100 ರೂಪಾಯಿ ಇಟ್ಕೊಂಡು ಮುಂಬೈಗೆ ಬಂದಿದ್ದ ವ್ಯಕ್ತಿ ಈಗ ₹11,560 ಕೋಟಿ ಒಡೆಯ!
ಕಷ್ಟಪಟ್ಟು ಕೆಲಸ ಮಾಡಿದ್ರೆ ಸಕ್ಸಸ್ ಸಿಕ್ಕೇ ಸಿಗುತ್ತೆ ಎಂಬ ಮಾತಿದೆ. ಜೇಬಿನಲ್ಲಿ 100 ರೂಪಾಯಿ ಇಟ್ಕೊಂಡು ಮುಂಬೈಗೆ ಬಂದು ಪುಟಾಣಿ ರೂಮ್‌ನಲ್ಲಿದ್ದ ವ್ಯಕ್ತಿ ಇಂದು ಸಾವಿರಾರು ಕೋಟಿ ರೂಪಾಯಿ ಕಂಪನಿಯನ್ನು ಹೊಂದಿದ್ದಾರೆ.
ಮುಂಬೈ: ಕಷ್ಟಗಳನ್ನು ಎದುರಿಸದೇ ಭಯದಿಂದ ಓಡಿ ಹೋದ್ರೆ ಭವಿಷ್ಯದಲ್ಲಿನ ಯಶಸ್ಸು ನಿಮ್ಮಿಂದ ದೂರವಾಗುತ್ತವೆ. ಯಶಸ್ಸು ಸಿಗಬೇಕಾದ್ರೆ ಅದಕ್ಕೆ ಆದ ಪರಿಶ್ರಮ ನೀಡಬೇಕು. ಹಾಗಾದ್ರೆ ಮಾತ್ರ ಯಶಸ್ಸು ನಮ್ಮ ಜೊತೆಯಲ್ಲಿರುತ್ತದೆ. ದೇಶದಲ್ಲಿ ತಳಮಟ್ಟದಿಂದ ಕೆಲಸ ಆರಂಭಿಸಿ ಕೋಟ್ಯಧಿಪತಿಯಾದವರು ನೂರಾರು ಸಂಖ್ಯೆಯಲ್ಲಿದ್ದಾರೆ. ಉದ್ಯಮಿ ಸುಭಾಷ್ ರೂನ್ವಾಲ್ ಕೇವಲ 100 ರೂಪಾಯಿ ಹಿಡಿದುಕೊಂಡು ಮಹಾನಗರಿ ಮುಂಬೈಗೆ ಬಂದಿದ್ದರು. ಇಂದು 11 ಸಾವಿರ ಕೋಟಿ ಒಡೆಯರಾಗಿರುವ ಸುಭಾಷ್ ರೂನ್ವಾಲ್ ಅವರ ಕತೆ ಯಾವ ಸಿನಿಮಾಗೂ ಕಡಿಮೆ ಇಲ್ಲ. ಇಂದು ದೇಶದ ಪ್ರಮುಖ ಉದ್ಯಮಿಗಳಲ್ಲಿ ಸುಭಾಷ್ ರೂನ್ವಾಲ್ ಸಹ ಒಬ್ಬರಾಗಿದ್ದಾರೆ.
ಬಾಲಿವುಡ್ ನಟ ಶಾರೂಖ್ ಖಾನ್ ಅವರ ನೆರೆಹೊರಯವರು ಆಗಿರುವ ಸುಭಾಷ್ ರೂನ್ವಾಲ್ 1964ರಲ್ಲಿ 100 ರೂ ಹಿಡಿದುಕೊಂಡು ಮಹಾರಾಷ್ಟ್ರದ ಪುಟ್ಟ ಗ್ರಾಮ ಧುಲಿಯಾದಿಂದ ಮುಂಬೈಗೆ ಬಂದಿದ್ದರು. ಚಾರ್ಟೆಡ್ ಅಕೌಂಟಂಟ್ ಆಗಬೇಕೆಂಬ ಕನಸಿನ ಜೊತೆಯಲ್ಲಿ ಸುಭಾಷ್ ಮುಂಬೈಗೆ ಬಂದು, ಚಿಕ್ಕ ಕೋಣೆಯಲ್ಲಿ ವಾಸವಾಗಿದ್ದರು. ಈ ಪುಟಾಣಿ ಕೋಣೆಯಲ್ಲಿಯೇ ಉಳಿದುಕೊಂಡು ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.
