ಅಯೋಧ್ಯೆ ರಾಮಮಂದಿರ ಎಫೆಕ್ಟ್: 3 ತಿಂಗಳಲ್ಲಿ ಆಸ್ತಿ ದರ 179% ಹೆಚ್ಚಳ; ಆನ್‌ಲೈನ್‌ನಲ್ಲಿ ಮನೆ, ಸೈಟ್‌ಗಾಗಿ ತೀವ್ರ ಹುಡುಕಾಟ!
ಅಯೋಧ್ಯೆಯಲ್ಲಿನ ಸರಾಸರಿ ಬೆಲೆಗಳು ಅಕ್ಟೋಬರ್ 2023 ರಲ್ಲಿ ಚದರ ಅಡಿಗೆ 3,174 ರಿಂದ ಜನವರಿ 2024 ರಲ್ಲಿ ಪ್ರತಿ ಚದರ ಅಡಿಗೆ 8,877 ಕ್ಕೆ ಏರಿದೆ ಎಂದು ತಿಳಿದುಬಂದಿದೆ.
ಅಯೋಧ್ಯೆ (ಜನವರಿ 25, 2024): ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯಾಗಿದ್ದು, 23 ರಿಂದ ದೇಗುಲವನ್ನು ಸಾರ್ವಜನಿಕ ದರ್ಶನಕ್ಕೆ ತೆರೆಯಲಾಗಿದೆ. ಈ ಹಿನ್ನೆಲೆ ಅಯೋಧ್ಯೆಯಲ್ಲಿನ ಸರಾಸರಿ ಆಸ್ತಿ ದರಗಳು ಕಳೆದ ಮೂರು ತಿಂಗಳಲ್ಲಿ 179 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಆನ್‌ಲೈನ್ ರಿಯಲ್ ಎಸ್ಟೇಟ್ ಪೋರ್ಟಲ್ ಮ್ಯಾಜಿಕ್‌ಬ್ರಿಕ್ಸ್ ವರದಿ ಮಾಡಿದೆ.
ಮ್ಯಾಜಿಕ್‌ಬ್ರಿಕ್ಸ್ ಸಂಶೋಧನೆಯ ಪ್ರಕಾರ, ಅಯೋಧ್ಯೆಯಲ್ಲಿನ ಸರಾಸರಿ ಬೆಲೆಗಳು ಅಕ್ಟೋಬರ್ 2023 ರಲ್ಲಿ ಚದರ ಅಡಿಗೆ 3,174 ರಿಂದ ಜನವರಿ 2024 ರಲ್ಲಿ ಪ್ರತಿ ಚದರ ಅಡಿಗೆ 8,877 ಕ್ಕೆ ಏರಿದೆ ಎಂದು ಪೋರ್ಟಲ್ ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ, ಅಯೋಧ್ಯೆಯಲ್ಲಿ ವಸತಿ ಆಸ್ತಿಗಳ ಹುಡುಕಾಟವು 6.25 ಪಟ್ಟು ಹೆಚ್ಚಾಗಿದೆ ಎಂದೂ ಮ್ಯಾಜಿಕ್‌ಬ್ರಿಕ್ಸ್ ಹೇಳಿಕೊಂಡಿದೆ.
ಇದನ್ನು ಓದಿ: ರಾಮ ಮಂದಿರ ಆಯ್ತು, ಈಗ ನೂತನ ರಾಮ ಸೇತುಗೆ ಪ್ಲ್ಯಾನ್: ಭಾರತ - ಶ್ರೀಲಂಕಾ ನಡುವೆ ಶೀಘ್ರ 23 ಕಿ.ಮೀ. ಉದ್ದದ ಸಮುದ್ರ ಸೇತುವೆ!
ಅದೇ ಮೂರು ತಿಂಗಳ ಅವಧಿಯಲ್ಲಿ, ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ (ಆನ್‌ಲೈನ್ ಮೂಲಕ) ಅಯೋಧ್ಯೆಯಲ್ಲಿ ವಸತಿ ಆಸ್ತಿಗಳ ಹುಡುಕಾಟದಲ್ಲಿ 6.25x ಜಿಗಿತವನ್ನು ಕಂಡಿದೆ, ಇದು ನಿರೀಕ್ಷಿತ ಮನೆ ಖರೀದಿದಾರರಿಂದ ಹೆಚ್ಚುತ್ತಿರುವ ಆಸಕ್ತಿಯನ್ನು ಸೂಚಿಸುತ್ತದೆ ಮತ್ತು ನಗರದಲ್ಲಿ ವಸತಿ ಬೇಡಿಕೆಯನ್ನು ಹೆಚ್ಚಿಸುತ್ತದೆ ಎಂದೂ ಹೇಳಿದೆ.
ಹಾಗೆ, ಅಯೋಧ್ಯೆಯ ಸ್ಥಳೀಯ ರಿಯಲ್ ಎಸ್ಟೇಟ್ ಬ್ರೋಕರ್ ಅಮಿತ್ ಸಿಂಗ್ ಎಂಬುವರು ಸಹ ಕಳೆದ 5 - 6 ವರ್ಷಗಳಿಂದ ನಗರದಲ್ಲಿ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಈಗ ಮಾರುಕಟ್ಟೆ ದರವು ತುಂಬಾ ಹೆಚ್ಚಾಗಿದೆ, ಇದರಿಂದಾಗಿ ಬೆಲೆಗಳ ನಡುವೆ ಅಂತರವನ್ನು ಸೃಷ್ಟಿಸುತ್ತದೆ. ನಗರದ ಕೆಲವು ಪ್ರದೇಶಗಳಲ್ಲಿ, ಬೆಲೆಗಳು ಈಗ ಕೈಗೆಟುಕುವಂತಿಲ್ಲ, ವಿಶೇಷವಾಗಿ ಸ್ಥಳೀಯರಿಗೆ ಎಂದೂ ಅವರು ಹೇಳಿದರು.
