ಬೆಂಗಳೂರು (ಜು.31): ಏಷ್ಯಾದ ಪ್ರಮುಖ ಪೈಂಟ್ ತಯಾರಕ ಸಂಸ್ಥೆ ನಿಪ್ಪಾನ್ ಪೈಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (ಅಲಂಕಾರ ವಿಭಾಗ), ಕೈಗೆಟುಕುವ ಬೆಲೆಯಲ್ಲಿ ಅಧಿಕ ಹೊಳಪಿರುವ ಒಳಾಂಗಣ ಎಮಲ್ಷನ್ ಪೈಂಟ್ ಬ್ರೀಜಾ ಸ್ಟಾರ್ ಅನ್ನು ಬಿಡುಗಡೆ ಮಾಡಿತು. 

ಈ ವಿನೂತನ ಪೈಂಟ್ ಅನ್ನು ಶ್ರೀ ಪಡಸಲಿಗಿ ವಿನಯ್ ಜಯತೀರ್ಥಿ- ಪ್ರ.ವ್ಯ (ಮಾರಾಟ), ಕರ್ನಾಟಕ, ಜಿ. ಮೃತ್ಯುಂಜಯ ಶರದ್-ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ, ಶ್ರೀ ನಾಗರಾಜ್ ಕಾಶೀನಾಥ್ ಗೋಖಲೆ-ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ , ನಿಪ್ಪಾನ್ ಪೈಂಟ್(ಇಂಡಿಯಾ) ಪ್ರೈವೇಟ್ ಲಿಮಿಟೆಡ್ (ಅಲಂಕಾರ ವಿಭಾಗ), ಅವರು ಬಿಡುಗಡೆ ಮಾಡಿದರು. 

"

ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕನ್ನಡದ ಬಿಗ್ ಬಾಸ್ ಖ್ಯಾತಿಯ ನಟಿ ದೀಪಿಕಾ ದಾಸ್ ನಿಪ್ಪಾನ್ ಪೈಂಟ್ ಅವರ ಹೊಸ ಉತ್ಪನ್ನವನ್ನು ಅನಾವರಣಗೊಳಿಸಿದರು. ಈ ಮಧ್ಯೆ, ಶ್ರೀ ಮಹೇಶ್ ಎಸ್. ಆನಂದ್, ಅಧ್ಯಕ್ಷರು, ಶ್ರೀ ಅಂಕುರ್ ಭಾರಧ್ವಾಜ್- ನಿರ್ದೇಶಕರು(ಮಾರಾಟ ಮತ್ತು ಶ್ರೀ ಮಾರ್ಕ್ ಟೈಟಸ್-ನಿರ್ದೇಸಕರು, ಮಾರ್ಕೆಟೀಂಗ್ ನಿಪ್ಪಾನ್ ಪೈಂಟ್(ಇಂಡಿಯಾ) ಪ್ರೈವೇಟ್ ಲಿಮಿಟೆಡ್ (ಅಲಂಕಾರ ವಿಭಾಗ), ಸಹ ವಾಸ್ತವವಾಗಿ ಬಿಡುಗಡೆಯಾದ ಸಂದರ್ಭದಲ್ಲಿ ಹಾಜರಿದ್ದರು.

ಕಟ್ಟುನಿಟ್ಟಿನ ಪರೀಕ್ಷೆಗಳನ್ನಾಧರಿಸಿ ವರ್ಷಗಳ ಕೈಗಾರಿಕಾ ಸಂಶೋಧನೆಯ ನಂತರ ನಿಪ್ಪಾನ್ ಪೈಂಟ್‍ನ ಆರ್ ಮತ್ತು ಡಿ ವಿಭಾಗವು ಬ್ರೀಜ್ ಸ್ಟಾರ್ ಹೊರತರುವಲ್ಲಿ ಯಶಸ್ವಿಯಾಗಿದೆ. ಗ್ರಾಹಕರ ಅವಶ್ಯಕತೆ ಮತ್ತು ಭೌಗೋಳಿಕ ಪರಿಸರದ ಆಧರಿಸಿ ಸಂಶೋಧನೆ ನಡೆಸಿ ಹೊಸ ಉತ್ಪನ್ನಗಳನ್ನು ತರುವುದು ನಿಪ್ಪಾನ್ ಪೈಂಟ್‍ನ ಆದ್ಯತೆಯಾಗಿದೆ. ಗ್ರಾಹಕರಿಗೆ ನವಿರಾದ ಮತ್ತು ಅಧಿಕ ಹೊಳಪು ಮತ್ತು ಹೆಚ್ಚು ವಿಸ್ತೀರ್ಣ ನೀಡುವ ಗೋಡೆಗಳನ್ನು ಸೃಷ್ಟಿಸಿಕೊಳ್ಳಲು ಸಹಾಯವಾಗಲೆಂಬ ದೃಢ ಸಂಕಲ್ಪದೊಂದಿಗೆ ಬ್ರೀಜ್ ಸ್ಟಾರ್ ಅಭಿವೃದ್ಧಿಪಡಿಸಲಾಗಿದೆ. ಈ ನೂತನ ಪೈಂಟ್, 3 ವರ್ಷಗಳ ಕಾರ್ಯದಕ್ಷತೆ ವಾರಂಟಿಯೊಂದಿಗೆ ಬರುತ್ತದೆ.

