ನವದೆಹಲಿ(ಫೆ.01): ಸಿಎಎ ವಿರೋಧಿಗಳಿಗೆ ಗುಂಡಿಕ್ಕಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್, ಕೇಂದ್ರ ಬಜೆಟ್‌ಗೆ ಸಂಪೂರ್ಣ ಸಿದ್ಧಗೊಂಡಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬಜೆಟ್ ಪ್ರತಿ ಮೂಲಕ ಈಗಾಗಲೇ ಸಂಸತ್ತು ತಲುಪಿರುವ ಅನುರಾಗ್ ಠಾಕೂರ್, ಬಜೆಟ್ ಪ್ರತಿಗಳ ಹಂಚಿಕೆಯತ್ತ ಗಮನಹರಿಸಿದ್ದಾರೆ.

ಇದಕ್ಕೂ ಮೊದಲು ತಮ್ಮ ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಿದ ಅನುರಾಗ್ ಠಾಕೂರ್, ಹನುಮಾನ್ ಮೂರ್ತಿಗೆ ನಮಸ್ಕರಿಸುತ್ತಿರುವ ಫೋಟೋ ವೈರಲ್ ಆಗಿದೆ.

'ಬಹೀ ಖಾತಾ' ಎಂಬ ಅಕ್ಷಯ ಪಾತ್ರೆ: ಸಂಸತ್ತಿಗೆ ಬಂತು ನಿರ್ಮಲಾ ದಂಡಯಾತ್ರೆ!

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅನುರಾಗ್ ಠಾಕೂರ್, ಪ್ರಸ್ತುತ ಕೇಂದ್ರ ಬಜೆಟ್ ಎಲ್ಲ ವರ್ಗದ ಜನರಿಗೂ ಸಿಹಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.