ಏಷ್ಯಾದ ಟಾಪ್ 10 ಶ್ರೀಮಂತ ಕುಟುಂಬಗಳು: ಅಂಬಾನಿ, ಅದಾನಿ ಪಟ್ಟಿಯಲ್ಲಿದ್ದಾರಾ? ಕರ್ನಾಟಕದವರು ಯಾರಿದ್ದಾರೆ?
ಏಷ್ಯಾದ ಟಾಪ್ 10 ಶ್ರೀಮಂತ ಕುಟುಂಬಗಳ ಪಟ್ಟಿಯಲ್ಲಿ ಭಾರತದ ಐದು ಕುಟುಂಬಗಳು ಸ್ಥಾನ ಪಡೆದಿವೆ. ಅಂಬಾನಿ, ಅದಾನಿ ಕುಟುಂಬಗಳು ಇದರಲ್ಲಿ ಸ್ಥಾನ ಪಡೆದಿವೆಯಾ? ಕರ್ನಾಟಕದ ಕುಟುಂಬವಿದೆಯಾ ಒಮ್ಮೆ ನೋಡಿ..

ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಭಾರತೀಯರು ತಮ್ಮ ಪ್ರತಿಭೆ ತೋರಿಸುತ್ತಲೇ ಬಂದಿದ್ದಾರೆ. ಜೊತೆಗೆ ಅವರ ವ್ಯಾಪಾರ ಕುಶಾಗ್ರಮತಿಯೂ ಗಮನಾರ್ಹವಾಗಿದೆ. ಏಷ್ಯಾದ ಅತ್ಯಂತ ಶ್ರೀಮಂತ ಕುಟುಂಬಗಳ ಪಟ್ಟಿ ನೋಡಿದರೆ ಇದು ಸ್ಪಷ್ಟವಾಗುತ್ತದೆ. ಏಷ್ಯಾದ ಟಾಪ್ 10 ಶ್ರೀಮಂತ ಕುಟುಂಬಗಳ ಪಟ್ಟಿಯಲ್ಲಿ ಭಾರತದ ಕುಟುಂಬ ಮೊದಲ ಸ್ಥಾನದಲ್ಲಿದೆ. ಜೊತೆಗೆ ದೇಶದ ಇತರ 4 ಕುಟುಂಬಗಳು ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಏಷ್ಯಾದ ಅತ್ಯಂತ ಶ್ರೀಮಂತ ಕುಟುಂಬಗಳು
ಅಂಬಾನಿ ಕುಟುಂಬ: ಏಷ್ಯಾದ ಅತ್ಯಂತ ಶ್ರೀಮಂತ ಕುಟುಂಬವೆಂದರೆ ಅದು ಅಂಬಾನಿ ಕುಟುಂಬ. ಬ್ಲೂಮ್‌ಬರ್ಗ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಂಬಾನಿ ಕುಟುಂಬದ ಆಸ್ತಿ 90.5 ಬಿಲಿಯನ್ ಡಾಲರ್. ಅಂದರೆ, ಸುಮಾರು 7.85 ಲಕ್ಷ ಕೋಟಿ ರೂಪಾಯಿ.
ಚೀರವನೊಂಡ್ ಕುಟುಂಬ: ಥೈಲ್ಯಾಂಡ್‌ನ ಚೀರವನೊಂಡ್ ಕುಟುಂಬ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 42.6 ಬಿಲಿಯನ್ ಡಾಲರ್ ಅಂದರೆ ಸುಮಾರು 3.70 ಲಕ್ಷ ಕೋಟಿ ರೂಪಾಯಿ ಈ ಕುಟುಂಬದ ಆಸ್ತಿ. ಇದು ಅಂಬಾನಿ ಅವರ ಒಟ್ಟು ಸಂಪತ್ತಿನ ಅರ್ಧಕ್ಕಿಂತ ಕಡಿಮೆ ಎಂಬುದು ಗಮನಾರ್ಹ.
ಹಾರ್ಟೋನೊ ಕುಟುಂಬ: ಇಂಡೋನೇಷ್ಯಾದ ಹಾರ್ಟೋನೊ ಕುಟುಂಬ 3ನೇ ಸ್ಥಾನದಲ್ಲಿದೆ. 42.2 ಬಿಲಿಯನ್ ಡಾಲರ್ ಅಂದರೆ ಸುಮಾರು 3.66 ಲಕ್ಷ ಕೋಟಿ ರೂಪಾಯಿ ಇವರ ಆಸ್ತಿ. ಈ ಕುಟುಂಬದ ಮೂರನೇ ತಲೆಮಾರು ಈಗ ಬ್ಯಾಂಕ್ ಆಫ್ ಸೆಂಟ್ರಲ್ ಏಷ್ಯಾವನ್ನು ನಡೆಸುತ್ತಿದೆ.
ಮಿಸ್ತ್ರಿ ಕುಟುಂಬ: ಭಾರತದ ಮಿಸ್ತ್ರಿ ಕುಟುಂಬ 4ನೇ ಸ್ಥಾನದಲ್ಲಿದೆ. ಒಟ್ಟು 37.5 ಬಿಲಿಯನ್ ಡಾಲರ್ ಆಸ್ತಿಯನ್ನು ಈ ಕುಟುಂಬ ಹೊಂದಿದೆ. ಅಂದರೆ, ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 3.25 ಲಕ್ಷ ಕೋಟಿ ರೂಪಾಯಿ.
