Asianet Suvarna News Asianet Suvarna News

ಆಕಾಶ್‌ ಅಂಬಾನಿ, ಶ್ಲೋಕಾ ದಂಪತಿಗೆ ಹೆಣ್ಣು ಮಗು ಜನನ

ಖ್ಯಾತ ಉದ್ಯಮಿ, ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಹಿರಿಯ ಪುತ್ರ ಆಕಾಶ್‌ ಅಂಬಾನಿ ಹಾಗೂ ಶ್ಲೋಕಾ ಅಂಬಾನಿ ದಂಪತಿಗೆ ಬುಧವಾರ ಹೆಣ್ಣು ಮಗು ಜನಿಸಿದೆ

Baby girl was born to Reliance founder mukesh Ambani elder son Akash Ambani and Shloka akb
Author
First Published Jun 1, 2023, 8:47 AM IST

ಮುಂಬೈ: ಖ್ಯಾತ ಉದ್ಯಮಿ, ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಹಿರಿಯ ಪುತ್ರ ಆಕಾಶ್‌ ಅಂಬಾನಿ ಹಾಗೂ ಶ್ಲೋಕಾ ಅಂಬಾನಿ ದಂಪತಿಗೆ ಬುಧವಾರ ಹೆಣ್ಣು ಮಗು ಜನಿಸಿದೆ. ದಂಪತಿಗೆ ಪೃಥ್ವಿ ಎಂಬ 2 ವರ್ಷದ ಗಂಡು ಮಗುವಿದೆ. ಇತ್ತೀಚೆಗೆ ಮುಕೇಶ್‌ ಜೊತೆಗೆ ದಂಪತಿಗಳು ಮಗ ಪೃಥ್ವಿಯೊಂದಿಗೆ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಮುಕೇಶ್‌ ಪುತ್ರಿ ಇಶಾ ಅಂಬಾನಿ ಹೆಣ್ಣು ಮತ್ತು ಗಂಡು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇದೀಗ ಮೂರನೇ ಬಾರಿಗೆ ಮುಕೇಶ್‌ ಮತ್ತು ಪತ್ನಿ ನೀತಾ ಅಂಬಾನಿ ಅಜ್ಜ ಅಜ್ಜಿ ಎನ್ನಿಸಿಕೊಂಡಿದ್ದಾರೆ.

ಅಂಬಾನಿ ಮನೆಯಲ್ಲಿದ್ದಾರೆ 600 ಕೆಲಸಗಾರರು

ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ವಿಶ್ವದಲ್ಲೇ ಅತೀ ದುಬಾರಿ ಖಾಸಗಿ ಮನೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಇವರ ದುಬಾರಿ ಖಾಸಗಿ ಮನೆಯನ್ನು ಆಂಟಿಲಿಯಾ ಎಂದು ಕರೆಯಲಾಗುತ್ತದೆ. 27 ಅಂತಸ್ತಿನ ಕಟ್ಟಡದಲ್ಲಿ ಮುಕೇಶ್ ಅಂಬಾನಿ ಕುಟುಂಬವು ವಾಸಿಸುತ್ತದೆ. ಇದರಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ ಮತ್ತು ಪೃಥ್ವಿ ಅಂಬಾನಿ ಇದ್ದಾರೆ. ಅಂಬಾನಿ ಕುಟುಂಬವು 2012 ರಲ್ಲಿ ಆಂಟಿಲಿಯಾಕ್ಕೆ ಸ್ಥಳಾಂತರಗೊಂಡಿತು ಮತ್ತು ಪ್ರಸ್ತುತ ಮನೆಯ ಬೆಲೆ 15,000 ಕೋಟಿ ರೂ. ಆಂಟಿಲಿಯಾ ತನ್ನ ವೈಶಿಷ್ಟ್ಯಗಳು, ಗ್ರ್ಯಾಂಡ್ ಪಾರ್ಟಿಗಳು, ಭದ್ರತೆ ಮತ್ತು ಹಲವಾರು ಇತರ ಕಾರಣಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತದೆ. ಇಂಟರ್‌ನೆಟ್‌ನಲ್ಲಿ ಆಂಟಿಲಿಯಾದ ಸಾಕಷ್ಟು ಫೋಟೋಗಳು ಲಭ್ಯವಿದೆ.

Beauty Tips: ಅಂಬಾನಿ ಫ್ಯಾಮಿಲಿಯ ಬೆಡಗಿಯರು ಮೇಕಪ್ ಹೇಗ್ ಮಾಡ್ತಾರೆ?

