ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಹಾಸ್ಯಮಯವಾಗಿ ಉಲ್ಲೇಖಿಸಿದ ಆನಂದ್ ಮಹೀಂದ್ರಾ, ತಮ್ಮ ಮಹೀಂದ್ರ BE-6 ಕಾರು ಟ್ರಾಫಿಕ್‌ನಲ್ಲಿ ನಿಧಾನವಾಗಿ ಚಲಿಸುವುದರಿಂದ ಶೋರೂಂನಲ್ಲಿರುವಂತೆಯೇ ಹೊಸದಾಗಿ ಕಾಣುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಜನರಿಗೆ ಕಾರನ್ನು ನಿಧಾನವಾಗಿ ವೀಕ್ಷಿಸಲು ಸಾಕಷ್ಟು ಸಮಯ ಸಿಗುತ್ತದೆ ಎಂದೂ ಹೇಳಿದರು.
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಿತು. ದೇಶ - ವಿದೇಶದಿಂದ ಹೂಡಿಕೆದಾರರು, ಗಣ್ಯರು ಬೆಂಗಳೂರಿಗೆ ಆಗಮಿಸಿದ್ದರು. ಅವರಲ್ಲಿ ವಾಹನ ಕ್ಷೇತ್ರದ ದಿಗ್ಗಜ ಆನಂದ್ ಮಹೀಂದ್ರಾ ಕೂಡ ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ಆನಂದ್ ಮಹೀಂದ್ರಾ ಅವರು, ಸದಾ ಹಾಸ್ಯದ ರೂಪದಲ್ಲಿ ಚಟಾಕಿ ಹಾರಿಸುತ್ತಲೇ ಇರುತ್ತಾರೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬಂದಿದ್ದ ಅವರು ಇಲ್ಲಿರುವ ಟ್ರಾಫಿಕ್ ಕಿರಿಕಿರಿ ನೋಡಿ ಬೇಸತ್ತಿದ್ದರೂ, ಅದನ್ನು ಹಾಸ್ಯಮಯವಾಗಿ ಹೊಗಳಿ ಬರೆದುಕೊಂಡಿದ್ದಾರೆ.
ಬೆಂಗಳೂರಿಗೆ ಗುಡ್ ಬಾಯ್ (Good Bye) ಎಂದಿರುವ ಆನಂದ್ ಮಹೀಂದ್ರಾ ಅವರು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದ ತಮ್ಮ ವಾಹನ ಎಷ್ಟೊಂದು ಸೇಫ್ ಆಗಿದೆ, ಇದಕ್ಕೆ ಎಷ್ಟೊಂದು ಜನರ ದೃಷ್ಟಿ ಬೀಳುತ್ತಿದೆ ಎನ್ನುವ ಬಗ್ಗೆ ಮಾರ್ಮಿಕವಾಗಿ ಬರೆದಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಕಾರಣವೂ ಅಷ್ಟೇ ಇಂಟರೆಸ್ಟಿಂಗ್ ಆಗಿದೆ. ಮಹೀಂದ್ರಾ ಅವರು, ನನ್ನ ಮಹೀಂದ್ರ BE-6 ಕಾರಿನ ವೇಗಕ್ಕೆ ಥ್ಯಾಂಕ್ಸ್ ಎಂದಿರುವ ಅವರು, ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವುದರಿಂದ ಫಾಸ್ಟ್ ಆಗಿ ಹೋಗಲು ಆಗುವುದಿಲ್ಲ. ಆದ್ದರಿಂದ ವಾಹನಗಳು ಶೋರೂಂನಲ್ಲಿ ಇರುವಂತೆ ಇರುತ್ತವೆ ಎಂದು ವ್ಯಂಗ್ಯವಾಡಿದ್ದಾರೆ.
