ಶೀಘ್ರದಲ್ಲೇ ಅಮೆಜಾನ್ ಬಜಾರ್ ಪ್ರಾರಂಭ; ಗ್ರಾಹಕರಿಗೆ ಅತೀ ಕಡಿಮೆ ದರದಲ್ಲಿ ಸಿಗಲಿದೆ ಬಟ್ಟೆ, ವಾಚ್!

ಬೆಲೆ ನೋಡಿ ಶಾಪಿಂಗ್ ಮಾಡುವ ದೊಡ್ಡ ಪ್ರಮಾಣದ ಗ್ರಾಹಕರನ್ನು ಸೆಳೆಯಲು ಅಮೆಜಾನ್ ಮುಂದಾಗಿದೆ. ಇದಕ್ಕಾಗಿ ಬ್ರ್ಯಾಂಡೆಂಡ್ ಅಲ್ಲದ ಫ್ಯಾಷನ್, ಲೈಫ್ ಸ್ಟೈಲ್ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಶೀಘ್ರದಲ್ಲೇ  ಅಮೆಜಾನ್ ಬಜಾರ್ ಪ್ರಾರಂಭಿಸಲಿದೆ. 
 

Amazon to open new vertical for cheap unbranded clothes and watches soon anu

ನವದೆಹಲಿ (ಫೆ.26): ಅಮೆಜಾನ್ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಮುಂದಾಗಿದೆ. 'ಅಮೆಜಾನ್ ಬಜಾರ್' ಮೂಲಕ ದೇಶದಲ್ಲಿ ಕಡಿಮೆ ದರದಲ್ಲಿ ಫ್ಯಾಷನ್ ಹಾಗೂ ಜೀವನಶೈಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದೆ. ಈ ಹೊಸ ಪ್ಲಾಟ್ ಫಾರ್ಮ್ ಮೂಲಕ  600ರೂ. ಗಿಂತ ಕಡಿಮೆ ದರದ ಬ್ರ್ಯಾಂಡೆಡ್ ಅಲ್ಲದ ಸರಕುಗಳನ್ನು ಮಾರಾಟ ಮಾಡಲಿದೆ. ಬಟ್ಟೆಗಳು, ಶೂಗಳು, ವಾಚ್ ಗಳು, ಜ್ಯುವೆಲ್ಲರಿ ಹಾಗೂ ಇತರ ವಸ್ತುಗಳನ್ನು ಆದಷ್ಟು ಬೇಗ ಲಿಸ್ಟಿಂಗ್ ಮಾಡುವಂತೆ ಃಆಘೂ ಯಾವುದೇ ಬ್ರ್ಯಾಂಡಿಂಗ್ ಇಲ್ಲದೆ ಅಮೆಜಾನ್ ಬಜಾರ್ ಮೂಲಕ ಮಾರಾಟ ಮಾಡುವಂತೆ ಈಗಾಗಲೇ ವ್ಯಾಪಾರಿಗಳಿಗೆ ತಿಳಿಸಿದೆ . ಅಮೆಜಾನ್ ಬಜಾರ್ ನಲ್ಲಿ ಗ್ರಾಹಕರು ಅತೀಕಡಿಮೆ ದರದಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಆದರೆ, ಡೆಲಿವರಿಗೆ ಮಾತ್ರ 2-3 ದಿನಗಳು ಹಿಡಿಯಲಿದ್ದು, ಸಾಮಾನ್ಯ ಅಮೆಜಾನ್ ಆರ್ಡರ್ ಗಳಷ್ಟು ಬೇಗ ಗ್ರಾಹಕರನ್ನು ತಲುಪೋದಿಲ್ಲ. 