1967ರಲ್ಲಿ ಅಮೆರಿಕದ ಅರ್ನ್ಸಟ್ ಆಂಡ್ ಅರ್ನ್ಸಟ್‌ನಲ್ಲಿ (Ernst & Ernst) ಮೊದಲ ಉದ್ಯೋಗ ಆರಂಭಿಸಿದರು. ಆದ್ರೆ ಈ ಕಂಪನಿಯ ವಾತಾವರಣ ಇಷ್ವವಾಗದ ಕಾರಣ ಕೆಲವೇ ದಿನಗಳಲ್ಲಿಯೇ ಭಾರತಕ್ಕೆ ಹಿಂದಿರುಗಿದರು. ನಂತರ ಕೆಮಿಕಲ್ ಕಂಪನಿಯೊಂದರಲ್ಲಿ ಕೆಲ ವರ್ಷಗಳ ಕಾಲ ನೌಕರಿ ಮಾಡಿದ್ದರು.
ವೃತ್ತಿಜೀವನಕ್ಕೆ ಗಡಿಯಾರವಿಲ್ಲ, ಚಿಂತೆ ಬಿಟ್ಟು ಕೆಲಸದಲ್ಲಿ ಮುಂದುವರಿಯಿರಿ;ಉದ್ಯೋಗಸ್ಥ ಮಹಿಳೆಗೆ ವಿನೀತಾ ಸಿಂಗ್ ಸಲಹೆ
ಹಲವು ಕಂಪನಿಗಳಲ್ಲಿ ಕೆಲಸ ಮಾಡಿದ ಬಳಿಕ 1978ರಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸುಭಾಷ್ ರೂನ್ವಾಲ್ ಎಂಟ್ರಿ ಕೊಟ್ಟರು. ಥಾಣೆಯಲ್ಲಿಯ 10,000 ಚದರ ಅಡಿಯ ಹೌಸಿಂಗ್ ಸೊಸೈಟಿ ನಿರ್ಮಾಣ ಸುಭಾಷ್ ರೂನ್ವಾಲ್ ಅವರ ಮೊದಲ ಪ್ರಾಜೆಕ್ಟ್ ಆಗಿತ್ತು. 16 ಅಂತಸ್ತಿನ ಕಟ್ಟಡ ನಿರ್ಮಾಣ ಸುಭಾಷ್ ಅವರಿಗೆ ಸಿಕ್ಕ ಮೊದಲ ದೊಡ್ಡ ಪ್ರೊಜೆಕ್ಟ್ ಆಗಿತ್ತು. ಇದೇ ಕೆಲಸದಲ್ಲಿ ಯಶಸ್ಸು ಸಿಗುತ್ತಿದ್ದಂತೆ ರೂನ್ವಾಲ್ ಗ್ರೂಪ್ ರಚನೆಯಾಯ್ತು. ನಂತರ ಮಗನ ಜೊತೆ ಸೇರಿ ಮುಲುಂಡ್‌ನಲ್ಲಿರುವ ಆರ್ ಮಾಲ್, ಘಾಟ್‌ಕೋಪರ್ ಆರ್-ಸಿಟಿ ಮಾಲ್ ಸೇರಿದಂತೆ ಮುಂಬೈನಲ್ಲಿ ಹಲವು ಬೃಹತ್ ಕಟ್ಟಡಗಳು ಇವರ ಸಂಸ್ಥೆಯೇ ನಿರ್ಮಿಸಿದೆ.
ಫೋರ್ಬ್ಸ್ ವರದಿ ಪ್ರಕಾರ, ಯಶಸ್ಸಿ ವೃತ್ತಿ ಜೀವನ ಹೊಂದಿರುವ ಸುಭಾಷ್ ರೂನ್ವಾಲ್ ಅವರು 2023ರ ಡಿಸೆಂಬರ್ ವೇಳೆಗೆ ಅಂದಾಜು 11,560 ಕೋಟಿ ರೂಪಾಯಿ ನಿವ್ವಳ ಲಾಭ ಎಂದು ವರದಿಯಾಗಿದೆ. ಸುಭಾಷ್ ರೂನ್ವಾಲ್ ಭಾರತದ ಶ್ರೀಮಂತ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಬ್ಬರಾಗಿದ್ದಾರೆ. ಸಣ್ಣ ಹಳ್ಳಿಯೊಂದರಲ್ಲಿ ಜನಿಸಿದ ಸುಭಾಷ್ ರೂನ್ವಾಲ್ ಮುಂಬೈನ ಕಡಲತೀರದಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ.
50ರ ಇಳಿ ಸಂಜೆಯಲ್ಲಿ ಒಂಟಿಯಾಗುವೆ ಎಂದು ಊಹೆಯೂ ಮಾಡಿರಲಿಲ್ಲ: ಮಿಲಿಂದಾ ಗೇಟ್ಸ್