ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ ಅನಂತ್ ಅಂಬಾನಿ!
ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ದಿಢೀರ್ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾಗಿದ್ದಾರೆ. ಈ ವೇಳೆ ಅನಂತ್ ಅಂಬಾನಿ ಯೋಗಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಅಷ್ಟಕ್ಕೂ ಸಿಎಂ ಯೋಗಿಯನ್ನು ಅನಂತ್ ಅಂಬಾನಿ ಭೇಟಿ ಮಾಡಿದ್ದೇಕೆ?
ರಿಲಯನ್ಸ್ ಇಂಡಸ್ಟ್ರೀ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿ ಇತ್ತೀಚೆಗೆ ಮದುವೆಯಾಗಿ ಭಾರಿ ಸದ್ದು ಮಾಡಿದ್ದರು. ಇದೀಗ ಅನಂತ್ ಅಂಬಾನಿ ದಿಢೀರ್ ಆಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಯೋಗಿ ಆದಿತ್ಯನಾಥ್ ಹಾಗೂ ಅನಂತ್ ಅಂಬಾನಿ ಭೇಟಿ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಯೋಗಿ ಆದಿತ್ಯನಾಥ್ ಪ್ರಮುಖ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಂಬೈಗೆ ಆಗಮಿಸಿದ್ದಾರೆ. ಮಂಬೈಗೆ ಆಗಮಿಸಿದ ಯೋಗಿ ಆದಿತ್ಯನಾಥರನ್ನು ಅನೌಪಚಾರಿಕವಾಗಿ ಅನಂತ್ ಅಂಬಾನಿ ಭೇಟಿಯಾಗಿದ್ದರೆ. ಈ ವೇಳೆ ಅನಂತ್ ಅಂಬಾನಿ, ಮುಖ್ಯಮಂತ್ರಿಗೆ ಗೋಲ್ಡನ್ ಶಾಲು ಉಡುಗೊರೆಯಾಗಿ ನೀಡಿದ್ದಾರೆ. ಈ ಶಾಲು ವಿಶೇಷ ಕರಕುಶಲತೆ ಹೊಂದಿದೆ.
ಇತ್ತ 29 ವರ್ಷದ ಅನಂತ್ ಅಂಬಾನಿಗೆ ಮುಖ್ಯಮಂತ್ರಿ ಯೋಗಿ 2025ರ ಮಹಾಕುಂಭದ ಲೋಗೋ ಹಾಗೂ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಭೇಟಿಯಲ್ಲಿ ಅನಂತ್ ಅಂಬಾನಿ ಹಾಗೂ ಯೋಗಿ ಆದಿತ್ಯನಾಥ್ ಕೆಲ ಹೊತ್ತು ಮಾತನಾಡಿದ್ದಾರೆ. ಈ ಕುರಿತು ಯೋಗಿ ಆದಿತ್ಯನಾಥ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಯೋಗಿ ಆದಿತ್ಯನಾಥ್ ಮುಂಬೈಗೆ ಆಗಮಿಸಲ ಮುಖ್ಯ ಕಾರಣ ವಿಶ್ವ ಹಿಂದೂ ಎಕಾನಾಮಿಕ್ ಫೋರಂ(WHEF ) ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದ ಸಲುವಾಗಿ ಶನಿವಾರ(ಡಿ.14)ಮುಂಬೈಗೆ ಯೋಗಿ ಆದಿತ್ಯನಾಥ್ ಆಗಮಿಸಿದ್ದಾರೆ. ವಿಶ್ವ ಹಿಂದೂ ಎಕನಾಮಿಕ್ ಫೋರಂ ಕಾರ್ಯಕ್ರಮ ವಕಸಿತ ಭಾರತ ಹಾಗೂ ಆತ್ಮನಿರ್ಭರ ಭಾರತಕ್ಕೆ ನೆರವಾಗಲಿದೆ ಎಂದು ಯೋಗಿ ಹೇಳಿದ್ದಾರೆ.
ವಿಶ್ವ ಹಿಂಂದೂ ಎಕನಾಮಿಕ್ ಫೋರಂ ಕಾರ್ಯಕ್ರಮ ಮುಂಬೈನ ಜಿಯೋ ವರ್ಲ್ಡ ಆವರಣದಲ್ಲಿ ನಡೆಯುತ್ತಿದೆ. ಅಂಬಾನಿ ಒಡೆತನದ ಜಿಯೋ ವರ್ಲ್ಡ್‌ನಲ್ಲಿ ಕಾರ್ಯಕ್ರಮ ನಡೆಯುತ್ತಿರುವ ಕಾರಣ ಅನಂತ್ ಅಂಬಾನಿ ಮುಖ್ಯಮಂತ್ರಿ ಯೋಗಿ ಭೇಟಿಯಾಗಿದ್ದಾರೆ.