'ರಾಜೀನಾಮೆ ನೀಡುವಂತೆ ಊರ್ಜಿತ್ ಮೇಲೆ ಒತ್ತಡ ಹೇರಿರಲಿಲ್ಲ'| ವದಂತಿಗಳಿಗೆ ತೆರೆ ಎಳೆದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ| 'ಹಣಕಾಸು ಒತ್ತಡ ನಿಭಾಯಿಸುವಲ್ಲಿನ ವ್ಯತ್ಯಾಸವೇ ರಾಜೀನಾಮೆಗೆ ಕಾರಣ'| ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ಮೀಸಲು ಹಣದ ಅವಶ್ಯಕತೆ ಇಲ್ಲ ಎಂದ ಜೇಟ್ಲಿ

ನವದೆಹಲಿ(ಡಿ.18): ಆರ್‌ಬಿಐ ಗವರ್ನರ್‌ ಹುದ್ದೆಗೆ ರಾಜೀನಾಮೆ ನೀಡುವಂತೆ ಕೇಂದ್ರ ಸರ್ಕಾರ ಉರ್ಜಿತ್ ಪಟೇಲ್ ಅವರನ್ನು =ಕೇಳಿರಲಿಲ್ಲ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

ಕೆಲ ಕ್ಷೇತ್ರಗಳಲ್ಲಿನ ಹಣಕಾಸು ಒತ್ತಡವನ್ನು ನಿಭಾಯಿಸುವಲ್ಲಿನ ವ್ಯತ್ಯಾಸಗಳಿಂದಾಗಿ ಉರ್ಜಿತ್ ಪಟೇಲ್‌ ಅವರು ರಾಜೀನಾಮೆ ನೀಡಿದ್ದಾರೆ ಎಂದು ಜೇಟ್ಲಿ ಹೇಳಿದ್ದಾರೆ. ಈ ಮೂಲಕ ಸರ್ಕಾರ ಅವರ ರಾಜೀನಾಮೆಗೆ ಒತ್ತಡ ಹೇರಿತ್ತು ಎಂಬ ವದಂತಿಯನ್ನು ತಳ್ಳಿ ಹಾಕಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್‌ಬಿಐ ಬಂಡವಾಳದ ಮೀಸಲು ನಿಧಿಯಿಂದ ಸರ್ಕಾರಕ್ಕೆ ಒಂದು ಪೈಸೆಯ ಅಗತ್ಯವಿರಲಿಲ್ಲ ಎಂದು ಜೇಟ್ಲಿ ತಿಳಿಸಿದ್ದು, ಈ ಮೂಲಕ ಕೇಂದ್ರ ಸರ್ಕಾರ ಮೀಸಲು ಹಣದ ಮೇಲೆ ಕಣ್ಣಿಟ್ಟಿದೆ ಎಂಬ ಆಪಾದನೆಯನ್ನು ಸ್ಪಷ್ಟವಾಗಿ ನಿರಾಕರಿಸಿದರು.

ಊರ್ಜಿತ್ ಪಟೇಲ್‌ ದಿಢೀರ್ ರಾಜೀನಾಮೆಯ ಕುರಿತ ವ್ಯಾಪಕ ಟೀಕೆಗಳಿಗೆ ಪ್ರತಿಕ್ರಿಯಿಸಿದ ಜೇಟ್ಲಿ, ಸೂಕ್ತವಾದ ಮೀಸಲು ಗಾತ್ರವನ್ನು ಕೇಂದ್ರ ಬ್ಯಾಂಕ್ ಹೊಂದಿರಬೇಕು ಎನ್ನುವ ಕುರಿತು ಆರ್‌ಬಿಐ ಮಂಡಳಿಯ ಸಭೆಯಲ್ಲಿ ಸೌಹಾರ್ದಯುತ ಚರ್ಚೆಗಳು ನಡೆದಿದ್ದವು ಎಂದು ನುಡಿದರು.

ಮೋದಿಯನ್ನು ನಡುನೀರಲ್ಲಿ ಬಿಟ್ಟ ಊರ್ಜಿತ್: ಆರ್‌ಬಿಐ ಸ್ಥಾನಕ್ಕೆ ರಾಜೀನಾಮೆ!

ಹೋಗ್ಬನ್ನಿ ಒಳ್ಳೆದಾಗ್ಲಿ: ಮೋದಿ ಬಿಚ್ಚಿಟ್ಟ ಊರ್ಜಿತ್ ರಹಸ್ಯ!

ಊರ್ಜಿತ್ ಹೋದ್ರು, ಮಕಾಡೆ ಮಲಗಿತು ಸೆನ್ಸೆಕ್ಸ್!