ಎಲ್ಲಾ ದಾಖಲೆ ಮುರಿದ ಅನಂತ್ ಅಂಬಾನಿ, ವಿಶ್ವದ ಅತೀ ದುಬಾರಿ ವಾಚ್ ಖರೀದಿ!
ಅನಂತ್ ಅಂಬಾನಿ ಇದೀಗ ಹೊಸ ದಾಖಲೆ ಬರೆದಿದ್ದಾರೆ. ವಿಶ್ವದ ಅತೀ ದುಬಾರಿ ವಾಚ್ ಖರೀದಿಸಿದ್ದಾರೆ. ಇದು ವಿಶ್ವದಲ್ಲಿರುವುದು ಮೂರೇ ಮೂರು ವಾಚ್. ಈ ಪೈಕಿ ಒಂದು ವಾಚ್ ಅನಂತ್ ಅಂಬಾನಿ ಖರೀದಿಸಿದ್ದಾರೆ. ಇದರ ಬೆಲೆ ಎಷ್ಟು ಗೊತ್ತಾ?
ಮುಂಬೈ(ಜ.01) ಉದ್ಯಮಿ ಮುಕೇಶ್ ಅಂಬಾನಿ ಶ್ರೀಮಂತಿಕೆ ಬಿಡಿಸಿ ಹೇಳಬೇಕಾಗಿಲ್ಲ. ಹೀಗಾಗಿ ಅಂಬಾನಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ಧರಿಸುವ ಬಟ್ಟೆ, ಆಭರಣ ಸೇರಿದಂತೆ ಇತರ ಫ್ಯಾಶನ್ ವಸ್ತುಗಳ ಬೆಲೆ ಊಹೆಗೂ ನಿಲುಕುವುದಿಲ್ಲ. ಈ ಪೈಕಿ ಅನಂತ್ ಅಂಬಾನಿಗೆ ವಾಚ್ ಕ್ರೇಜ್ ಹೆಚ್ಚಿದೆ. ಈಗಾಗಲೇ ಅನಂತ್ ಅಂಬಾನಿ ಬಳಿ ದುಬಾರಿ ಮೌಲ್ಯದ, ಅಪರೂಪದ ವಾಚ್ ಸಂಗ್ರಹವಿದೆ. ಒಂದೆರೆಡು ಕೋಟಿ ರೂಪಾಯಿ ವಾಚ್‌ಗಳ ದೊಡ್ಡ ಸಂಗ್ರಹವೇ ಅನಂತ್ ಅಂಬಾನಿ ಬಳಿ ಇದೆ. ಇದರ ನಡುವೆ ಅನಂತ್ ಅಂಬಾನಿ ಹೊಸ ವಾಚ್ ಖರೀದಿಸಿದ್ದಾರೆ. ಈ ಮೂಲಕ ತನ್ನಲ್ಲಿರುವ ಅತ್ಯಂತ ದುಬಾರಿ ವಾಚ್ ಮಾತ್ರವಲ್ಲ, ವಿಶ್ವದ ಅತೀ ದುಬಾರಿ ವಾಚ್ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಅನಂತ್ ಅಂಬಾನಿ ಇದೀಗ ರಿಚರ್ಡ್ ಮಿಲೆ RM 52-04 ಬ್ಲೂ ವಾಚ್ ಖರೀದಿಸಿದ್ದಾರೆ. ಇತ್ತೀಚೆಗೆ ಪತ್ನಿ ರಾಧಿಕಾ ಮರ್ಚೆಂಟ್ ಜೊತೆ ಸಾರ್ವನಿಕವಾಗಿ ಕಾಣಿಸಿಕೊಂಡಾಗ ಅನಂತ್ ಅಂಬಾನಿ ಈ ರಿಚರ್ಡ್ ಮಿಲೆ RM 52-04 ವಾಚ್ ಧರಿಸಿದ್ದರು. ಹೀಗಾಗಿ ಎಲ್ಲರ ಕಣ್ಣು ಅನಂತ್ ಅಂಬಾನಿ ವಾಚ್ ಮೇಲೆ ಬಿದ್ದಿತ್ತು. ಈ ವಾಚ್ ಖರೀದಿಸಲು ಶ್ರೀಮಂತಿಕೆ ಮಾತ್ರವಲ್ಲ, ಇನ್ಲುಫ್ಲೆಯೆನ್ಸ್ ಆಗಿರಬೇಕು. ಕಾರಣ ಇದು ಅತೀ ವಿರಳವಾಗಿರುವ ವಾಚ್. ಜಗತ್ತಿನಲ್ಲಿ ಕೇವಲ ಮೂರೇ ಮೂರು ರಿಚರ್ಡ್ ಮಿಲೆ RM 52-04 ವಾಚ್ ಇದೆ. ರಿಚರ್ಟ್ ಮಿಲೆ ಇದರ ಮೌಲ್ಯ ಹಾಗೂ ವಿಶೇಷ ವಾಚ್ ಕಾರಣಕ್ಕಾಗಿ ಕೇವಲ 3 ವಾಚ್ ಮಾತ್ರ ಉತ್ಪಾದನೆ ಮಾಡಿದೆ.
ಮಗನ ಪ್ರೀವೆಡ್ಡಿಂಗ್ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಧರಿಸಿದ್ದ ವಾಚ್ ಬೆಲೆ 3 ಕೋಟಿ! ಅಂಥದ್ದೇನಿದೆ ಈ ವಾಚ್ ನಲ್ಲಿ?
ರಿಚರ್ಡ್ ಮಿಲೆ RM 52-04 ವಾಚ್ ಬೆಲೆ ಎಷ್ಟು?
ವಿಶ್ವದಲ್ಲಿರುವ ಮೂರೇ ಮೂರು ರಿಚರ್ಡ್ ಮಿಲೆ ವಾಚ್ ಪೈಕಿ ಒಂದು ಅನಂತ್ ಅಂಬಾನಿ ಖರೀದಿಸಿದ್ದಾರೆ. ಇದರ ಬೆಲೆ 2,625,000 ಅಮೆರಿಕನ್ ಡಾಲರ್. ಇದನ್ನು ಭಾರತೀಯ ರೂಪಾಯಿಗಳಿಗೆ ಕನ್ವರ್ಟ್ ಮಾಡಿದರೆ 22,51,90,000 ರೂಪಾಯಿ. ಸುಲಭವಾಗಿ ಹೇಳಬೇಕು ಎಂದರೆ 22 ಕೋಟಿ ರೂಪಾಯಿ. ನೋಡಲು ಐಸ್ ಕ್ಯೂಬ್ ರೀತಿ ಇದೆ. ಆದರೆ ಬೆಲೆ ಮಾತ್ರ ದುಬಾರಿ. 22 ಕೋಟಿ 51 ಲಕ್ಷ ರೂಪಾಯಿ ಈ ವಾಚ್ ಬೆಲೆ ಕೇಳಿ ಹಲವರು ದಂಗಾಗಿದ್ದಾರೆ.
ಅನಂತ್ ಅಂಬಾನಿ ದುಬಾರಿ ವಾಚ್ ಬೆಲೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಇದರಲ್ಲೇನು ಚಿನ್ನ, ವಜ್ರ ಇದೆಯಾ ಎಂದು ಹಲವರು ಪ್ರಶ್ನಿಸಿದ್ದಾರೆ. ಇದರಲ್ಲಿ ಚಿನ್ನ , ವಜ್ರ ವೈಢೂರ್ಯ ಯಾವುದೂ ಇಲ್ಲ. ಸಂಪೂರ್ಣ ವಜ್ರದಿಂದ ಈ ವಾಚ್ ಮಾಡಿದರೂ ಇದರ ಬೆಲೆ 10 ರಿಂದ 15 ಕೋಟಿ ರೂಪಾಯಿ ದಾಡುತ್ತಿರಲಿಲ್ಲ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇದು ಬ್ರ್ಯಾಂಡ್ ವಾಲ್ಯೂ. ಇಷ್ಟೇ ಅಲ್ಲ ಅತ್ಯಂತ ಶ್ರೀಮಂತರು ಧರಿಸುವ ವಾಚ್.
