ಏಷ್ಯನ್‌ ಪೇಂಟ್ಸ್‌ ಸಹಸಂಸ್ಥಾಪಕ ಅಶ್ವಿನ್‌ ದಾನಿ ನಿಧನ

ಇಂದು ಜಗತ್ತಿನ 16 ದೇಶಗಳಲ್ಲಿ ತನ್ನ ನೆಲೆ ಹೊಂದಿರುವ ಭಾರತೀಯ ಮೂಲದ ಪೇಂಟ್ಸ್‌ ದೈತ್ಯ ಏಷ್ಯನ್‌ ಪೇಂಟ್ಸ್‌ನ ಸಹ ಸಂಸ್ಥಾಪಕ, 7.7 ಬಿಲಿಯನ್‌ ಯುಎಸ್‌ ಡಾಲರ್‌ ಮೌಲ್ಯದ ಒಡೆಯ ಅಶ್ವಿನ್‌ ದಾನಿ ತಮ್ಮ 79ನೇ ವಯಸ್ಸಿನಲ್ಲಿ ಗುರುವಾರ ನಿಧನರಾದರು.
 

Asian Paints Co Founder  Ashwin Dani passes away at the age of 79 san

ನವದೆಹಲಿ (ಸೆ.28): ಏಷ್ಯನ್ ಪೇಂಟ್ಸ್‌ನ ಸಹ ಸಂಸ್ಥಾಪಕ ಮತ್ತು ಕಂಪನಿಯ ಕಾರ್ಯನಿರ್ವಾಹಕ ಅಲ್ಲದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಕುಟುಂಬದ ಎರಡನೇ ತಲೆಮಾರಿನ ವಂಶಸ್ಥರಾದ ಅಶ್ವಿನ್ ದಾನಿ ಅವರು ಸೆಪ್ಟೆಂಬರ್ 28 ರಂದು ತಮ್ಮ 79 ನೇ ವಯಸ್ಸಿನಲ್ಲಿ ನಿಧನರಾದರು. ದಾನಿ ಅವರು 1968 ರಲ್ಲಿ ಏಷ್ಯನ್ ಪೇಂಟ್ಸ್‌ನಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ತಮ್ಮ ಪ್ರಯಾಣವನ್ನು ಆರಂಭಿಸಿದ್ದ ಅವರು ಬಳಿಕ 1998ರಿಂದ  2009ರ ಮಾರ್ಚ್‌ವರೆಗೆ ಕಂಪನಿಯ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸ್ಥಾನದವರೆಗೆ ಏರಿದ್ದರು. ಇವರು ಎಂಡಿ ಆಗಿದ್ದ ಕಾಲದಲ್ಲಿಯೇ ಏಷ್ಯನ್‌ ಪೇಂಟ್ಸ್‌ ಭಾರತದ ಅತಿದೊಡ್ಡ ಪೇಂಟ್ಸ್‌ ಉತ್ಪಾದಕ ಕಂಪನಿ ಎನಿಸಿತ್ತು.  ಇಂದು 21,700 ಕೋಟಿ ರೂಪಾಯಿ ವ್ಯವಹಾರ ನಡೆಸುವ ಏಷ್ಯನ್‌ ಪೇಂಟ್ಸ್‌ ಸಮೂಹ ದೇಶದ ಅತೀದೊಡ್ಡ ಪೇಂಟ್‌ ಉತ್ಪಾದಕ ಕಂಪನಿ ಎನಿಸಿಕೊಂಡಿದೆ. ಅಶ್ವಿನ್‌ ದಾನಿ ನಿಧನದ ಬೆನ್ನಲ್ಲಿಯೇ ಷೇರು ಮಾರುಕಟ್ಟೆಯಲ್ಲಿ ಏಷ್ಯನ್ಸ್‌ ಪೇಂಟ್ಸ್‌ ಷೇರುಗಳ ಮೇಲೆ ಪರಿಣಾಮ ಬೀರಿದ್ದು. ಶೇ. 4ರಷ್ಟು ಕುಸಿತ ಕಂಡಿವೆ.

2023 ರ ಹೊತ್ತಿಗೆ, ಫೋರ್ಬ್ಸ್ ಪ್ರಕಾರ, ಅಶ್ವಿನ್ ದಾನಿ ಅವರ ನಿವ್ವಳ ಮೌಲ್ಯವು ಸರಿಸುಮಾರು $ 7.7 ಬಿಲಿಯನ್ ಎಂದು ಅಂದಾಜಿಸಲಾಗಿದೆ. 1944ರಲ್ಲಿ ಸೆಪ್ಟೆಂಬರ್‌ 26 ರಂದು ಮುಂಬೈನಲ್ಲಿ ಜನಿಸಿದ್ದ ಅಶ್ವಿನ್‌ ದಾನಿ, ಮುಂಬೈ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ತಮ್ಮ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪೂರ್ಣಗೊಳಿಸಿದ್ದರು. ಆ ಬಳಿಕ ಅಕ್ರಾನ್ ವಿಶ್ವವಿದ್ಯಾನಿಲಯದಿಂದ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದ್ದರು. ಡೆಟ್ರಾಯಿಟ್‌ನಲ್ಲಿ ರಸಾಯನಶಾಸ್ತ್ರಜ್ಞರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ, 1968 ರಲ್ಲಿ, ಅವರು ತಮ್ಮ ಕುಟುಂಬ ವ್ಯವಹಾರವಾದ ಏಷ್ಯನ್ ಪೇಂಟ್ಸ್‌ಗೆ 1968 ರಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಸೇರಿಕೊಂಡಿದ್ದರು.

