ಜರ್ಮನಿಯಲ್ಲಿ ಆಡಿ ಸಿಇಒ ಬಂಧನಡೀಸೆಲ್‌ಗೇಟ್‌ ಪ್ರಕರಣದಲ್ಲಿ ಪಾತ್ರದ ಆರೋಪಸಿಇಒ ರುಪರ್ಟ್‌ ಸ್ಟಾಡ್ಲರ್‌ರನ್ನು ಬಂಧಿಸಿದ ಪೊಲೀಸರು 

ಫ್ರಾಂಕ್‌ಫ‌ರ್ಟ್‌(ಜೂ.19): ವೋಕ್ಸ್‌ವ್ಯಾಗನ್‌ ಸಂಸ್ಥೆಯ ಡೀಸೆಲ್‌ಗೇಟ್‌ ಪ್ರಕರಣಕ್ಕೆ ಸ‌ಂಬಂಧಿಸಿದಂತೆ ಆಡಿ ಸಂಸ್ಥೆಯ ಸಿಇಒ ರುಪರ್ಟ್‌ ಸ್ಟಾಡ್ಲರ್‌ರನ್ನು ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಬಂಧಿಸಲಾಗಿದೆ. 

ಯುರೋಪ್‌ ಮಾರುಕಟ್ಟೆಯಲ್ಲಿ ಡೀಸೆಲ್‌ ಧೂಮ ಹೊರಸೂಸುವಿಕೆ ಪ್ರಮಾಣವನ್ನು ಸಾಫ್ಟವೇರ್ ಬಳಸಿ ವಂಚಿಸಿದ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿತ್ತು. ವೋಕ್ಸ್‌ವ್ಯಾಗನ್‌ ಅಂಗಸಂಸ್ಥೆಯಾಗಿರುವ ಆಡಿ ಸಾಫ್ಟವೇರ್‌ ವಿಭಾಗವೂ ಈ ಅಕ್ರಮದಲ್ಲಿ ಕೈಜೋಡಿಸಿತ್ತು ಎಂದು ಹೇಳಲಾಗಿದೆ. 

ಈ ಹಿನ್ನೆಲೆಯಲ್ಲಿ ಸಾಕ್ಷ್ಯ ನಾಶದ ಸಾಧ್ಯತೆಯಿರುವುದರಿಂದ ರುಪರ್ಟ್‌ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಟಾಡ್ಲರ್‌ ಮನೆಯ ಮೇಲೆ ದಾಳಿ ನಡೆಸಿದ ಮ್ಯೂನಿಚ್‌ ಪೊಲೀಸರು, ವಾಹನದ ಮಾಲಿನ್ಯ ಪ್ರದೂಷಣೆಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.