ಮುಂಬೈ(ಆ.28): ಮಹತ್ವದ ಬೆಳವಣಿಗೆಯೊಂದರಲ್ಲಿ ರಿಲಯನ್ಸ್ ನಾವಲ್, ರಿಲಯನ್ಸ್ ಇಂಜಿನಿಯರಿಂಗ್ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ ನೀಡಿದ್ದಾರೆ.

ಸಂಸ್ಥೆಯ ಆಂತರಿಕ ನಿಯಮವಾಳಿಗಳ ಅನ್ವಯ ಅನಿಲ್ ಅಂಬಾನಿ ರಾಜೀನಾಮೆ ನೀಡಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. 2013ರ ಸಂಸ್ಥೆಗಳ ನಿಯಮಾವಳಿ ಸೆಕ್ಷನ್ 165ರ ಅನ್ವಯ 10 ಸಂಸ್ಥೆಗಳಿಗಿಂತಲೂ ಹೆಚ್ಚು ಸಂಸ್ಥೆಗಳಲ್ಲಿ ನಿರ್ದೇಶಕತ್ವ ಹೊಂದುವ ಹಾಗಿಲ್ಲ.

ಹೀಗಾಗಿ ಕೂಡಲೇ ಜಾರಿಗೆ ಬರುವಂತೆ ಅನಿಲ್ ಅಂಬಾನಿ ರಿಲಯನ್ಸ್ ನಾವಲ್, ರಿಲಯನ್ಸ್ ಇಂಜಿನಿಯರಿಂಗ್ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಆರ್ ನಾವಲ್, ದೇಶದ ಅತೀ ದೊಡ್ಡ ಶಿಪ್ ತಯಾರಿಕಾ ಸಂಸ್ಥೆಯಾಗಿದ್ದು, ಇತ್ತೀಚೆಗಷ್ಟೇ ಆರ್ ನಾವಲ್ ಸಂಸ್ಥೆ ಯುದ್ಧ ನೌಕೆಗಳ ತಯಾರಿಕಾ ಪರವಾನಗಿಯನ್ನು ಪಡೆದುಕೊಂಡಿತ್ತು.