ಪ್ರಮುಖ ಬ್ಯಾಂಕುಗಳ ಎಟಿಎಂ ನಗದು ವಿತ್ ಡ್ರಾ ಮಿತಿ ಬದಲು?ಎಷ್ಟು ಉಚಿತ ವಹಿವಾಟು ನಡೆಸಬಹುದು?

*ಬಹುತೇಕ ಬ್ಯಾಂಕುಗಳ ಎಟಿಎಂನಲ್ಲಿ ಖಾತೆ ಹೊಂದಿರೋರಿಗೆ ತಿಂಗಳಿಗೆ ಆರಂಭಿಕ 5 ವಹಿವಾಟು ಉಚಿತ
*ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ತಿಂಗಳಿಗೆ ಮೆಟ್ರೋ ನಗರಗಳಲ್ಲಿ 3 ಹಾಗೂ ಗ್ರಾಮೀಣ ಭಾಗದಲ್ಲಿ 5 ವಹಿವಾಟು ಉಚಿತ
*ಪ್ರತಿ ಹೆಚ್ಚುವರಿ ಎಟಿಎಂ ವಹಿವಾಟಿನ ಮೇಲೆ ಪ್ರಸ್ತುತ 21ರೂ. ಶುಲ್ಕ 
 

ATM cash withdrawal limit for THESE major banks and their fees details here

Business Desk:ಈ ವರ್ಷ ಆರ್ ಬಿಐ ಬ್ಯಾಂಕುಗಳ ಅನುಮತಿ ಶುಲ್ಕಗಳನ್ನು ಹೆಚ್ಚಿಸಿದೆ. ಹೀಗಾಗಿ ಅನೇಕ ಬ್ಯಾಂಕುಗಳು ಎಟಿಎಂ ವಿತ್ ಡ್ರಾ ಶುಲ್ಕ ಹೆಚ್ಚಿಸಿವೆ. ಎಟಿಎಂ ಬಳಕೆಗೆ ಶುಲ್ಕವನ್ನು ಅನೇಕ ಬ್ಯಾಂಕುಗಳಲ್ಲಿ ಬದಲಿಸಲಾಗಿದೆ. ಎಟಿಎಂ ಸೇವೆಗಳ ಬಳಕೆಗೆ ಗ್ರಾಹಕರು ಹೆಚ್ಚಿನ ಹಣ ಪಾವತಿಸಬೇಕು. ಏಕೆಂದರೆ ಎಲ್ಲ ಬ್ಯಾಂಕುಗಳು ಅವುಗಳ ಬಳಕೆ ಮೇಲೆ ನಿರ್ಬಂಧಗಳನ್ನು ವಿಧಿಸಿವೆ.  ಎಲ್ಲ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡುದಾರರಿಗೆ ತಿಂಗಳಲ್ಲಿ ಎಟಿಎಂ ಉಚಿತ ವಹಿವಾಟುಗಳಿಗೆ  ನಿಗದಿತ ಮಿತಿ ವಿಧಿಸಲಾಗಿದ್ದು, ಅದಕ್ಕೂ ಮೀರಿದ ವಹಿವಾಟಿಗೆ ನಿರ್ದಿಷ್ಟ ಶುಲ್ಕ ಪಾವತಿಸಬೇಕು. ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮದ ಪ್ರಕಾರ ನೀವು ಖಾತೆ ಹೊಂದಿರುವ ಬ್ಯಾಂಕ್  ಎಟಿಎಂನಲ್ಲಿ ತಿಂಗಳಿಗೆ ಆರಂಭಿಕ 5 ವಹಿವಾಟು  (Transaction) ಉಚಿತವಾಗಿದೆ. ಇನ್ನು ನಿಮ್ಮ ಬ್ಯಾಂಕ್ ಹೊರತುಪಡಿಸಿ ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ತಿಂಗಳಿಗೆ ಮೆಟ್ರೋ ನಗರಗಳಲ್ಲಿ (Metro cities) ಮೂರು ಬಾರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಐದು ಬಾರಿ ಉಚಿತ ವಹಿವಾಟು ನಡೆಸಬಹುದು. ಇದ್ರಲ್ಲಿ ಹಣಕಾಸು ಹಾಗೂ ಹಣಕಾಸೇತರ ವ್ಯವಹಾರ ಎರಡೂ ಸೇರಿದೆ. ಈ ಮಿತಿಗಳನ್ನು ಮೀರಿದ್ರೆ ಪ್ರತಿ ಹೆಚ್ಚುವರಿ ವಹಿವಾಟಿನ  ಮೇಲೆ ಪ್ರಸ್ತುತ 21ರೂ. ಶುಲ್ಕ ವಿಧಿಸಲಾಗುತ್ತಿದೆ. ಈ ಹಿಂದೆ ಈ ಶುಲ್ಕ 20ರೂ. ಇತ್ತು. ಆದ್ರೆ 2022ರ ಜನವರಿ 1ರಿಂದ ನಗದು ಹಾಗೂ ನಗದುರಹಿತ ಎಟಿಎಂ ವ್ಯವಹಾರಗಳು ನಿಗದಿತ ಮಾಸಿಕ ಮಿತಿಯನ್ನು (limit) ಮೀರಿದ್ರೆ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ಆರ್ ಬಿಐ ಅವಕಾಶ ನೀಡಿತ್ತು. 

