ಹೊಸ ಸ್ಟಾರ್ಟಪ್ ಪ್ರಾರಂಭಿಸಿದ ಅಶ್ನೀರ್ ಗ್ರೋವರ್;ವೈದ್ಯಕೀಯ ಚಿಕಿತ್ಸೆಗೆ 5 ಲಕ್ಷ ರೂ. ತನಕ ಸಾಲ ನೀಡಲಿದೆ ಝೀರೋ ಪೇ
ವೈದ್ಯಕೀಯ ಚಿಕಿತ್ಸೆಗೆ ಹಣದ ಕೊರತೆ ಎದುರಿಸೋರಿಗೆ ಸಾಲ ಒದಗಿಸಲು ಭಾರತ್ ಪೇ ಸಹಸಂಸ್ಥಾಪಕ ಅಶ್ನೀರ್ ಗ್ರೋವರ್ 'ಝೀರೋ ಪೇ' ಎಂಬ ಆ್ಯಪ್ ಪ್ರಾರಂಭಿಸಿದ್ದಾರೆ. ಇದರ ಮೂಲಕ 5 ಲಕ್ಷ ರೂ. ತನಕ ಸಾಲ ಪಡೆಯಬಹುದು.
ನವದೆಹಲಿ (ಏ.13): ಭಾರತ್ ಪೇ ಸಹಸಂಸ್ಥಾಪಕ ಹಾಗೂ ಮಾಜಿ ಎಂಡಿ ಅಶ್ನೀರ್ ಗ್ರೋವರ್ ಹೊಸ ಸ್ಟಾರ್ಟಪ್ ಮೂಲಕ ಫಿನ್ ಟೆಕ್ ಕ್ಷೇತ್ರವನ್ನು ಮರುಪ್ರವೇಶಿಸಲು ಸಜ್ಜಾಗಿದ್ದಾರೆ. ಝೀರೋ ಪೇ ಎಂಬ ಆ್ಯಪ್ ಮೂಲಕ ಯಾವುದೇ ಅಡೆತಡೆಗಳಿಲ್ಲದೆ ಅಗತ್ಯವಿರೋರಿಗೆ ವೈದ್ಯಕೀಯ ಸಾಲವನ್ನು ಒದಗಿಸಲಿದೆ. ಈ ಆ್ಯಪ್ ಪ್ರಸ್ತುತ ಇನ್ನೂ ಪರೀಕ್ಷಾ ಹಂತದಲ್ಲಿದೆ. ವೈದ್ಯಕೀಯ ಸಾಲ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಹೇಳಲಾಗಿದೆ. ವೈದ್ಯಕೀಯ ಸಾಲ ನೀಡಲು ಈಗಾಗಲೇ ಅನೇಕ ಫಿನ್ ಟೆಕ್ ಸಂಸ್ಥೆಗಳು ಹುಟ್ಟಿಕೊಂಡಿವೆ. ಇದಕ್ಕೆ ಈಗ ಝೀರೋ ಪೇ ಕೂಡ ಸೇರ್ಪಡೆಗೊಳ್ಳಲಿದೆ. ಭಾರತ್ ಪೇಯಿಂದ ಹೊರಬಂದ ಬಳಿಕ ಅಶ್ನೀರ್ ಗ್ರೋವರ್ 'ಥರ್ಡ್ ಯುನಿಕಾರ್ನ್' ಎಂಬ ಸಂಸ್ಥೆ ಸ್ಥಾಪಿಸಿದ್ದರು. ಥರ್ಡ್ ಯುನಿಕಾರ್ನ್ 2023ರಲ್ಲಿ 'ಕ್ರಿಕ್ ಪೇ' ಎಂಬ ಫ್ಯಾಂಟಸಿ ಗೇಮಿಂಟ್ ಪ್ಲ್ಯಾಟ್ ಫಾರ್ಮ್ ಪ್ರಾರಂಭಿಸಿತ್ತು. ಈಗ 'ಝೀರೋ ಪೇ' ಪ್ರಾರಂಭಿಸಲಿದೆ. ಅಶ್ನೀರ್ ಗ್ರೋವರ್ ಹಾಗೂ ಅಸೀಮ್ ಘವ್ರಿ 'ಝೀರೋ ಪೇ' ಸಹಸಂಸ್ಥಾಪಕರು.
ಝೀರೋಪೇ ವೆಬ್ ಸೈಟ್ ದೆಹಲಿ ಮೂಲದ ಬ್ಯಾಂಕಿಂಗೇತರ ಹಣಕಾಸು ಕಂಪನಿ (ಎನ್ ಬಿಎಫ್ ಸಿ) ಮುಕುಟ್ ಫಿನ್ವೆಸ್ಟ್ ಸಹಭಾಗಿತ್ವದಲ್ಲಿ 5ಲಕ್ಷ ರೂ. ತನಕ ತ್ವರಿತ ಪೂರ್ವ ಅನುಮೋದಿತ ವೈದ್ಯಕೀಯ ಸಾಲವನ್ನು ಒದಗಿಸಲಿದೆ. ಈ ಸಾಲಗಳು ಪಾಲುದಾರಿಕೆಯ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕೇಂದ್ರಗಳಲ್ಲಿ ಮಾತ್ರ ಸಿಗಲಿದೆ.
