ಡೀಸೆಲ್, ಜೆಟ್ ಇಂಧನ ಮೇಲಿನ ವಿಂಡ್ ಫಾಲ್ ತೆರಿಗೆ ಹೆಚ್ಚಳ; ದೇಶೀಯ ಕಚ್ಚಾ ತೈಲ ಮೇಲಿನ ತೆರಿಗೆ ಕಡಿತ

*ದೇಶೀಯವಾಗಿ ಉತ್ಪಾದಿಸಲ್ಪಟ್ಟ ಕಚ್ಚಾತೈಲದ ಮೇಲಿನ ತೆರಿಗೆ ಪ್ರತಿ ಟನ್ ಗೆ 17,750ರೂ.ನಿಂದ 13,000ರೂ.ಗೆ ಇಳಿಕೆ 
*ಡೀಸೆಲ್ ರಫ್ತಿನ ಮೇಲಿನ ಅಬಕಾರಿ ಸುಂಕ 5ರೂ.ನಿಂದ 7ರೂ.ಗೆ ಹೆಚ್ಚಳ
*ಪೆಟ್ರೋಲ್ ರಫ್ತಿನ ಮೇಲೆ ಯಾವುದೇ ಅಬಕಾರಿ ಸುಂಕ ವಿಧಿಸಿಲ್ಲ

Govt Hikes Windfall Tax on Diesel ATF Exports Cuts Cess on Domestic Crude Oil

ನವದೆಹಲಿ (ಆ.20): ಕಚ್ಚಾ ತೈಲ, ಡೀಸೆಲ್ ಹಾಗೂ ಜೆಟ್ ಇಂಧನ (ಎಟಿಎಫ್) ಮೇಲೆ ಹೊಸದಾಗಿ ವಿಧಿಸಲಾಗಿದ್ದ ವಿಂಡ್ ಫಾಲ್ ತೆರಿಗೆಯನ್ನು ಸರ್ಕಾರ ಮತ್ತೊಮ್ಮೆ ಪರಿಷ್ಕರಿಸಿದೆ. ಗುರುವಾರ ಸರ್ಕಾರ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ದೇಶೀಯವಾಗಿ ಉತ್ಪಾದಿಸಲ್ಪಟ್ಟ ಕಚ್ಚಾತೈಲದ ಮೇಲಿನ ತೆರಿಗೆಯನ್ನು ಪ್ರತಿ ಟನ್ ಗೆ 17,750ರೂ.ನಿಂದ 13,000ರೂ.ಗೆ ಇಳಿಕೆ ಮಾಡಿದೆ. ಇನ್ನು ಜೆಟ್ ಇಂಧನ ಮೇಲಿನ ರಫ್ತು ತೆರಿಗೆಗಳನ್ನು ಶೂನ್ಯದಿಂದ ಲೀಟರ್ ಗೆ 2ರೂ. ಹೆಚ್ಚಳ ಮಾಡಿದೆ. ಇದರೊಂದಿಗೆ ಡೀಸೆಲ್ ರಫ್ತಿನ ಮೇಲಿನ ಅಬಕಾರಿ ಸುಂಕವನ್ನು ಈ ಹಿಂದಿನ 5ರೂ.ನಿಂದ 7ರೂ.ಗೆ ಹೆಚ್ಚಳ ಮಾಡಿದೆ. ಆದರೆ, ಪೆಟ್ರೋಲ್ ರಫ್ತಿನ ಮೇಲೆ ಯಾವುದೇ ಅಬಕಾರಿ ಸುಂಕ ವಿಧಿಸಿಲ್ಲ. ಯಾವುದೇ ಕೈಗಾರಿಕೆಗಳು ಅನಿರೀಕ್ಷಿತ ಮಟ್ಟದ ಲಾಭ ಗಳಿಸಿದಾಗ ಸರ್ಕಾರ ಅವುಗಳ ಮೇಲೆ ವಿಧಿಸುವ ಒಂದು ವಿಧದ ತೆರಿಗೆಯೇ ವಿಂಡ್ ಫಾಲ್ ತೆರಿಗೆ (windfall tax).ಭಾರತವು ಜುಲೈ 1ರಂದು ಕಂಪನಿಗಳ ಮೇಲೆ ವಿಂಡ್ ಫಾಲ್ ತೆರಿಗೆ ವಿಧಿಸಿತ್ತು. ಆ ಮೂಲಕ ಇಂಧನ ಕಂಪನಿಗಳ ಸೂಪರ್ ನಾರ್ಮಲ್ ಲಾಭಗಳ ಮೇಲೆ ತೆರಿಗೆಗಳನ್ನು ವಿಧಿಸುವ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ. ಆದರೆ, ಅಂತಾರಾಷ್ಟ್ರೀಯ ಇಂಧನ ಬೆಲೆಗಳು ಆ ಬಳಿಕ ತಗ್ಗಿದ್ದು, ಇದ್ರಿಂದ ತೈಲ ಉತ್ಪಾದಕರು ಹಾಗೂ ರಿಫೈನರಿಗಳು ಇಬ್ಬರ ಲಾಭದ ಮಾರ್ಜಿನ್ ಅನ್ನು ತಗ್ಗಿಸಿತು ಕೂಡ. 