ಎಸ್ ಬಿಐ ಎಟಿಎಂ ಶುಲ್ಕ
ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಎಸ್ ಬಿಐ (SBI),ಮೆಟ್ರೋ ನಗರಗಳನ್ನು ಹೊರತುಪಡಿಸಿ ಪ್ರತಿ ಪ್ರದೇಶದಲ್ಲೂ ತಿಂಗಳಿಗೆ 5 ಉಚಿತ ಎಟಿಎಂ ವಿತ್ ಡ್ರಾಗಳಿಗೆ ಅವಕಾಶ ನೀಡಿದೆ. ಮೆಟ್ರೋ ನಗರಗಳಲ್ಲಿ ತಿಂಗಳಿಗೆ ಮೂರು ಬಾರಿ ಎಟಿಎಂ ಉಚಿತ ವಿತ್ ಡ್ರಾಗೆ ಅವಕಾಶವಿದೆ.  ಎಸ್ ಬಿಐ ಬ್ಯಾಂಕಿನಲ್ಲಿ ಈ ಮಿತಿ ಮೀರಿದ ಪ್ರತಿ ಎಟಿಎಂ ವಿತ್ ಡ್ರಾಗೆ 5ರೂ. ಹಾಗೂ  ಎಸ್ ಬಿಐ ಹೊರತುಪಡಿಸಿ ಇತರ ಬ್ಯಾಂಕುಗಳಲ್ಲಿ ಪ್ರತಿ ವಿತ್ ಡ್ರಾ ಮೇಲೆ 10ರೂ. ಶುಲ್ಕ ವಿಧಿಸಲಾಗುತ್ತದೆ. ದಿನದ ವಹಿವಾಟಿನ ಕನಿಷ್ಠ ಹಾಗೂ ಗರಿಷ್ಠ ಮಿತಿಗಳನ್ನು ಕ್ರಮವಾಗಿ 100ರೂ. ಹಾಗೂ 20,000ರೂ. ನಿಗದಿಪಡಿಸಲಾಗಿದೆ.

ಡೀಸೆಲ್, ಜೆಟ್ ಇಂಧನ ಮೇಲಿನ ವಿಂಡ್ ಫಾಲ್ ತೆರಿಗೆ ಹೆಚ್ಚಳ; ದೇಶೀಯ ಕಚ್ಚಾ ತೈಲ ಮೇಲಿನ ತೆರಿಗೆ ಕಡಿತ

ಪಂಜಾಬ್ ನ್ಯಾಷನಲ್ ಬ್ಯಾಂಕ್ 
ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಥವಾ ಪಿಎನ್ ಬಿ (PNB) ಪ್ರಮುಖ ನಗರಗಳಲ್ಲಿ ತಿಂಗಳಿಗೆ 3 ಉಚಿತ ಎಟಿಎಂ ವಿತ್ ಡ್ರಾಗಳಿಗೆ ಅವಕಾಶ ಕಲ್ಪಿಸಿದೆ. ಇನ್ನು ಇತರ ಪ್ರದೇಶಗಳಲ್ಲಿ ಎಸ್ ಬಿಐ ಮಾದರಿಯಲ್ಲೇ ಎಟಿಎಂ 3 ಉಚಿತ ವಹಿವಾಟುಗಳಿಗೆ ಅವಕಾಶ ಕಲ್ಪಿಸಿದೆ. ಇದಾದ ಬಳಿಕ ಬ್ಯಾಂಕ್ ಎಟಿಎಂ ವಿತ್ ಡ್ರಾಗಳ ಮೇಲೆ  10ರೂ. ಶುಲ್ಕ ವಿಧಿಸಿದೆ. ಬ್ಯಾಂಕಿನ ನಿತ್ಯದ ವಹಿವಾಟು ಮಿತಿ ಕ್ಲಾಸಿಕ್ ಕಾರ್ಡ್ ಗಳ ಬಳಕೆದಾರರಿಗೆ 25,000ರೂ. ಹಾಗೂ ಗೋಲ್ಡ್ ಹಾಗೂ ಪ್ಲಾಟಿನಂ ಕಾರ್ಡ್ ಗಳನ್ನು ಹೊಂದಿರೋರಿಗೆ 50,000ರೂ.