ಬ್ರ್ಯಾಂಡ್ ಗಳಿಗಿಂತ ಕಡಿಮೆ ಬೆಲೆಗೆ ಆದ್ಯತೆ ನೀಡುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಅಮೆಜಾನ್ ಬಜಾರ್ ಪ್ರಾರಂಭಿಸಲಾಗಿದೆ. ಬಜೆಟ್ ಗೆ ಆದ್ಯತೆ ನೀಡುವ ಇಂಥ ಹೆಚ್ಚುತ್ತಿರುವ ಗ್ರಾಹಕರನ್ನು ಸೆಳೆಯೋದು ಅಮೆಜಾನ್ ಉದ್ದೇಶವಾಗಿದೆ. ಕಂಪನಿ ಅಧಿಕೃತ ಮೂಲಗಳ ಪ್ರಕಾರ ಅಮೆಜಾನ್ ಮಾರಾಟಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನಿಮ್ಮ ಫ್ಯಾಷನ್ ಹಾಗೂ ಲೈಫ್ ಸ್ಟೈಲ್ ಉತ್ಪನ್ನಗಳನ್ನು ಆನ್ ಲೈನ್ ಮಾರಾಟ ಮಾಡಬಹುದು. ಈ ಮೂಲಕ ನಿಮ್ಮ ಉದ್ಯಮವನ್ನು ಹೆಚ್ಚು ಲಾಭದಾಯಕವಾಗಿ ಮುನ್ನಡೆಸಬಹುದು ಎಂದು ತಿಳಿಸಿದೆ. 

ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಮನೆ ಮಾರಾಟಕ್ಕಿದೆ, ಕೊಳ್ಳೋ ಯೋಚನೆ ಇದ್ದರೆ ಟ್ರೈ ಮಾಡಿ!

ಬೆನ್ಸ್ ಸ್ಟೆನ್ ರಿಸರ್ಚ್ ವರದಿ 2023ರ ಜನವರಿ ಅನ್ವಯ ಭಾರತದಲ್ಲಿ ಅಮೆಜಾನ್ ಬಳಕೆದಾರರ ಬೆಳವಣಿಗೆ 2022ರ ಡಿಸೆಂಬರ್ ನಲ್ಲಿ ಶೇ.13ರಷ್ಟು ಕಡಿಮೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದೇ ಅಮೆಜಾನ್ ಪ್ರತಿಸ್ಪರ್ಧಿಗಳಾದ ಫ್ಲಿಪ್ ಕಾರ್ಟ್ ಹಾಗೂ ಮಿಶೋ ಇದೇ ಅವಧಿಯಲ್ಲಿ ಕ್ರಮವಾಗಿ ಶೇ.21 ಹಾಗೂ ಶೇ.32ರಷ್ಟು ಹೊಸ ಬಳಕೆದಾರರನ್ನು ಪಡೆದಿವೆ. ಇದು ಅಮೆಜಾನ್ ಭಾರತದಲ್ಲಿ ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವಲ್ಲಿ ವಿಫಲವಾಗಿದೆ ಎಂದೇ ಹೇಳಬಹುದು. ಅದರಲ್ಲೂ ಬೆಲೆಯನ್ನು ಕೇಂದ್ರೀಕರಿಸಿರುವ ಗ್ರಾಹಕರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಅಮೆಜಾನ್ ಬಜಾರ್ ಮೂಲಕ ಪ್ರತಿಸ್ಪರ್ಧಿಗಳನ್ನು ಮಣಿಸಲು  ಅಮೆಜಾನ್ ಸಿದ್ಧತೆ ನಡೆಸಿದೆ ಎಂದೇ ಹೇಳಬಹುದು. 