ಬೆಂಗಳೂರಿಂದ ಅಯೋಧ್ಯೆಗೆ ಕೇವಲ 1622 ರೂ.ಗೆ ಫ್ಲೈಟ್‌ನಲ್ಲಿ ಪ್ರಯಾಣಿಸಲು ಇಲ್ಲಿದೆ ಸೂಪರ್ ಆಫರ್!
ರಾಮ ಮಂದಿರದ ಉದ್ಘಾಟನೆ ಮತ್ತು ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ ಆಸ್ತಿ ಬೆಲೆಯಲ್ಲಿ ಕಳೆದ ಆರು ತಿಂಗಳಲ್ಲೇ ಗರಿಷ್ಠ ಏರಿಕೆಯಾಗಿದೆ. ಅವಕಾಶವನ್ನು ನಗದೀಕರಿಸಲು, ದೇಶಾದ್ಯಂತದ ಇತರ ಜಿಲ್ಲೆಗಳು ಮತ್ತು ಪ್ರದೇಶಗಳ ಅನೇಕ ಖರೀದಿದಾರರು ಇಲ್ಲಿ ಹೆಚ್ಚಿನ ದರದಲ್ಲಿ ಆಸ್ತಿಗಳನ್ನು ಖರೀದಿಸಿದ್ದಾರೆ, ಇದು ರಿಯಲ್ ಎಸ್ಟೇಟ್ ಮಾರುಕಟ್ಟೆಯ ಡೈನಾಮಿಕ್ ಅನ್ನು ಬದಲಾಯಿಸಿದೆ ಎಂದೂ ಹೇಳಿದ್ದಾರೆ.
ಹೂಡಿಕೆಗಳನ್ನು ಎಲ್ಲಿ ಮಾಡಲಾಗುತ್ತಿದೆ?
ಆಸ್ತಿಯಲ್ಲಿ ಹೆಚ್ಚಿನ ಹೂಡಿಕೆಗಳನ್ನು ಲ್ಯಾಂಡ್‌ಗಾಗಿ ಮಾಡಲಾಗುತ್ತಿದೆ ಮತ್ತು ನಗರದಲ್ಲಿನ ಆಸ್ತಿಗಳ ಹೊರತಾಗಿ, ಫೈಜಾಬಾದ್ ರಸ್ತೆ, ದಿಯೋಕಾಲಿ, ಚೌದಾ ಕೋಸಿ ಪರಿಕ್ರಮ, ರಿಂಗ್ ರೋಡ್, ನಯಾಘಾಟ್ ಮತ್ತು ಲಕ್ನೋ-ಗೋರಖ್‌ಪುರ ಹೆದ್ದಾರಿಯಲ್ಲಿರುವ ಪ್ರದೇಶಗಳಂತಹ ಹಲವಾರು ಪ್ರದೇಶಗಳು ಬಲವಾದ ಬೇಡಿಕೆಯನ್ನು ಕಾಣುತ್ತಿವೆ. ಈ ಪ್ರದೇಶಗಳು ರಾಮಮಂದಿರದ 6-20-ಕಿಮೀ ವ್ಯಾಪ್ತಿಯಲ್ಲಿವೆ ಮತ್ತು ಆದ್ದರಿಂದ ಹೂಡಿಕೆದಾರರ ಆಸಕ್ತಿಯನ್ನು ಸೆಳೆದಿದೆ ಎಂದು ಸ್ಥಳೀಯ ಬ್ರೋಕರ್ ಹೇಳಿದ್ದಾರೆ.
ನಾಳೆಯಿಂದ ಅಯೋಧ್ಯೆ ಸಾರ್ವಜನಿಕ ಮುಕ್ತ: ವರ್ಷಕ್ಕೆ 5 ಕೋಟಿ ಭಕ್ತರ ನಿರೀಕ್ಷೆ; ಪ್ರವಾಸೋದ್ಯಮಕ್ಕೆ ಸುವರ್ಣ ಯುಗ!
ಆಸ್ತಿ ನೋಂದಣಿ ಡೇಟಾ
ಅಯೋಧ್ಯೆ ಜಿಲ್ಲೆಯ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಮಾಹಿತಿಯ ಪ್ರಕಾರ, 2017 ಮತ್ತು 2022 ರ ನಡುವೆ ಆಸ್ತಿ ನೋಂದಣಿ 120 ಪ್ರತಿಶತದಷ್ಟು ಹೆಚ್ಚಾಗಿದೆ. ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ, 2019 ರಲ್ಲಿ ಪ್ರತಿ ಚದರ ಅಡಿಗೆ ರೂ 1,000 ರಿಂದ 2,000 ರವರೆಗಿನ ಭೂಮಿಯ ದರಗಳು ಈಗ ಪ್ರತಿ ಚದರ ಅಡಿಗೆ ರೂ 4,000 ರಿಂದ 6,000 ಕ್ಕೆ ಏರಿಕೆಯಾಗಿದೆ ಎಂದು ANAROCK ಗ್ರೂಪ್ ಹೇಳಿದೆ.
ನಾಳೆಯಿಂದ ಅಯೋಧ್ಯೆಗೆ ಪ್ರವಾಸಿಗರ ಲಗ್ಗೆ: ಪ್ರತಿನಿತ್ಯ ಲಕ್ಷಾಂತರ ಜನರಿಗೆ ಆತಿಥ್ಯ ನೀಡೋದೇ ಸವಾಲು!