ಜುಲೈ 1ರಂದು ಪೆಟ್ರೋಲ್ (Petrl) ಹಾಗೂ ಎಟಿಎಫ್ (ATF) ಮೇಲೆ ಪ್ರತಿ ಲೀಟರ್ ಗೆ 6ರೂ. ರಫ್ತು ಸುಂಕ  ವಿಧಿಸಲಾಗಿತ್ತು.ಡೀಸೆಲ್ (Diesel) ರಫ್ತಿನ (Export) ಮೇಲೆ ಪ್ರತಿ ಲೀಟರ್ ಗೆ 13ರೂ. ತೆರಿಗೆ ವಿಧಿಸಲಾಗಿತ್ತು. ದೇಶೀಯ ಕಚ್ಚಾ ತೈಲ ಉತ್ಪಾದನೆ ಮೇಲೆ ಪ್ರತಿ ಟನ್ ಗೆ  23,250ರೂ. ವಿಂಡ್ ಫಾಲ್ (Windfall) ಲಾಭ (Profit) ತೆರಿಗೆ ವಿಧಿಸಲಾಗಿತ್ತು. ವಿಂಡ್ ಫಾಲ್ ತೆರಿಗೆ ವಿಧಿಸುವ ಸಂದರ್ಭದಲ್ಲಿ ಸರ್ಕಾರ, ರಿಫೈನರಿಗಳು (Refineries) ಸ್ಥಳೀಯ ಬೇಡಿಕೆಗಳನ್ನು ಪೂರೈಸುವ ಬದಲು ರಫ್ತಿಗೆ (Export) ಹೆಚ್ಚಿನ ಮಹತ್ವ ನೀಡುತ್ತಿವ. ಹೀಗಾಗಿ ದೇಶೀಯ ಪೂರೈಕೆಗಳನ್ನು ಹೆಚ್ಚಿಸಲು ಈ ನಿರ್ಧಾರ ಕೈಗೊಂಡಿರೋದಾಗಿ ಸರ್ಕಾರ ತಿಳಿಸಿದೆ. 

30 ರೂ. ಪಾಪ್‌ಕಾರ್ನ್‌ಗೆ PVRನಲ್ಲಿ 300 ರೂ. ಕೊಡಬೇಕು ಏಕೆ?

ಈ ಹಿಂದಿನ ಪರಿಶೀಲನಾ ಸಭೆಯಲ್ಲಿ ಪೆಟ್ರೋಲ್ (Petrol) ಹಾಗೂ ಎಟಿಎಫ್ (ATF) ಮೇಲಿನ ರಫ್ತು ಸುಂಕವನ್ನು (Export duty) ಸರ್ಕಾರ ತೆಗೆದಿತ್ತು. ಕೇಂದ್ರ ತಿಂಗಳ ಹಿಂದೆ ಗ್ಯಾಸೋಲಿನ ರಫ್ತಿನ ಮೇಲಿನ ತೆರಿಗೆ ಹಿಂಪಡೆದಿತ್ತು. ಇನ್ನು ಇತರ ಇಂಧನಗಳ ಮೇಲಿನ ವಿಂಡ್ ಫಾಲ್ ತೆರಿಗೆಗಳನ್ನು ವಿಧಿಸಿದ ಮೂರು ವಾರಗಳ ಬಳಿಕ ಕಡಿತಗೊಳಿಸಿದೆ. ಡೀಸೆಲ್ ಹಾಗೂ ವಿಮಾನ ಇಂಧನ ಶಿಪ್ಪಮೆಂಟ್ ಗಳ ಮೇಲಿನ ವಿಂಡ್ ಫಾಲ್ ತೆರಿಗೆಯನ್ನು ಪ್ರತಿ ಲೀಟರ್ ಗೆ 2ರೂ. ಕಡಿತಗೊಳಿಸಲಾಗಿದೆ. ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಾರ ಹೊಸ ದರಗಳು ಆಗಸ್ಟ್ 19ರಿಂದ ಜಾರಿಗೆ ಬರಲಿವೆ.

ಮುಂಗಡ ಪಾವತಿಸಿದ ಕೆಲವೇ ಗಂಟೆಗಳಲ್ಲಿ ಸ್ಪೆಕ್ಟ್ರಂ ಹಂಚಿಕೆ ಪತ್ರ ಕೈಗೆ; ಟೆಲಿಕಾಂ ಇಲಾಖೆ ಕಾರ್ಯವೈಖರಿಗೆ ಮಿತ್ತಲ್ ಪ್ರಶಂಸೆ

ಜಾಗತಿಕ ಕಚ್ಚಾ ತೈಲ ಹಾಗೂ ಉತ್ಪನ್ನ ಬೆಲೆಗಳ ಹೆಚ್ಚಳದ ಹಿನ್ನೆಲೆಯಲ್ಲಿ ದೇಶೀಯ ಕಚ್ಚಾ ತೈಲ ಉತ್ಪಾದಕರು ಹಾಗೂ ರಿಫೈನರಿಗಳ ವಿಂಡ್ ಫಾಲ್ ಗಳಿಕೆಯ ಆಧಾರದಲ್ಲಿ ತೆರಿಗೆ ಪರಿಚಯಿಸಲಾಯಿತು. ಗ್ರಾಹಕರಿಗೆ ನಿರಾಳತೆ ಒದಗಿಸುವ ಹಿನ್ನೆಲೆಯಲ್ಲಿ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಮೇಲಿನ ಅಬಕಾರಿ ಸುಂಕವನ್ನು (Excise duty) ಸರ್ಕಾರ ಕಡಿತಗೊಳಿಸಿತ್ತು. ಆ ಹಣವನ್ನು ಮರುಹೊಂದಾಣಿಕೆ ಮಾಡಲು ವಿಂಡ್ ಫಾಲ್ ತೆರಿಗೆಯನ್ನು (windfall Tax) ವಿಧಿಸಲಾಗಿದೆ ಎಂದು ಹೇಳಲಾಗಿದೆ.
 

Latest Videos
Follow Us:
Download App:
  • android
  • ios