Asianet Suvarna News Asianet Suvarna News

ಬೆಂಗಳೂರು ಟೆಕ್ ಸಮ್ಮಿಟ್: ಬದಿಗೆ ಸರಿದ ತಂತ್ರಜ್ಞಾನ, ಮೆರೆದ ರಾಜಕಾರಣಿಗಳು..!

ಮಾದರಿಗಳ ಕುರಿತು ಮಾಹಿತಿ ನೀಡುವವರು, ಪ್ರಶ್ನೆಗಳಿಗೆ ಉತ್ತರಿಸುವವರು, ಅವುಗಳ ಕುರಿತು ಜ್ಞಾನ ನೀಡುವ ಭಿತ್ತಿಪತ್ರಗಳನ್ನು ಒದಗಿಸುವವರು ಯಾರೂ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಇರಲೇ ಇಲ್ಲವೆನ್ನುತ್ತಾರೆ  ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ 

Author of Space and Defense Analyst Girish Linganna Talks Over Bengaluru Tech Summit grg
Author
First Published Nov 29, 2023, 8:34 PM IST

ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
​​​​​​​
ಬೆಂಗಳೂರು(ನ.29):
 ಬೆಂಗಳೂರು ಟೆಕ್ ಸಮ್ಮಿಟ್‌ಗೆ ಇಂದು ತೆರಳಿದ ಸಂದರ್ಭದಲ್ಲಿ ನನಗೆ ಎದುರಾಗಿದ್ದು ನಿರಾಶೆ ಮತ್ತು ಬೇಸರ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು (ಇಸ್ರೋ) ಈ ಪ್ರತಿಷ್ಠಿತ, ವ್ಯಾಪಕವಾಗಿ ಗಮನ ಸೆಳೆದಿದ್ದ ಸಮ್ಮೇಳನದಲ್ಲಿ ತಮ್ಮ ಸ್ಟಾಲ್‌ಗಳನ್ನು ಹೊಂದಿದ್ದವು. ಆದರೆ, ಇಲ್ಲಿಗೆ ಆಗಮಿಸಿದ್ದ ಆಸಕ್ತ ನಾಗರಿಕರು ಅಲ್ಲಿ ಇಡಲಾಗಿದ್ದ ಮಾದರಿಗಳನ್ನು ಕೇವಲ ನೋಡಿ, ಮುಂದೆ ಸಾಗುವ ದೃಷ್ಯ ನನಗೆ ನಿರಾಶೆ ಮೂಡಿಸಿತು ಎಂದು ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ತಿಳಿಸಿದ್ದಾರೆ. 

ಈ ಮಾದರಿಗಳ ಕುರಿತು ಮಾಹಿತಿ ನೀಡುವವರು, ಪ್ರಶ್ನೆಗಳಿಗೆ ಉತ್ತರಿಸುವವರು, ಅವುಗಳ ಕುರಿತು ಜ್ಞಾನ ನೀಡುವ ಭಿತ್ತಿಪತ್ರಗಳನ್ನು ಒದಗಿಸುವವರು ಯಾರೂ ಅಲ್ಲಿರಲೇ ಇಲ್ಲ. ಈ ವೈಜ್ಞಾನಿಕ ಅನ್ವೇಷಣೆಗಳ ಕುರಿತು ಸೂಕ್ತ ಮಾಹಿತಿ ಒದಗಿಸುವ ವ್ಯವಸ್ಥೆ ಕೈಗೊಂಡಿದ್ದರೆ, ವೀಕ್ಷಕರಲ್ಲಿ ಕುತೂಹಲ ಮೂಡಿಸಿ, ಇನ್ನಷ್ಟು ಮಾಹಿತಿ ಪಡೆದುಕೊಳ್ಳಬೇಕೆಂಬ ಹಂಬಲ ಅವರಲ್ಲಿ ಮೂಡಿಸಬಹುದಾಗಿತ್ತು ಎಂದು ಹೇಳಿದ್ದಾರೆ. 