ಎಚ್ ಡಿಎಫ್ ಸಿ ಬ್ಯಾಂಕ್ 
ಭಾರತದಲ್ಲಿ ಎಚ್ ಡಿಎಫ್ ಸಿ (HDFC) ಬ್ಯಾಂಕ್  ತಿಂಗಳಿಗೆ 5 ಉಚಿತ ವಹಿವಾಟುಗಳಿಗೆ (transactions) ಅವಕಾಶ ಕಲ್ಪಿಸಿದೆ. ಇನ್ನು ಪ್ರಮುಖ ನಗರಗಳಲ್ಲಿ ಮೂರು ಉಚಿತ ವಹಿವಾಟುಗಳಿಗೆ ಅವಕಾಶ ಕಲ್ಪಿಸಿದೆ. ಕಾರ್ಡ್ ವಿಧವನ್ನು ಆಧರಿಸಿ ವಿತ್ ಡ್ರಾ ಮಿತಿ 10,000ರೂ.ನಿಂದ 25,000ರೂ. ತನಕವಿದೆ.  ಇನ್ನು ಅಂತಾರಾಷ್ಟ್ರೀಯ ಎಟಿಎಂ ವಹಿವಾಟುಗಳಿಗೆ ಬ್ಯಾಂಕ್ 125 ರೂ. ಹೆಚ್ಚುವರಿ ಶುಲ್ಕ ವಿಧಿಸುತ್ತದೆ.

30 ರೂ. ಪಾಪ್‌ಕಾರ್ನ್‌ಗೆ PVRನಲ್ಲಿ 300 ರೂ. ಕೊಡಬೇಕು ಏಕೆ?

ಐಸಿಐಸಿಐ ಬ್ಯಾಂಕ್ 
ಐಸಿಐಸಿಐ ಬ್ಯಾಂಕ್ (ICICI Bank) ಕೂಡ ಇತರ ಬ್ಯಾಂಕುಗಳಂತೆ ಉಚಿತ ವಹಿವಾಟುಗಳಿಗೆ 3 ಹಾಗೂ 5ರ ನಿಯಮಗಳನ್ನು ಪಾಲಿಸುತ್ತದೆ. ಎಟಿಎಂ ವಿತ್ ಡ್ರಾಗಳಿಗೆ ಹೆಚ್ಚುವರಿ ಬ್ಯಾಂಕ್ ಶುಲ್ಕ 21ರೂ. ವಿಧಿಸಲಾಗುತ್ತದೆ. ಐಸಿಐಸಿಐ ಬ್ಯಾಂಕ್ ಹೊರತುಪಡಿಸಿ ಇತರ ಎಟಿಎಂಗಳಲ್ಲಿ ವಿತ್ ಡ್ರಾಗೆ 1,000 ರೂ.ಗೆ  5ರೂ. ಅಥವಾ 25,000ರೂ.ಗೆ  150ರೂ. ಇದರಲ್ಲಿ ಯಾವುದು ಹೆಚ್ಚೋ ಅದನ್ನು ವಿಧಿಸಲಾಗುತ್ತದೆ. ಎಟಿಎಂ ನಿತ್ಯದ ವಹಿವಾಟಿನ ಮಿತಿ 50,000ರೂ.

ಆಕ್ಸಿಸ್ ಬ್ಯಾಂಕ್
ಆಕ್ಸಿಸ್ ಬ್ಯಾಂಕ್ ಕೂಡ ಉಚಿತ ಎಟಿಎಂ ವಿತ್ ಡ್ರಾಗಳಿಗೆ  3 ಹಾಗೂ 5 ನಿಯಮಗಳನ್ನು ಪಾಲಿಸುತ್ತದೆ. ಇದಾದ ಬಳಿಕ ಬ್ಯಾಂಕ್ ಶೇ.21 ವಿತ್ ಡ್ರಾ ಶುಲ್ಕ ವಿಧಿಸುತ್ತದೆ. ಆಕ್ಸಿಸ್ ಬ್ಯಾಂಕ್ ಎಟಿಎಂನಿಂದ ಒಂದು ದಿನಕ್ಕೆ ಗರಿಷ್ಠ 40,000ರೂ. ಡ್ರಾ ಮಾಡಬಹುದು.
 

Latest Videos
Follow Us:
Download App:
  • android
  • ios