ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ಸ್ ಆದ ಟೈಗರ್ ಮತ್ತು ಬಾದಲ್!

ಸಾಮಾಜಿಕ ಜಾಲತಾಣದಲ್ಲಿ ನಾವೀಗ ಆಸಕ್ತಿಕರ ವಿಷ್ಯಗಳನ್ನು ನೋಡ್ತಿರುತ್ತೇವೆ. ಪ್ರಾಣಿ, ಪಕ್ಷಿಗಳ ವಿಡಿಯೋವನ್ನು ಜನರು ಹಂಚಿಕೊಳ್ತಾರೆ. ಸದ್ಯ ಎರಡು ಪಕ್ಷಿಗಳ ಸ್ನೇಹ ಸುದ್ದಿ ಮಾಡಿದೆ. ಲಕ್ಷಾಂತರ ವೀವ್ಸ್ ಜೊತೆ ಲಕ್ಷ ರೂಪಾಯಿ ಬಿಡ್ ಆಗ್ತಿದೆ.  

Badal Became Social Media Stars Thousands Of Views Of Each Reel roo

ಸ್ನೇಹ ಕೇವಲ ಮನುಷ್ಯ – ಮನುಷ್ಯನ ಮಧ್ಯೆ ಆಗಬೇಕಾಗಿಲ್ಲ. ಮನುಷ್ಯ ಪ್ರಾಣಿ, ಮನುಷ್ಯ ಪಕ್ಷಿ ನಡುವೆಯೂ ಸ್ನೇಹ ಬೆಳೆಯಬಹುದು. ನಾಯಿಯನ್ನು ಅತಿಯಾಗಿ ಪ್ರೀತಿಸುವ ಜನರು ಅವುಗಳನ್ನೇ ತಮ್ಮ ಸ್ನೇಹಿತರಂತೆ ನೋಡ್ತಾರೆ. ಉತ್ತರ ಪ್ರದೇಶದ ಆರಿಫ್, ಕೊಕ್ಕರೆ ಜೊತೆ ಸ್ನೇಹ ಬೆಳೆಸಿದ್ದ. ಆತ ಹಾಗೂ ಕೊಕ್ಕರೆ ಸ್ನೇಹ ಎಲ್ಲರ ಗಮನ ಸೆಳೆದಿತ್ತು. ಈಗ ಇಂಥಹದ್ದೇ ಮತ್ತೊಂದು ಪಕ್ಷಿ ಕಥೆ ಸುದ್ದಿಯಲ್ಲಿದೆ. ಇವರ ಸ್ನೇಹ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.

ಬಾದಲ್ ಮತ್ತು ಟೈಗರ್ ಸ್ನೇಹವನ್ನು ನೀವು ಸಾಮಾಜಿಕ ಜಾಲತಾಣ (Social Network) ದಲ್ಲಿ ನೋಡ್ಬಹುದು. ಶಹಜಾಬ್ ಅಲಿ ಇವುಗಳ ವಿಡಿಯೋ (Video)  ಪೋಸ್ಟ್ ಮಾಡ್ತಿದ್ದಾರೆ. ವಿಡಿಯೋದಲ್ಲಿ ನಿಮಗೆ ನಿಜವಾದ ಟೈಗರ್ ಕಾಣಿಸೋದಿಲ್ಲ. ಅಲ್ಲಿ ಎರಡು ಮುದ್ದಾದ ಪಾರಿವಾಳ (Pigeon) ಗಳು ಕಾಣಸಿಗುತ್ವೆ. ಈ ಪಾರಿವಾಳಕ್ಕೆ ಶಹಜಾಬ್, ಬಾದಲ್ ಮತ್ತು ಟೈಗರ್ ಎಂದು ಹೆಸರಿಟ್ಟಿದ್ದಾರೆ. ಈ ಎರಡೂ ಪಾರಿವಾಳಕ್ಕೆ ಬೇಡಿಕೆ ಹೆಚ್ಚಾಗಿದ್ದು ಒಂದು ಲಕ್ಷದವರೆಗೆ ಬಿಡ್ಡಿಂಗ್ ನಡೆಯುತ್ತಿದೆ.

ಹೊಸ ಸ್ಟಾರ್ಟಪ್ ಪ್ರಾರಂಭಿಸಿದ ಅಶ್ನೀರ್ ಗ್ರೋವರ್;ವೈದ್ಯಕೀಯ ಚಿಕಿತ್ಸೆಗೆ 5 ಲಕ್ಷ ರೂ. ತನಕ ಸಾಲ ನೀಡಲಿದೆ ಝೀರೋ ಪೇ

ಬಿಹಾರ ಜಿಲ್ಲೆಯ ಚಾಂದಪಾಲಿ ಗ್ರಾಮದ ನಿವಾಸಿ ಶಹಬಾಜ್ ಪಾರಿವಾಳ ಸಾಕಣೆ ಮಾಡ್ತಿದ್ದಾರೆ. ಬರೀ ಪಾರಿವಾಳ ಸಾಕಣೆ ಮಾತ್ರವಲ್ಲದೆ ಅವರು ಎರಡು ಪಾರಿವಾಳಕ್ಕೆ ತರಬೇತಿ ನೀಡುತ್ತಿದ್ದಾರೆ. ಶಹಬಾಜ್ ಆಡಿದ ಮಾತಿಗೆ ಎರಡು ಪಾರಿವಾಳಗಳು ಪ್ರತಿಕ್ರಿಯೆಸುತ್ತವೆ. ಬಾದಲ್ ಹಾಗೂ ಟೈಗರ್ ಎರಡೂ ಪಾರಿವಾಳಕ್ಕೆ ತರಬೇತಿ ನೀಡುವ ಶಹಬಾಜ್ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಾರೆ. ಈ ವಿಡಿಯೋಗಳನ್ನು ಜನರು ನೆಚ್ಚಿಕೊಳ್ಳೋದಲ್ಲದೆ ಪಾರಿವಾಳ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ.

ಬಾದಲ್ ಮತ್ತು ಟೈಗರ್, ಗಿರ್ಬಾಜ್ ತಳಿಯ ಪಾರಿವಾಳಗಳು. ಎರಡು ತಿಂಗಳಿಂದ ಈ ಎರಡು ಪಾರಿವಾಳಕ್ಕೆ ತರಬೇತಿ ನಡೆಯುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಶಹಬಾಜ್ ತರಬೇತಿ ನೀಡುತ್ತಾರೆ. ಹಳ್ಳಿಯಲ್ಲಿರುವ ಶಹಬಾಜ್, ತರಬೇತಿ ನೀಡುವ ರೀಲ್ಸ್ ಮಾಡಿ ಅದನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡ್ತಾರೆ. ಅವರ ಒಂದು ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗುತ್ತದೆ. ಒಂದೇ ದಿನದಲ್ಲಿ 20 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆಯುವ ಈ ವಿಡಿಯೋ ಚರ್ಚೆಯ ವಿಷ್ಯವಾಗಿದೆ. ಈ ಎರಡೂ ಪಾರಿವಾಳಕ್ಕೆ ಒಟ್ಟಿಗೆ ಒಮ್ಮೊಮ್ಮೆ ಪ್ರತ್ಯೇಕವಾಗಿ ತರಬೇತಿ ನೀಡುತ್ತಾರೆ ಶಹಬಾಜ್. 

ಶಹಬಾಜ್ ಪ್ರಕಾರ, ಒಂದು ಪಾರಿವಾಳವನ್ನು ಒಂದು ಲಕ್ಷ ರೂಪಾಯಿಗೆ ಬಿಡ್ ಮಾಡಲಾಗಿದೆ. ಆದ್ರೆ ಶಹಬಾಜ್ ಗೆ ಅದನ್ನು ಮಾರಾಟ ಮಾಡುವ ಮನಸ್ಸಿಲ್ಲ. ಸ್ನೇಹಕ್ಕಿಂತ ದೊಡ್ಡ ಸಂಪತ್ತಿಲ್ಲ. ಇವರಿಬ್ಬರನ್ನು ಬೇರೆ ಮಾಡುವ ಮನಸ್ಸಿಲ್ಲ ಎಂದು ಶಹಬಾಜ್ ಹೇಳಿದ್ದಾರೆ. ಈ ಎರಡು ಪಾರಿವಾಳಗಳಕ್ಕೆ ಪ್ರತಿ ದಿನ ಬಿಡ್ ನಡೆಯುತ್ತಲೇ ಇದೆ. ಟೈಗರ್ ಹಾಗೂ ಬಾದಲ್ ಬೆಳಕಿಗೆ ಬಂದಾಗಿನಿಂದ ಜನರು ಅದ್ರ ವಿಡಿಯೋ ನೋಡಲು, ಖರೀದಿ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಆದ್ರೆ ಹಣಕ್ಕೆ ಸ್ನೇಹ ಮಾರಾಟ ಸಾಧ್ಯವಿಲ್ಲ ಎಂದು ಶಹಬಾಜ್ ಹೇಳಿದ್ದಾರೆ. 

ರಸ್ತೆಯಲ್ಲಿ ಬ್ಯೂಟಿ ಪ್ರಾಡಕ್ಟ್‌ ಮಾರಿಯೇ ಬಿಲಿಯನೇರ್‌ ಆಗಿದ್ದ ಉದ್ಯಮಿಗೆ ಗಲ್ಲು ಶಿಕ್ಷೆ!

ಗಮನ ಸೆಳೆದಿದ್ದ ಆರೀಫ್ – ಕೊಕ್ಕರೆ ಕಥೆ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನಂತ್ರ ನೋವು ನೀಡಿದ್ದ ಆರೀಫ್ ಮತ್ತು ಕೊಕ್ಕರೆ ಕಥೆ ಅನೇಕರಿಗೆ ತಿಳಿದಿದೆ. ಅಮೇಥಿಯ ನಿವಾಸಿ ಆರಿಫ್ ಎಂಬ ವ್ಯಕ್ತಿ ಗಾಯಗೊಂಡ ಸ್ಥಿತಿಯಲ್ಲಿದ್ದ ಕೊಕ್ಕರೆಯನ್ನು ಮನೆಗೆ ತಂದಿದ್ದರು. ಅದನ್ನು ಎಷ್ಟು ಕಾಳಜಿಯಿಂದ ಆರೈಕೆ ಮಾಡಿದ್ದರೆಂದ್ರೆ ಅವರಿಬ್ಬರೂ ಸ್ನೇಹಿತರಾಗಿದ್ದರು. ಇವರಿಬ್ಬರ ಸ್ನೇಹ ನೋಡಿ ಜನ ಜೈ-ವೀರು ಎಂದೂ ಕರೆಯುತ್ತಿದ್ದರು. ಆದರೆ ಇದಾದ ನಂತರ ಕೊಕ್ಕರೆಯನ್ನು ಆರಿಫ್ ಅವರಿಂದ ಕಿತ್ತುಕೊಂಡಿತ್ತು. ಅರಣ್ಯ ಇಲಾಖೆ ತಂಡ ಕೊಕ್ಕರೆಯನ್ನು ಹಿಡಿದು ಸಮಸ್ಪುರ ಪಕ್ಷಿಧಾಮಕ್ಕೆ ಕಳುಹಿಸಿತ್ತು. 

Latest Videos
Follow Us:
Download App:
  • android
  • ios