ಷೇರು ಮಾರುಕಟ್ಟೆಯ ಐತಿಹಾಸಿಕ ಸಾಧನೆ, 4 ಟ್ರಿಲಿಯನ್‌ ಡಾಲರ್‌ ಕ್ಲಬ್‌ ಸೇರಿದ ಭಾರತ!

ಆದರೆ, ದುರದೃಷ್ಟವಶಾತ್ ಈ ದೊಡ್ಡ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸಾರ್ವಜನಿಕರ ಹಣವನ್ನು ಬಳಸಿಕೊಂಡು, ಕೇವಲ ತೋರಿಕೆಗಷ್ಟೇ, ಕಾನೂನಿನ ಬಾಧ್ಯತೆ ಪೂರೈಸಲು ಭಾಗವಹಿಸಿದಂತೆ ಕಂಡುಬಂತು. ಅದಲ್ಲದೆ, ಈ ಸ್ಟಾಲ್‌ಗಳ ಜವಾಬ್ದಾರಿ ಹೊಂದಿರುವಂತೆ ಕಂಡವರು ಅವಶ್ಯಕ ಜ್ಞಾನ, ಪ್ರಾವೀಣ್ಯತೆ ಹೊಂದಿರಲಿಲ್ಲ, ವೀಕ್ಷಕರಲ್ಲಿ ಆಸಕ್ತಿ ಮೂಡಿಸಲು ಸಮರ್ಥರೂ ಆಗಿರಲಿಲ್ಲ. ಇದು ಕೇವಲ ತೋರಿಕೆಗೋಸ್ಕರ ಅಲ್ಲಿ ಸ್ಟಾಲ್ ಹೊಂದಿದ್ದಂತೆ ಕಂಡಿತ್ತು. ಮಹತ್ವದ ತಾಂತ್ರಿಕ ಅಭಿವೃದ್ಧಿಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಬೇಕಿದ್ದ ಬೆಂಗಳೂರು ಟೆಕ್ ಸಮ್ಮಿಟ್ ರಾಜಕಾರಣಿಗಳ ಛಾಯಾಚಿತ್ರಗಳ ಪ್ರದರ್ಶನಕ್ಕೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದು ನಿರಾಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ. 

ಇಲ್ಲಿನ ಕಾರ್ಯಕ್ರಮ ನಿರ್ವಹಣಾ ತಂಡ (ಇವೆಂಟ್ ಮ್ಯಾನೇಜ್‌ಮೆಂಟ್) ವೃತ್ತಿಪರತೆಯ ಕೊರತೆಯನ್ನು ಪ್ರದರ್ಶಿಸಿದೆ. ಕಾರ್ಯಕ್ರಮದ ವಿವರಗಳನ್ನು ಒದಗಿಸುವ ಮಾಹಿತಿ ಫಲಕಗಳನ್ನೂ ಇಲ್ಲಿ ಅಳವಡಿಸಲಾಗಿಲ್ಲ. ಅದರೊಡನೆ, ವಿವಿಧ ಕಾರ್ಯಕ್ರಮಗಳು, ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ ಅಲ್ಲಿಗೆ ತೆರಳಲು ಸೂಕ್ತ ಮಾರ್ಗಸೂಚಿಗಳನ್ನು ಅಳವಡಿಸಲಾಗಿಲ್ಲ. ಒಟ್ಟಾರೆ ಇವೆಂಟ್ ಮ್ಯಾನೇಜ್ಮೆಂಟ್ ವ್ಯವಸ್ಥೆ ಅಸಮರ್ಥತೆ ಮತ್ತು ವೃತ್ತಿಪರತೆಯ ಕೊರತೆಯನ್ನು ಪ್ರದರ್ಶಿಸಿ, ಬೇಸರ ಮೂಡಿಸಿದೆ ಎಂದು ತಿಳಿಸಿದ್ದಾರೆ. 

Follow Us:
Download App:
  • android
  • ios