ಇಷ್ಟೇ ಅಲ್ಲದೇ, ಬೆಂಗಳೂರು ಟ್ರಾಫಿಕ್ ಜಾಮ್‌ನಲ್ಲಿ ಎಲ್ಲರೂ ಟ್ರಾಫಿಕ್‌ನಲ್ಲಿ ಸಿಲುಕಿರುವ ಕಾರಣದಿಂದ ನಿಮ್ಮ ಅಕ್ಕ ಪಕ್ಕದವರೂ ಈ ಕಾರನ್ನು ನೋಡುವುದಕ್ಕೆ ತುಂಬಾನೇ ಸಮಯ ಸಿಕ್ಕಿತು ಎಂದಿರುವ ಅವರು, ಈ ಕಾರಿಗೆ ಮರುಳಾಗಿ ಇನ್ನೊಂದಿಷ್ಟ ಗ್ರಾಹಕರು ಬರಬಹುದು ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇತ್ತೀಚೆಗೆ ಎಲ್&ಟಿ ಚೇರ್ಮನ್ ವಾರಕ್ಕೆ 90 ಗಂಟೆ ಕೆಲಸದ ಹೇಳಿಕೆಗೆ ಆನಂದ್ ಮಹೀಂದ್ರಾ ತಿರುಗೇಟು ನೀಡಿ ಸದ್ದು ಮಾಡಿದ್ದರು. ನೀವು ವಾರದಲ್ಲಿ ಎಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತೀರಿ ಅನ್ನೋ ಪ್ರಶ್ನೆಗೆ, 'ನಾನು ಈ ಪ್ರಶ್ನೆಯನ್ನು ಯಾವಾಗಲೂ ಅವಾಯ್ಡ್ ಮಾಡಲು ಬಯಸುತ್ತೇನೆ. ಎಷ್ಟು ಸಮಯ ಕೆಲಸ ಮಾಡುತ್ತೀರಿ ಅನ್ನೋದು ನನಗೆ ಯಾವತ್ತಿಗೂ ಪ್ರಶ್ನೆಯಲ್ಲ. ನನ್ನ ವರ್ಕ್ ಎಷ್ಟು ಕ್ವಾಲಿಟಿಯಲ್ಲಿತ್ತು ಅನ್ನೋದೇ ಮುಖ್ಯ. ನಾನು ಎಷ್ಟು ಗಂಟೆ ಕೆಲಸ ಮಾಡುತ್ತೀನಿ ಅನ್ನೋ ಪ್ರಶ್ನೆಗಳನ್ನ ಕೇಳಬೇಡಿ'ಎಂದು ಹೇಳಿದ್ದರು.
ನೀವು ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೆ ಎಷ್ಟು ಗಂಟೆಯನ್ನು ಕಳೆಯುತ್ತೀರಿ ಎನ್ನುವ ಪ್ರಶ್ನೆಗೆ, 'ನಾನು ಒಮ್ಮೊಮ್ಮೆ ನನ್ನಲ್ಲೇ ಈ ಪ್ರಶ್ನೆ ಕೇಳುತ್ತಿರುತ್ತೇನೆ. ನನ್ನ ಟ್ವೀಟ್‌ಅನ್ನು ನೋಡಿದವರಿಗೆ ಗೊತ್ತಿರುತ್ತದೆ. ನನಗೆ ಕಚೇರಿಯಲ್ಲಿ ಅದ್ಭುತವಾದ ಟೀಮ್ ಇದೆ. ಅವರು ನನ್ನ ತಲೆಯಲ್ಲೇ ಉಳಿದುಕೊಂಡು ಬಿಟ್ಟಿದ್ದಾರೆ. ನೀವ್ಯಾಕೆ ಟ್ವಿಟರ್‌ನಲ್ಲಿದ್ದೀರಿ, ಕೆಲಸ ಮಾಡಿ ಅನ್ನೋ ಕಾಮೆಂಟ್‌ಗಳು ಬರುತ್ತಲೇ ಇರುತ್ತದೆ. ಒಂದು ವಿಚಾರ ಇಲ್ಲಿ ತಿಳಿಸುತ್ತೇನೆ. ನನಗೆ ಏಕಾಂಗಿತನ ಕಾಡುತ್ತಿದ್ದೆ ಅನ್ನೋ ಕಾರಣಕ್ಕಾಗಿ ನಾನು ಎಕ್ಸ್‌ನಲ್ಲಿಲ್ಲ. ನನಗೆ ಸುಂದರವಾದ ಹೆಂಡತಿಯಿದ್ದಾಳೆ. ಆಕೆಯನ್ನು ದಿಟ್ಟಿಸಿ ನೋಡೋದು ನನಗೆ ಖುಷಿ ಕೊಡುತ್ತದೆ. ಆಕೆಯೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೇನೆ. ನಾನು ಅಲ್ಲಿ ಸ್ನೇಹಿತರಲ್ಲಿ ಮಾಡಿಕೊಳ್ಳುವ ಸಲುವಾಗಿ ಇಲ್ಲ. ಆದರೆ, ಎಕ್ಸ್ ಒಂದು ಅಮೇಜಿಂಗ್ ಬ್ಯುಸಿನೆಸ್ ಟೂಲ್ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಅದೊಂದೇ ಫ್ಲಾಟ್‌ಫಾರ್ಮ್‌ನಿಂದ ನನಗೆ 11 ಮಿಲಿಯನ್ ಜನರಿಂದ ಫೀಡ್‌ಬ್ಯಾಕ್ ಬರುತ್ತದೆ' ಎಂದು ಆನಂದ್ ಮಹೀಂದ್ರಾ ಹೇಳಿದ್ದರು.
'ನಿಮ್ಮ ಮನೆಯ ಐರನ್ ಡೋಮ್' ಡೆಂಗ್ಯೂ ತಡೆಯಲು ಆನಂದ್ ಮಹೀಂದ್ರಾ ಹೊಸ ಐಡಿಯಾ!