ಸ್ವಿಸ್ ವಾಚ್ ಬ್ರ್ಯಾಂಡ್ ರಿಚರ್ಡ್ ಮಿಲೆ ಎಲ್ಲಾ ಉತ್ಪನ್ನಗಳು ಕೋಟಿ ಕೋಟಿ ರೂಪಾಯಿ ಬೆಲೆಬಾಳುತ್ತದೆ. ಅನಂತ್ ಅಂಬಾನಿ ಬಳಿ ರಿಚರ್ಡ್ ಮಿಲೆ, ಪಾಟೆಕ್ ಫಿಲಿಪ್, ಆಡಮರ್ಸ್, ಫಿಗೆಟ್ ಸೇರಿದಂತೆ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಬ್ರ್ಯಾಂಡ್ ವಾಚ್‌ಗಳಿವೆ. ಅನಂತ್ ಅಂಬಾನಿ ಕಾರು ಕ್ರೇಜ್‌ಗಿಂತ ವಾಚ್ ಕ್ರೇಜ್ ತುಸು ಹೆಚ್ಚಿದೆ. ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲೂ ರಿಚರ್ಡ್ ಮಿಲೆ ವಾಚ್ ಧರಿಸಿದ್ದರು. ಇದು ವಿಶ್ವದ ಗಮನಸೆಳೆದಿತ್ತು.
ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ದೇಶ ವಿದೇಶಗಳಿಂದಲೂ ಗಣ್ಯರು ಆಗಮಿಸಿದ್ದರು. ಈ ವೇಳೆ ಅನಂತ್ ಅಂಬಾನಿ ಧರಿಸಿದ್ದ ರಿಚರ್ಡ್ ಮಿಲೆ ವಾಚ್ ಮೇಲೆ ಎಲ್ಲರ ಕಣ್ಣು ಬಿದ್ದಿತ್ತು. ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಕೂಡ ಅನಂತ್ ಅಂಬಾನಿ ವಾಚ್‌ಗೆ ಮಾರು ಹೋಗಿದ್ದರು. ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಧರಿಸಿದ ರಿಚರ್ಡ್ ಮಿಲೆ ವಾಚ್ ಬೆಲೆ ಬರೋಬ್ಬರಿ 10 ಕೋಟಿ ರೂಪಾಯಿ.
ಇದು ಅನಂತ್ ಅಂಬಾನಿ ಬಳಿ ಇದ್ದ ಗರಿಷ್ಠ ಮೌಲ್ಯದ ವಾಚ್ ಆಗಿತ್ತು. ಇದೀಗ ಅನಂತ್ ಅಂಬಾನಿ ತನ್ನದೇ ದಾಖಲೆಯನ್ನು ಮುರಿದಿದ್ದಾರೆ. 23 ಕೋಟಿ ರೂಪಾಯಿ ವಾಚ್ ಖರೀದಿಸುವ ಮೂಲಕ ಎಲ್ಲಾ ದಾಖಲೆ ಮುರಿದಿದ್ದಾರೆ.
ಅಬ್ಬಬ್ಬಾ..ಅನಂತ್ ಅಂಬಾನಿ ವಾಚ್ ತಯಾರಿಸೋಕೆ ಭರ್ತಿ 11 ವರ್ಷ ಬೇಕಾಯ್ತಂತೆ; ಬೆಲೆ ಕೇಳಿದ್ರೆ ಬೆಚ್ಚಿ ಬೇಳ್ತೀರಾ!