ಇದನ್ನೂ ಓದಿ: 18 ಲಕ್ಷದ ಬ್ಯಾಗ್, ಭಿಕ್ಷುಕನಂತಹ ವೇಷ: ಸಖತ್ ಟ್ರೋಲ್ ಆದ ಬಾಲಿವುಡ್ ನಿರ್ದೇಶಕ
ಕ್ವೋಕ್ ಕುಟುಂಬ: ಹಾಂಕಾಂಗ್‌ನ ಕ್ವೋಕ್ ಕುಟುಂಬ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. 35.6 ಬಿಲಿಯನ್ ಡಾಲರ್ ಇವರ ಆಸ್ತಿ. ಅಂದರೆ ಸುಮಾರು 3.09 ಲಕ್ಷ ಕೋಟಿ ರೂಪಾಯಿ.
ಸಾಯ್ ಕುಟುಂಬ: ಕ್ಯಾಥೆ ಫೈನಾನ್ಷಿಯಲ್ ಮತ್ತು ಕ್ಯೂಬನ್ ಫೈನಾನ್ಷಿಯಲ್‌ನ ಮಾಲೀಕರಾದ ತೈವಾನ್‌ನ ಸಾಯ್ ಕುಟುಂಬ 6ನೇ ಸ್ಥಾನದಲ್ಲಿದೆ. ಕುಟುಂಬದ ಒಟ್ಟು ಆಸ್ತಿ 30.9 ಬಿಲಿಯನ್ ಡಾಲರ್. ಅಂದರೆ ಸುಮಾರು 2.68 ಲಕ್ಷ ಕೋಟಿ ರೂಪಾಯಿ.
ಜಿಂದಾಲ್ ಕುಟುಂಬ: ಭಾರತದ ಜಿಂದಾಲ್ ಕುಟುಂಬ 7ನೇ ಸ್ಥಾನದಲ್ಲಿದೆ. 28.1 ಬಿಲಿಯನ್ ಡಾಲರ್ ಇವರ ಆಸ್ತಿ. ಅಂದರೆ 2.43 ಲಕ್ಷ ಕೋಟಿ ರೂಪಾಯಿ. ಇವರು ಕರ್ನಾಟಕದಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಹೊಂದಿದ್ದು, ಇವರ ಶ್ರೀಮಂತಿಕೆಯಲ್ಲಿ ಕನ್ನಡ ನೆಲದ ಪಾಲು ಅಧಿಕವಾಗಿದೆ ಎಂದು ಹೇಳಬಹುದು.
ಯೋವಿಡ್ಯ ಕುಟುಂಬ: ಥಾಯ್ ಕುಟುಂಬವಾದ ಯೋವಿಡ್ಯ ಅವರ ಒಟ್ಟು ಆಸ್ತಿ 25.7 ಬಿಲಿಯನ್ ಡಾಲರ್. ಅಂದರೆ ಸುಮಾರು 2.23 ಲಕ್ಷ ಕೋಟಿ ರೂಪಾಯಿ.
ಬಿರ್ಲಾ ಕುಟುಂಬ: ಭಾರತದ ಮತ್ತೊಂದು ಬಿರ್ಲಾ ಕುಟುಂಬ 9ನೇ ಸ್ಥಾನದಲ್ಲಿದೆ. ಇದು ಏಷ್ಯಾದ ಟಾಪ್ 10 ಶ್ರೀಮಂತ ಕುಟುಂಬಗಳಲ್ಲಿ ಸ್ಥಾನ ಪಡೆದ ನಾಲ್ಕನೇ ಭಾರತೀಯ ಕುಟುಂಬ ಎಂದೂ ಹೇಳಬಹುದು.
ಇದನ್ನೂ ಓದಿ: ₹50,000 ಕೋಟಿ ಆಸ್ತಿ ಇದ್ರೂ ಸರಳ ಬದುಕು ನಡೆಸ್ತಾರೆ ರಾಜಮನೆತನದ ಈ ಹೀರೋ: ಅಷ್ಟಕ್ಕೂ ಯಾರಿದು?
ಲೀ ಕುಟುಂಬ: ಪ್ರಪಂಚದ ಅತಿದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಸ್ಯಾಮ್‌ಸಂಗ್‌ನ ಹಿಂದಿರುವ ಬುದ್ಧಿಶಕ್ತಿ ದಕ್ಷಿಣ ಕೊರಿಯಾದ ಈ ಕುಟುಂಬ. 22.7 ಬಿಲಿಯನ್ ಡಾಲರ್. ಅಂದರೆ ಸುಮಾರು 1.97 ಲಕ್ಷ ಕೋಟಿ ರೂಪಾಯಿ.
ಇನ್ನು ಏಷ್ಯಾದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಕರ್ನಾಟಕ ಮೂಲದ ಯಾವುದೇ ಉದ್ಯಮಿಗಳಿಲ್ಲ. ಜೊತೆಗೆ, ಶ್ರೀಮಂತರ ಪಟ್ಟಿಯಲ್ಲಿ ಅದಾನಿ ಕುಟುಂಬ ಸ್ಥಾನ ಪಡೆದಿಲ್ಲ. ಆದರೆ, ಅವರು ವೈಯಕ್ತಿಕವಾಗಿ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿಗೆ ಪೈಪೋಟಿ ಕೊಡಲಿದ್ದಾರೆ. ಇನ್ನು ಭಾರತದ ಶ್ರಿಮಂತರ ಪಟ್ಟಿಯಲ್ಲಿ ಗುಜರಾತ್, ಮುಂಬೈ ಮೂಲದ ಶ್ರೀಮಂತರು ಹೆಚ್ಚಾಗಿದ್ದಾರೆ.