Asianet Suvarna News Asianet Suvarna News

ಹಗ್ಗ ಕೊಟ್ಟು ಅಂಬಾನಿ ಬಳಿ ಕೈ ಕಟ್ಟಿಸಿಕೊಂಡ ಕಾಂಗ್ರೆಸ್?

ಒಂದು ಕಡೆ ರಫೇಲ್ ಯುದ್ಧ ವಿಮಾನ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ವೇದಿಕೆ ಮಾಡಿಕೊಟ್ಟಿದೆ. ಹಲವು ತಿಂಗಳುಗಳಿಂದ ಕಾಂಗ್ರೆಸ್ ನಾಯಕರ ಆರೋಪ, ಅದಕ್ಕೆ ಬಿಜೆಪಿಯವರ ಉತ್ತರ ನೋಡುತ್ತಲೇ ಇದ್ದೇವೆ. ಆದರೆ ಈಗ ಪ್ರಕರಣದ ಅಂಗಣಕ್ಕೆ ಅನೀಲ್ ಅಂಬಾನಿ ಸಹ ಎಂಟ್ರಿ ಕೊಟ್ಟಿದ್ದಾರೆ. ಏನು ಕತೆ ಅಂತೀರಾ? ಮುಂದೆ ಓದಿ..

Anil Ambani files Rs 5,000 crore defamation suit against National Herald
Author
Bengaluru, First Published Aug 26, 2018, 5:50 PM IST

ನವದೆಹಲಿ[ಆ.26]  ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ವರದಿ ಪ್ರಕಟಿಸಿದ ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ ವಿರುದ್ಧ 5,000 ಕೋಟಿ ರು. ಮೊಕದ್ದಮೆಯನ್ನು ಹೂಡಿರುವುದಾಗಿ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್​ ಕಮ್ಯುನಿಕೇಷನ್​ ಸಂಸ್ಥೆ  ತಿಳಿಸಿದೆ.

ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ ನ ಪತ್ರಿಕೆಯ ವರದಿಯೊಂದು ಈ ಪ್ರಕರಣ ಮೂಲ ಧಾತು. ಪಬ್ಲಿಷರ್ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್, ಸಂಪಾದಕ ಝಾಫರ್ ಆಗಾ, ಲೇಖನ ಬರೆದ ವಿಶ್ವದೀಪಕ್ ವಿರುದ್ಧವೂ ಮೊಕದ್ದಮೆ ಹೂಡಲಾಗಿದೆ. ಕಾಂಗ್ರೆಸ್ ವಕ್ತಾರ ಶಕ್ತಿಸಿನ್ಹಾ ಗೋಹಿಲ್ ಅವರು ರಫೆಲ್ ಫೈಟರ್ ಜೆಟ್ ಮತ್ತು ಅನಿಲ್ ಅಂಬಾನಿ ವಿರುದ್ಧ ನಿರಂತರ ಆರೋಪ ಮಾಡಿದ್ದರು. ಇದು ಪತ್ರಿಕೆಯಲ್ಲಿ ಸುದ್ದಿಯೂ ಆಗಿತ್ತು.

ಅಣ್ಣ ಹೆಲ್ಪ್ ಮಾಡು: ಅನಿಲ್ ಕೂಗಿಗೆ ಮುಖೇಶ್ ದೌಡು!

ಸೆಪ್ಟೆಂಬರ್ 07ರೊಳಗೆ ಈ ಕುರಿತಂತೆ ಪ್ರತಿಕ್ರಿಯಿಸಿ, ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ಜಡ್ಜ್ ಪಿಜೆ ತಮಕುವಾಲಾ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಒಟ್ಟಿನಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಇದ್ದ ಸಮರಕ್ಕೆ ಇದೀಗ ಉದ್ಯಮಿಗಳ ಪ್ರವೇಶದಿಂದ ಮತ್ತಷ್ಟು ಜಟಿಲವಾಗುತ್ತಿರುವುದರಕ್ಕು ಅನುಮಾನ ಇಲ್ಲ.

Follow Us:
Download App:
  • android
  • ios