಿಯನ್ನು ಒಳಗೊಂಡಿದೆ.

ಕಳೆದ ತಿಂಗಳು, ಡಿಮಾರ್ಟ್ ಮಾಲೀಕರಾಗಿರುವ ಅವೆನ್ಯೂ ಸೂಪರ್‌ಮಾರ್ಟ್‌ಗಳ ಸಂಸ್ಥಾಪಕ ರಾಧಾಕಿಶನ್ ದಮಾನಿ ಅವರು ಸುಮಾರು 1,238 ಕೋಟಿ ರೂಪಾಯಿಗಳಿಗೆ 28 ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ, ಇದು ಭಾರತದ ಅತಿದೊಡ್ಡ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಒಂದಾಗಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ. ಫೆಬ್ರವರಿ 3 ರಂದು ಮುಂಬೈನ ವಿವಿಧ ಪ್ರದೇಶಗಳಲ್ಲಿ 1,82,084 ಚದರ ಅಡಿಗಳ ಒಟ್ಟು ಕಾರ್ಪೆಟ್ ಪ್ರದೇಶದೊಂದಿಗೆ ವಹಿವಾಟುಗಳನ್ನು ನೋಂದಣಿ ಮಾಡಿಕೊಂಡಿದೆ. ಡಿ'ಮಾರ್ಟ್‌ನ ದಮಾನಿ 1,200 ಕೋಟಿ ರೂಪಾಯಿಗೆ 28 ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ.

Alia Bhatt : ನಟನೆ ಮಾತ್ರವಲ್ಲ ಬ್ಯುಸಿನೆಸ್ ವಿಷ್ಯದಲ್ಲೂ ನಟಿ ಸೂಪರ್ ಹಿಟ್

ಸ್ಥಳೀಯ ದಲ್ಲಾಳಿಗಳ ಪ್ರಕಾರ, ಇತ್ತೀಚೆಗೆ ಲೋಧಾ ಪ್ರಾಪರ್ಟೀಸ್‌ ತನ್ನ ಐಷಾರಾಮಿ ಯೋಜನೆಗಳನ್ನು ಪುನರಾರಂಭ ಮಾಡಿದೆ. ಪ್ರತಿ ಅಪಾರ್ಟ್‌ಮೆಂಟ್‌ನ ಕನಿಷ್ಠ ಗಾತ್ರ 9 ಸಾವಿರ ಚದರ ಅಡಿಯಾಗಿದ್ದು, ಪ್ರತಿ ಯುನಿಟ್‌ನ ಬೆಲೆ 100 ಕೋಟಿಗೂ ಅಧಿಕವಾಗಿದೆ ಎಂದಿದ್ದಾರೆ. ಅದರೆ, ನೀರಜ್‌ ಬಜಾಜ್‌ ಪೆಂಟ್‌ಹೌಸ್‌ ಖರೀದಿ ಮಾಡಿರುವ ಬಗ್ಗೆ ಬಿಲ್ಡರ್‌ಗಳಿಂದ ಹಾಗೂ ಖರೀದಿದಾರರಿಂದ ಯಾವುದೇ ಹೇಳಿಕೆ ಬಂದಿಲ್ಲ.

ವಜ್ರೋದ್ಯಮಿ ಜೈಮಿನ್‌ ಶಾ ಪುತ್ರಿ ದಿವಾ ಜೊತೆ ಗೌತಮ್‌ ಅದಾನಿ ಕಿರಿಯ ಪುತ್ರನ ನಿಶ್ಚಿತಾರ್ಥ!

ನಗರ ಪ್ರದೇಶದಲ್ಲಿ ಐಷಾರಾಮಿ ಆಸ್ತಿ ಖರೀದಿ ಮಾಡುವವರ ವಿಭಾಗ 2023ರ ಮಾರ್ಚ್ 31ರವರೆಗೆ ಉನ್ನತ ಮಟ್ಟದಲ್ಲಿ ಇರಲಿದೆ ಎಂದು ಸ್ಥಳೀಯ ದಲ್ಲಾಳಿಗಳು ತಿಳಿಸಿದ್ದಾರೆ. ಫೆಬ್ರವರಿ 1 ರ 2023ರ ಬಜೆಟ್‌ನಲ್ಲಿ ಘೋಷಣೆ ಮಾಡಿದ ಕೆಲವು ನಿಯಮಗಳ ಕಾರಣ, ಉದ್ಯಮಿಗಳು ಐಷಾರಾಮಿ ಫ್ಲ್ಯಾಟ್‌ಗಳನ್ನು ಖರೀದಿಸಲು ಮುಂದಾಗಿದ್ದಾರೆ. ಆಸ್ತಿ ಸೇರಿದಂತೆ ದೀರ್ಘಾವಧಿಯ ಆಸ್ತಿಗಳ ಮಾರಾಟದಿಂದ ಬಂಡವಾಳದ ಲಾಭದ ಮರುಹೂಡಿಕೆಗೆ ರೂ 10-ಕೋಟಿ ಮಿತಿಯನ್ನು ವಿಧಿಸಲಾಗಿದೆ.