ಪಿಗ್ಮೆಂಟ್ ಸಂರಚನೆ ಹಾಗೂ ಆಧುನಿಕ ಪಾಲಿಮರ್ ತಂತ್ರಜ್ಞಾನ ಆಧರಿಸಿ ತಯಾರಿಸಲಾದ ಈ ಪೇಂಟ್ ಗೋಡೆಗಳಿಗೆ ವಿನೂತನ ನೋಟವನ್ನು ಒದಗಿಸುತ್ತದೆ. ಜೊತೆಗೆ ಈ ನೂತನ ಬಣ್ಣ, ಆರೋಗ್ಯಕರ ಒಳಾಂಗಣ ಸ್ಥಳಾವಕಾಶ ಮೂಡಿಸಿ ಮನೆಗೆ ಬಣ್ಣ ಬಳಿದ ಕೂಡಲೇ ಮಾಲೀಕರು ಗೃಹಪ್ರವೇಶ ಮಾಡುವಂತೆ ಪ್ರಚೋದಿಸುತ್ತದೆ. 

ಮಾರುಕಟ್ಟೆಯಲ್ಲಿ ಇಂತಹ ವಿನೂತನ ಉತ್ಪನ್ನದ ಅವಶ್ಯಕತೆ ಬಗ್ಗೆ ವಿವರಿಸುತ್ತ ಶ್ರೀ ಮಹೇಶ್ ಎಸ್. ಆನಂದ್, ಅಧ್ಯಕ್ಷರು, ನಿಪ್ಪಾನ್ ಪೈಂಟ್(ಇಂಡಿಯಾ) ಪ್ರೈವೇಟ್ ಲಿಮಿಟೆಡ್ (ಅಲಂಕಾರ ವಿಭಾಗ), ಮಾತನಾಡಿ 'ವಿನೂತನ ಹಾಗೂ ಮಾರ್ಗಪ್ರವರ್ತಕ ಉತ್ಪನ್ನಗಳನ್ನು ಹಾಗೂ ಸೇವೆಗಳನ್ನು ಒದಗಿಸುವ ಮೂಲಕ ಪೈಂಟ್ ಉದ್ಯಮದಲ್ಲಿ ಕ್ರಾಂತಿ ಮೂಡಿಸುವುದು, ಬ್ರೀಜ್ ಸ್ಟಾರ್ ಬಿಡುಗಡೆಯೊಂದಿಗೆ, ಗ್ರಾಹಕರಿಗೆ, ಅವರ ಗೋಡೆಗಳಿಗೆ ಅತ್ಯಧಿಕ ಹೊಳಪು ನೀಡುವ ಮತ್ತು ಕೈಗೆಟುಕುವ ಬೆಲೆಯಲ್ಲಿ ಸಿಗುವ ಪೈಂಟ್ ಒದಗಿಸುವುದು ನಮ್ಮ ಗುರಿ. ಬ್ರೀಜ್ ಸ್ಟಾರ್ ಒಳಾಂಗಣ ಎಮಲ್ಷನ್ ಹಿಂದೆ ಅನೇಕ ವರ್ಷಗಳ ಮಾರುಕಟ್ಟೆ ಸಂಶೋಧನೆ ಮತ್ತು ಕಲಿಕೆಗಳಿವೆ. ಇದರ ದುಬಾರಿಯಲ್ಲದ ಬೆಲೆ ಮತ್ತು ಗುಣಲಕ್ಷಣಗಳು ಈ ಹೊಸ ಪೈಂಟ್‍ಗೆ ಮಾರುಕಟ್ಟೆಯಲಿ ತುಂಬಾ ಬೇಡಿಕೆ ಬರುತ್ತದೆ ಎಂಬ ವಿಶ್ವಾಸ ನಮಗಿದೆ,' ಎಂದರು.