ದೇಶದ ಅಭಿವೃದ್ಧಿ ಅಳತೆಗೆ ಜಿಡಿಪಿ ಅಲ್ಲ,ತಲಾ ಆದಾಯ ಮಾನದಂಡವಾಗ್ಬೇಕು;ಚರ್ಚೆಗೆ ಕಾರಣವಾದ ಗ್ರೋವರ್ ಸಲಹೆ
ಚಂಡೀಗಢ ಮೂಲದ ಉದ್ಯಮಿ ಅಸೀಮಾ ಘವ್ರಿ ಅವರೊಂದಿಗೆ ಪಾಲುದಾರಿಕೆಯಲ್ಲಿ ಅಶ್ನೀರ್ ಗ್ರೋವರ್ ಹಾಗೂ ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ 2023ರಲ್ಲಿ 'ಥರ್ಡ್ ಯುನಿಕಾರ್ನ್' ಪ್ರಾರಂಭಿಸಿದರು. ಈ ಕಂಪನಿಯ ಮೊದಲ ಉದ್ಯಮ 'ಕ್ರಿಕ್ ಪೇ'. ಇದು ಗೇಮಿಂಗ್ ಆ್ಯಪ್ ಆಗಿದ್ದು, ಡ್ರೀಮ್ 11, ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ಹಾಗೂ ಮೈ 11 ಸರ್ಕಲ್ ಮುಂತಾದ ಆ್ಯಪ್ ಗಳಿಗೆ ಸ್ಪರ್ಧಿ ನೀಡಲು ಸ್ಥಾಪಿಸಲಿದೆ.
5 ಲಕ್ಷ ರೂ. ತನಕ ಸಾಲ
ಝೀರೋಪೇ ಮೂಲಕ ಗ್ರಾಹಕರು 5 ಲಕ್ಷ ರೂ. ತನಕ ಪ್ರೀ ಅಪ್ರೂವ್ಡ್ ಸಾಲ ಪಡೆಯಬಹುದು. ಆದರೆ, ಝೀರೋ ಪೇ ಆ್ಯಪ್ ಪಟ್ಟಿ ಮಾಡಿದ ಪಾಲುದಾರಿಕೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಮಾತ್ರ ಈ ಸಾಲ ಸೌಲಭ್ಯ ಸಿಗಲಿದೆ.
ಸಾಲ ಪಡೆಯೋದು ಹೇಗೆ?
ಝೀರೋಪೇ ಆ್ಯಪ್ ಡೌನ್ಲೋಡ್ ಮಾಡಬೇಕು. ಅದರಲ್ಲಿ ಕೆವೈಸಿ ವಿವರಗಳನ್ನು ನೋಂದಾಯಿಸಬೇಕು. ಆ ಬಳಿಕ ಆ ಆ್ಯಪ್ ನಲ್ಲಿ ಪಟ್ಟಿ ಮಾಡಿರುವ ಪಾಲುದಾರಿಕೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಒಂದು ಆಸ್ಪತ್ರೆ ಆರಿಸಬೇಕು. ಆ ನಂತರ 5 ಲಕ್ಷ ರೂ. ಒಳಗೆ ಎಷ್ಟು ಮೊತ್ತದ ಸಾಲ ಅಗತ್ಯ ಎಂಬುದನ್ನು ನಮೂದಿಸಬೇಕು. ಅದೇರೀತಿ ಸಾಲದ ಮರುಪಾವತಿ ಹೇಗೆ ಮಾಡುತ್ತೀರಿ ಎಂಬ ವಿವರ ಕೂಡ ದಾಖಲಿಸಬೇಕು.
ಝಡ್ ಎನ್ ಎಲ್ ಗ್ರೋಥ್ ಫಂಡ್ ನೇತೃತ್ವದಲ್ಲಿ ನಡೆಯುವ ಸೀಡ್ ಫಂಡಿಂಗ್ ಮೂಲಕ ಥರ್ಡ್ ಯುನಿಕಾರ್ನ್ 3.5 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದೆ. ವಿವೇಕ್ ವೆಂಚರ್ಸ್ ಇನ್ವೆಸ್ಟ್ ಮೆಂಟ್ ಹಾಗೂ ರಿಷಯು ಎಲ್ ಎಲ್ ಪಿ ಸಹಭಾಗಿತ್ವದಲ್ಲಿ ಫಂಡಿಂಗ್ ನಡೆದಿದೆ.
ಅತೀಹೆಚ್ಚು ತೆರಿಗೆ ಪಾವತಿಸಿದ ಮಹಿಳಾ ತೆರಿಗೆದಾರರಲ್ಲಿ ನನ್ನ ಪತ್ನಿಯೂ ಒಬ್ಬಳು: ಅಶ್ನೀರ್ ಗ್ರೋವರ್ ಟ್ವೀಟ್
ಡಿಜಿಟಲ್ ವೈದ್ಯಕೀಯ ಸಾಲದ ಮಾರುಕಟ್ಟೆಗೆ ಭಾರತದಲ್ಲಿ ದೊಡ್ಡ ಮಟ್ಟದ ಉತ್ತೇಜನ ಸಿಕ್ಕಿದೆ. ಆಸ್ಪತ್ರೆ ಸೇರ್ಪಡೆ, ಮನೆ ಕಾಳಜಿ ಹಾಗೂ ಗಂಭೀರ ಕಾಳಜಿ ನಿರ್ವಹಣೆ ಸೇರಿದಂತೆ ಅನೇಕ ವೈದ್ಯಕೀಯ ಅಗತ್ಯಗಳಿಗೆ ಈ ಸಾಲ ನೆರವು ನೀಡಲಿದೆ.
ಭಾರತದ ಡಿಜಿಟಲ್ ಆರೋಗ್ಯಸೇವಾ ಮಾರುಕಟ್ಟೆ 2030ರೊಳಗೆ 37 ಬಿಲಿಯನ್ ಅಮೆರಿಕನ್ ಡಾಲರ್ ಗಿಂತಲೂ ಹೆಚ್ಚಿನ ಆದಾಯ ಸೃಷ್ಟಿಸುವ ಅಂದಾಜಿದೆ ಎಂದು ವರದಿಯೊಂದು ತಿಳಿಸಿದೆ.
.