ಅಮೆಜಾನ್ ಬಜಾರ್ ಹೇಗೆ ಭಿನ್ನವಾಗಿದೆ?
ವರದಿ ಅನ್ವಯ ಮಾರಾಟಗಾರರು ಅಮೆಜಾನ್ ಬಜಾರ್ ಗೆ ಹೆಚ್ಚಿನ ಆದ್ಯತೆ ನೀಡಲು ಮುಖ್ಯಕಾರಣ ಯಾವುದೇ ಕಮಿಷನ್  ಅಥವಾ ಮಧ್ಯವರ್ತಿ ಶುಲ್ಕ ಇಲ್ಲದಿರೋದು. ಸಾಮಾನ್ಯ ಅಮೆಜಾನ್ ನಲ್ಲಿ ಅತ್ಯಧಿಕ ಶುಲ್ಕಗಳಿದ್ದರೆ, ಇಲ್ಲಿ ಶೂನ್ಯ ಶುಲ್ಕವಿದೆ. ಇದು ಮಿಶೋ ಉಚಿತ ಲಿಸ್ಟಿಂಗ್ ಮಾದರಿಗೆ ಹೊಂದಿಕೆಯಾಗುತ್ತದೆ. ಬಜೆಟ್ ಸ್ನೇಹಿ ಗ್ರಾಹಕರನ್ನು ಅನ್ ಲೈನ್ ಮೂಲಕ ತಲುಪಲು ಪ್ರಯತ್ನಿಸುತ್ತಿರುವ  ಮಾರಾಟಗಾರರು ಹಾಗೂ ಉದ್ಯಮಿಗಳಿಗೆ ಅಮೆಜಾನ್ ಬಜಾರ್ ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ನೀಡಲಿದೆ. ಶೂನ್ಯ ಶುಲ್ಕ ಹಾಗೂ ಕಮೀಷನ್ ಮೂಲಕ ಸಣ್ಣ ಮಾರಾಟಗಾರರಿಗೆ ದೊಡ್ಡ ಪ್ರಮಾಣದ ಗ್ರಾಹಕರನ್ನು ತಲುಪಲು ಅಮೆಜಾನ್ ಅವಕಾಶ ಒದಗಿಸಲಿದೆ. 

ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಅಮೆಜಾನ್ ಪೇ ಬಳಕೆದಾರರು ಪ್ರತಿದಿನ ಎಷ್ಟು ಯುಪಿಐ ಪಾವತಿ ಮಾಡ್ಬಹುದು?

ತ್ವರಿತ ಡೆಲಿವರಿಗೆ ಪ್ರಯತ್ನ
ಅಮೆಜಾನ್ ಬಜಾರ್ ಪ್ರಾರಂಭದ ಜೊತೆಗೆ ಕೆಲವು  ದೈನಂದಿನ ಬಳಕೆ ಉತ್ಪನ್ನಗಳನ್ನು ಶೀಘ್ರವಾಗಿ ಶಿಪ್ಪಿಂಗ್ ಮಾಡಲು ಅಮೆಜಾನ್ ಎದುರು ನೋಡುತ್ತಿದೆ. ಈ ದೈನಂದಿನ ಸಾಮಗ್ರಿಗಳನ್ನು ಕೆಲವೇ ಗಂಟೆಗಳಲ್ಲಿ ಡೆಲಿವರಿ ಮಾಡೋದು ಇದರ ಉದ್ದೇಶ. ಝೆಪ್ಟೋ ಹಾಗೂ ಬ್ಲಿಂಕ್ ಇಟ್ ಮುಂತಾದ ಆಪ್ ಗಳಿಗಿಂತ ವೇಗವಾಗಿ ಡೆಲಿವರಿ ನೀಡುವ ಉದ್ದೇಶವನ್ನು ಅಮೆಜಾನ್ ಹೊಂದಿದೆ. ಈ ಪ್ರಾಜೆಕ್ಟ್ ಫ್ಲಿಪ್ ಕಾರ್ಟ್ ಇತ್ತೀಚೆಗೆ ಘೋಷಿಸಿರುವ ಅದೇ ದಿನ ಡೆಲಿವರಿ ನೀಡುವ ಯೋಜನೆಗೆ ಪೈಪೋಟಿ ನೀಡಲಿದೆ. 

Latest Videos
Follow Us:
Download App:
  • android
  • ios