ನಿಧಾನವಾಗಿ ಸುಸ್ಥಿತಿಗೆ ಬರುತ್ತಿರುವ ಮಾರುಕಟ್ಟೆಯ ವಾತಾವರಣದ ಮಧ್ಯೆ ನಿಪ್ಪಾನ್ ಪೈಂಟ್‍ನ ಬ್ರೀಜ್ ಸ್ಟಾರ್, ಕರ್ನಾಟಕದ ಡೀಲರ್ ಪಾಲುದಾರರ ಮೂಲಕ ಮಾರುಕಟ್ಟೆಯಲ್ಲಿ ದೊರೆಯಲಿದೆ.

ನಿಪ್ಪಾನ್‍ನ ಬ್ರೀಜ್ ಸ್ಟಾರ್ ಬಗ್ಗೆ ಹೆಚ್ಚು ತಿಳಿಯಲು ಭೇಟಿ ನೀಡಿ: https://nipponpaint.co.in/

ನಿಪ್ಪಾನ್ ಪೇಂಟ್ ಬಗ್ಗೆ:
- ಜಪಾನ್‍ನಲ್ಲಿ ಸ್ಥಾಪನೆಯಾದ ನಿಪ್ಪಾನ್ ಪೇಂಟ್ 140 ವರ್ಷಗಳ ಅನುಭವವನ್ನು ಹೊಂದಿದ್ದು ಏಷ್ಯಾದ ಪ್ರಥಮ ಬಣ್ಣ ತಯಾರಕರಾಗಿರದೇ, ವಿಶ್ವದ ಪ್ರಮುಖ ಬಣ್ಣ ತಯಾರಕರಲ್ಲಿ ಒಂದಾಗಿದೆ. 
- ನಿಪ್ಪಾನ್ ಪೇಂಟ್ ಅಲಂಕಾರಿಕ, ಕೈಗಾರಿಕಾ ಮತ್ತು ವಾಹನ ಕ್ಷೇತ್ರಗಳಿಗೆ ಉತ್ತಮ ಗುಣಮಟ್ಟದ ಬಣ್ಣಗಳು ಮತ್ತು ಲೇಪನಗಳನ್ನು ಉತ್ಪಾದಿಸುತ್ತದೆ. 
- ವರ್ಷಗಳಲ್ಲಿ, ನಿಪ್ಪಾನ್ ಪೇಂಟ್ ತನ್ನ ಉತ್ಪನ್ನಗಳನ್ನು ಅದ್ಭುತ ಬಣ್ಣ ತಂತ್ರಜ್ಞಾನದ ಮೂಲಕ ಪರಿಪೂರ್ಣಗೊಳಿಸಿದ್ದು, ನಾವೀನ್ಯತೆ ಮತ್ತು ಪರಿಸರ ಸ್ನೇಹಪರತೆಗೆ ಒತ್ತು ನೀಡಿದೆ. 
- ಪರಿಸರವನ್ನು ರಕ್ಷಿಸುವಾಗ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಸುಧಾರಿತ ಉತ್ಪನ್ನಗಳನ್ನು ರಚಿಸುವುದು ನಿಪ್ಪಾನ್ ಪೇಂಟ್‍ನ ಉದ್ದೇಶ. ನವೀನ ತಂತ್ರಜ್ಞಾನದ ಮೂಲಕ, ನಿಪ್ಪಾನ್ ಪೇಂಟ್ ತನ್ನ ಗ್ರಾಹಕರಿಗೆ ಮತ್ತು ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತದೆ. 

ಎಲ್ಲೆಲ್ಲಿವೆ ನಿಪ್ಪಾನ್ ಕಂಪನಿಗಳು?
ಕಂಪನಿ ಮತ್ತು ಅದರ ಅಂಗಸಂಸ್ಥೆಗಳು ಜಪಾನ್, ಸಿಂಗಾಪುರ್, ಮಲೇಷ್ಯಾ, ದಕ್ಷಿಣ ಕೊರಿಯಾ, ಚೀನಾ, ಭಾರತ, ಪಾಕಿಸ್ತಾನ, ಯುನೈಟೆಡ್ ಕಿಂಗ್‍ಡಮ್, ಜರ್ಮನಿ, ಗ್ರೀಸ್ ಮತ್ತು ರಷ್ಯಾ ಸೇರಿ 31 ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿವೆ.