BTS2022: 100ಕ್ಕೂ ಹೆಚ್ಚು ಸ್ಟಾರ್ಟಪ್ ಮಳಿಗೆಗಳಿಗೆ ಭೇಟಿ ನೀಡಿ ಪ್ರೋತ್ಸಾಹಿಸಿದ ಅಶ್ವತ್ಥನಾರಾಯಣ
ಸುಮಾರು ಎರಡು ಗಂಟೆಗಳ ಕಾಲ ನವೋದ್ಯಮಿಗಳ ದನಿಗೆ ಕಿವಿಗೊಟ್ಟರು. ಹಾಗೆಯೇ, ನವೋದ್ಯಮವನ್ನು ಉತ್ತೇಜಿಸಲು ಸರಕಾರ ಕೈಗೊಂಡಿರುವ ಕ್ರಮಗಳನ್ನು ಚುಟುಕಾಗಿ ಅವರಿಗೆಲ್ಲ ಹೇಳಿದ ಅಶ್ವತ್ಥನಾರಾಯಣ
ಬೆಂಗಳೂರು(ನ.17): ದಿನವಿಡೀ ಉಪಸ್ಥಿತರಿರುವ ಮೂಲಕ ಬೆಂಗಳೂರು ತಂತ್ರಜ್ಞಾನ ಸಮಾವೇಶವು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುತ್ತಿರುವ ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮೊದಲ ದಿನದ ಸಂಜೆ 100ಕ್ಕೂ ಹೆಚ್ಚು ಸ್ಟಾರ್ಟಪ್ ಮಳಿಗೆಗಳಿಗೆ ಭೇಟಿ ನೀಡಿ ಪ್ರೋತ್ಸಾಹ ನೀಡಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ ಮತ್ತು ವಿದೇಶಿ ನಿಯೋಗಗಳ ಜತೆ ಮಾತುಕತೆ ನಡೆಸಿದ ನಂತರ ಅವರು, ಪ್ರದರ್ಶನ ವ್ಯವಸ್ಥೆ ಇರುವ ಪೆವಿಲಿಯನ್‌ನತ್ತ ತೆರಳಿ, ಸುಮಾರು ಎರಡು ಗಂಟೆಗಳ ಕಾಲ ನವೋದ್ಯಮಿಗಳ ದನಿಗೆ ಕಿವಿಗೊಟ್ಟರು. ಹಾಗೆಯೇ, ನವೋದ್ಯಮವನ್ನು ಉತ್ತೇಜಿಸಲು ಸರಕಾರ ಕೈಗೊಂಡಿರುವ ಕ್ರಮಗಳನ್ನು ಚುಟುಕಾಗಿ ಅವರಿಗೆಲ್ಲ ಹೇಳಿದ್ದಾರೆ.
BENGALURU TECH SUMMIT 2020 : ಕೃಷಿ, ವಿದ್ಯುತ್ ಉತ್ಪಾದನೆ ಹೆಚ್ಚಳ ಅನಿವಾರ್ಯ
ಇದೇ ಸಂದರ್ಭದಲ್ಲಿ ಅವರು, ಸ್ಟಾರ್ಟಪ್ ಮಳಿಗೆಗಳ ಮುಂದೆ ಆಸಕ್ತಿ ಮತ್ತು ಕುತೂಹಲಗಳಿಂದ ಜಮಾಯಿಸಿದ್ದ ಯುವಜನರು ಮತ್ತು ಮಕ್ಕಳೊಂದಿಗೂ ಮುದದಿಂದ ಮಾತನಾಡಿದರು. ಇದನ್ನು ಕಂಡು ಅವರೆಲ್ಲರೂ ಹರ್ಷಚಿತ್ತರಾದರು. ಹಾಗೆಯೇ, ನಡುನಡುವೆ ಯುವಕ-ಯುವತಿಯರು ಸಚಿವರ ಜತೆ ಸೆಲ್ಫಿ ತೆಗೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕಿಯೂ ಆಗಿರುವ ಐಟಿ-ಬಿಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಈ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಅರ್ಜುನ್ ಒಡೆಯರ್ ಸಚಿವರಿಗೆ ಸಾಥ್ ನೀಡಿದರು.