ಐಷಾರಾಮಿ ಬಂಗಲೆ ಅಂಟಿಲಿಯಾದಲ್ಲಿ 600 ಮಂದಿ ಕೆಲಸಗಾರರಿದ್ದಾರೆ. ಇವರೆಲ್ಲಾ ಸಾಮಾನ್ಯ ಕೆಲಸದವರು ಅಲ್ಲ. ಹೈಲೀ ಎಜುಕೇಟೆಡ್‌. ಒಟ್ಟು 600 ಮಂದಿ 27 ಫ್ಲೋರ್‌ನ ಅಂಟಿಲಾ ಬಂಗಲೆಯಲ್ಲಿ ಕೆಲಸ ಮಾಡುತ್ತಾರೆ. ಕಸ ಗುಡಿಸಲು, ಒರೆಸಲು, ಬಟ್ಟೆ ಒಗೆಯಲು, ಅಡುಗೆ ಮಾಡಲು ಇಲ್ಲಿ ಪ್ರತ್ಯೇಕವಾಗಿ ಹಲವು ಮಂದಿ ನಿಯೋಜಿಸಲ್ಪಟ್ಟಿದ್ದಾರೆ.

ಅಂಬಾನಿ ಮನೆ ಅಂಟಿಲಿಯಾದ ಕೆಲಸಗಾರರು ವೆಲ್‌ ಟ್ರೈನ್‌ಡ್ ಆಗಿದ್ದಾರೆ. ಇವರು ತಿಂಗಳಿಗೆ ಬರೋಬ್ಬರಿ 2 ಲಕ್ಷ ರೂ. ಸ್ಯಾಲರಿ ಪಡೆಯುತ್ತಾರೆ. ಅಂಟಿಲಿಯಾದಲ್ಲಿ ಈ ಕೆಲಸಗಾರರು ಉಳಿದುಕೊಳ್ಳಲೆಂದೇ ಸರ್ವೆಂಟ್ ಕ್ವಾರ್ಟರ್ಸ್‌ ಎಂಬ ಜಾಗವಿದೆ. ಇಲ್ಲಿ ಕೆಲಸಗಾರರು ಉಳಿದುಕೊಳ್ಳಬಹುದಾಗಿದೆ. ಅಂಟಿಲಿಯಾದಲ್ಲಿ ಕೆಲಸ ಮಾಡುವವರು ಪ್ರಸಿದ್ಧ ಕಂಪೆನಿಯಿಂದ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಮಾತ್ರವಲ್ಲ ಇಲ್ಲಿ ಕೆಲಸ ಮಾಡುವವರು ಹೈಲಿ ಎಜುಕೇಟೆಡ್ ಸಹ ಆಗಿದ್ದಾರೆ.

IPL 2023: ಮುಂಬೈ ಇಂಡಿಯನ್ಸ್‌ ಮಾಲೀಕತ್ವದಿಂದ ನೀತಾ, ಮುಕೇಶ್ ಅಂಬಾನಿ ಆದಾಯವೆಷ್ಟು? 

ಅಂಬಾನಿ ಕುಟುಂಬದ ಮನೆಯನ್ನು ಚಿಕಾಗೋ ಮೂಲದ ಎರಡು ಪ್ರಸಿದ್ಧ ಆರ್ಕಿಟೆಕ್ಚರ್ ಸಂಸ್ಥೆಗಳಾದ ಪರ್ಕಿನ್ಸ್ & ವಿಲ್ ಮತ್ತು ಲಾಸ್ ಏಂಜಲೀಸ್‌ನಲ್ಲಿರುವ ಹಿರ್ಷ್ ಬೆಡ್ನರ್ ಅಸೋಸಿಯೇಟ್ಸ್ ವಿನ್ಯಾಸಗೊಳಿಸಿದ್ದಾರೆ. ಮನೆಯ ನಿರ್ಮಾಣವು 2006 ರಲ್ಲಿ ಪ್ರಾರಂಭವಾಯಿತು. ಈ ಯೋಜನೆಯು ಪೂರ್ಣವಾಗಲು ಆರು ವರ್ಷಗಳು ಬೇಕಾಯಿತು. ಈ ಕಟ್ಟಡವು 8 ರಷ್ಟು ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ. 

ಐಷಾರಾಮಿ ಮನೆಯು 173 ಮೀಟರ್ ಎತ್ತರ ಮತ್ತು 37,000 ಚದರ ಮೀಟರ್‌ಗಳಲ್ಲಿ ಹರಡಿಕೊಂಡಿದೆ. ಎತ್ತರದ ಕಟ್ಟಡವು ಬಹು ಅಂತಸ್ತಿನ ಕಾರ್ ಪಾರ್ಕಿಂಗ್, 9 ಹೈ ಸ್ಪೀಡ್ ಎಲಿವೇಟರ್‌ಗಳು ಮತ್ತು ಸಿಬ್ಬಂದಿಗೆ ವಿಶೇಷ ಸೂಟ್‌ಗಳನ್ನು ಹೊಂದಿದೆ. 2012ರಿಂದ ಈವರೆಗೂ ಕೂಡಾ ಈ ಅಂಟಿಲಿಯಾ ಮನೆಯು ತನ್ನ ಐಷಾರಾಮಿ ವ್ಯವಸ್ಥೆಯಿಂದಲೇ ಅತೀ ಜನಪ್ರಿಯವಾಗಿದೆ. 

Follow Us:
Download App:
  • android
  • ios