ಇಷ್ಟು ವರ್ಷಗಳಲ್ಲಿ, ಡೈರೆಕ್ಟರ್ (ಸಂಶೋಧನೆ ಮತ್ತು ಅಭಿವೃದ್ಧಿ), ಕಾರ್ಯ ನಿರ್ದೇಶಕರು, ಪೂರ್ಣ ಸಮಯದ ನಿರ್ದೇಶಕರು, ಉಪಾಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಏಷ್ಯನ್‌ ಪೇಂಟ್ಸ್‌ನಲ್ಲಿ ಹಲವಾರು ಸ್ಥಾನಗಳನ್ನು ಹೊಂದಿದ್ದರು. ವ್ಯಾಪಾರ ಮತ್ತು ಬಣ್ಣಗಳ ವಲಯಕ್ಕೆ ಅತ್ಯಾಧುನಿಕ ಪರಿಕಲ್ಪನೆಗಳನ್ನು ಒದಗಿಸಲು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಳಸುವುದಕ್ಕಾಗಿ ದಾನಿ ಹೆಸರುವಾಸಿಯಾಗಿದ್ದರು.

ಕಾರಣ ಹೇಳದೆ ಹೋದ ಸುಶಾಂತ್  ಮನೆ ನೋಡಿದ್ದೀರಾ?

ಅಶ್ವಿನ್ ದಾನಿ ಕಂಪ್ಯೂಟರ್ ಬಣ್ಣ ಹೊಂದಾಣಿಕೆಯ ಪರಿಕಲ್ಪನೆಯನ್ನು ಏಷ್ಯನ್‌ ಪೇಂಟ್ಸ್‌ನಲ್ಲಿ ಪ್ರಾರಂಭಿಸಿದ್ದರು. ಈಗ ಬಣ್ಣಗಳು, ಪ್ಲಾಸ್ಟಿಕ್‌ಗಳು, ಮುದ್ರಣ ಶಾಯಿಗಳು ಮತ್ತು ಜವಳಿಗಳಂತಹ ಉದ್ಯಮಗಳಲ್ಲಿ ವ್ಯಾಪಕವಾಗಿ ಇದನ್ನು ಬಳಕೆ ಮಾಡಲಾಗುತ್ತದೆ. ಅದರೊಂದಿಗೆ ಅವರು ಅಪೊಕೊಲೈಟ್‌, ನ್ಯಾಚುರಲ್ ವುಡ್ ಫಿನಿಶ್, ಮರದ ಮೇಲ್ಮೈಗಳಿಗೆ ಒಂದು ನವೀನ ಫಿನಿಶಿಂಗ್ ಸಿಸ್ಟಮ್ ಮತ್ತು ಆಟೋಮೊಬೈಲ್ ಆಫ್ಟರ್ ಮಾರ್ಕೆಟ್ ವಿಭಾಗದಲ್ಲಿ ವ್ಯಾಪಕವಾಗಿ ಅಳವಡಿಸಲಾಗಿರುವ ವೇಗವಾಗಿ ಒಣಗಿಸುವ ಅಲ್ಕಿಡ್ ಎನಾಮಲ್‌ ಆಟೋಮೋಟಿವ್ ರಿಫೈನಿಶಿಂಗ್ ಸಿಸ್ಟಮ್ನಂತಹ ಅದ್ಭುತ ಉತ್ಪನ್ನಗಳನ್ನು ರಚಿಸಿದ್ದರಿಂದ ಗಮನಸೆಳೆದಿದ್ದರು.

ಹೊಸ ರೀತಿಯ ವಾಟರ್‌ಪ್ರೂಫಿಂಗ್‌ ಪರಿಹಾರ ತಿಳಿಸಿದ ಏಷ್ಯನ್‌ ಪೇಂಟ್ಸ್‌ನ ಸ್ಮಾರ್ಟ್‌ಕೇರ್‌ ಹೈಡ್ರೋಲಾಕ್‌ ಎಕ್ಸ್‌ಟ್ರೀಮ್‌

Latest Videos
Follow Us:
Download App:
  • android
  • ios