Asianet Suvarna News Asianet Suvarna News

ಎಟಿಎಂ ಇರಲಿವೆ: ಆದರೆ ನಿರ್ವಹಣಾ ವೆಚ್ಚ ಹೆಚ್ಚಳವಾಗಲಿದೆ!

ನಿರಾಳವಾಗಿರಿ ಎಟಿಎಂ ಕೇಂದ್ರಗಳು ಬಂದ್ ಆಗುವುದಿಲ್ಲ| ಆದರೆ ಎಟಿಎಂ ನಿರ್ವಹಣಾ ವೆಚ್ಚ ಹೆಚ್ಚಾಗುವ ಸಂಭವ| ಗ್ರಾಹಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು| ಆರ್ಬಿಐ ನೀತಿಗಳ ಪರಿಣಾಮವಾಗಿ ನಿರ್ವಹಣಾ ವೆಚ್ಚ ಹೆಚ್ಚು|  

ATM Charges Likely To Go Up
Author
Bengaluru, First Published Apr 12, 2019, 5:13 PM IST

ನವದೆಹಲಿ(ಏ.12): ದೇಶದಲ್ಲಿ ಸುಮಾರು ಶೇ.50ರಷ್ಟು ಎಟಿಎಂ ಕೇಂದ್ರಗಳು ಬಂದ್‌ ಆಗಲಿವೆ ಎಂಬ ಸುದ್ದಿ ಜನರನ್ನು ಆತಂಕಕ್ಕೆ ದೂಡಿತ್ತು. ಆದರೆ ಎಟಿಎಂ ಕೇಂದ್ರಗಳು ಬಂದ್ ಆಗುವುದಿಲ್ಲ ಎಂಬ ಹೊಸ ಸುದ್ದಿ ಈ ಆತಂಕವನ್ನು ದೂರ ಮಾಡಿದೆ.

ಆದರೆ ಎಟಿಎಂ ನಿರ್ವಹಣಾ ವೆಚ್ಚ ಹೆಚ್ಚಾಗುವ ಸಂಬಂಧವಿದ್ದು, ಇದು ಜನರನ್ನು ಚಿಂತೆಗೀಡು ಮಾಡಿದೆ. ಹೌದು, ಎಟಿಎಂ ನಿರ್ವಹಣಾ ವೆಚ್ಚ ಹೆಚ್ಚಾಗಲಿದ್ದು, ಇದು ಜನರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

2016ರಲ್ಲಿ ಜಾರಿಗೆ ತಂದ ನೋಟು ಅಮಾನ್ಯೀಕರಣದ ಬಳಿಕ ದೇಶದಲ್ಲಿ ಎಟಿಎಂ ಸಂಖ್ಯೆ ಕುಸಿಯಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಎಟಿಎಂ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಕಂಡು ಬರದಿದ್ದರೂ, ಅದರ ನಿರ್ವಹಣಾ ವೆಚ್ಚ ಆಗಾಗ ಹೆಚ್ಚಾಗುತ್ತಲೇ ಇದೆ.

ಅಲ್ಲದೇ ಎಟಿಎಂ ಮಶಿನ್ಗಳ ಸುರಕ್ಷತಾ ಕ್ರಮಗಳಲ್ಲಿ ಬದಲಾವಣೆ ಮಾಡಲು ಆರ್ಬಿಐ ಸೂಚಿಸಿದ ಮೇಲೆ ನಿರ್ವಹಣಾ ವೆಚ್ಚ ಮತ್ತಷ್ಟು ಹೆಚ್ಚಾಗಿದೆ.

ಒಟ್ಟು ಮೂರು ಪ್ರಕಾರದ ಎಟಿಎಂ ಕೇಂದ್ರಗಳಿದ್ದು, ಬ್ಯಾಂಕ್ಗಳ ಒಡೆತನದಲ್ಲಿರುವ ಎಟಿಎಂ, ಎಟಿಎಂ ಕಂಪನಿಗಳು ನಿರ್ವಹಿಸುವ ಎಟಿಎಂ ಕೇಂದ್ರಗಳು ಮತ್ತು ಸಣ್ಣ ನಗರಗಳಲ್ಲಿರುವ ಎಟಿಎಂ ಕೇಂದ್ರಗಳು ಎಂದು ಮೂರು ಪ್ರಕಾರಗಳಲ್ಲಿ ವಿಂಗಡಿಸಬಹುದಾಗಿದೆ. 

ಆರ್ಬಿಐ ಹೊಸ ನೀತಿಗಳ ಜಾರಿಯಿಂದಾಗಿ ಇವುಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದು, ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತಿದೆ.

Follow Us:
Download App:
  • android
  • ios