Asianet Suvarna News Asianet Suvarna News

Amazon Prime Day Sale:ಮತ್ತೆ ಬಂದಿದೆ ಆನ್ ಲೈನ್ ಶಾಪಿಂಗ್ ಹಬ್ಬ; ಅಮೆಜಾನ್ ಪ್ರೈಮ್ ಡೇ ಯಾವಾಗ?

ಬಹುದಿನಗಳಿಂದ ಮೊಬೈಲ್,ಲ್ಯಾಪ್ ಟಾಪ್ ,ಟಿವಿ ಸೇರಿದಂತೆ  ದೊಡ್ಡ ಆನ್ ಲೈನ್ ಶಾಪಿಂಗ್ ಗೆ ಪ್ಲ್ಯಾನ್ ಮಾಡುತ್ತಿರೋರಿಗೆ ಗುಡ್ ನ್ಯೂಸ್. ಅಮೆಜಾನ್ ಪ್ರೈಮ್ ಡೇ ಇದೇ ತಿಂಗಳು ನಡೆಯಲಿದೆ. ಪ್ರೈಮ್ ಸದಸ್ಯರಿಗೆ ಆಕರ್ಷಕ ಡಿಸ್ಕೌಂಟ್ಸ್, ಇಎಂಐ ಸೌಲಭ್ಯ ಸೇರಿದಂತೆ ಇನ್ನೂ ಅನೇಕ ಹಣ ಉಳಿತಾಯದ ಅವಕಾಶಗಳು ಲಭ್ಯವಿವೆ. 

Amazon Prime Day Sale 2022 Date Time duration Deals More
Author
Bangalore, First Published Jul 19, 2022, 11:58 AM IST

ನವದೆಹಲಿ (ಜು.19): ಬಹುನಿರೀಕ್ಷಿತ ಅಮೆಜಾನ್ ಪ್ರೈಮ್ ಡೇ ಮಾರಾಟ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ದೇಶಾದ್ಯಂತ ಪ್ರೈಮ್ ಸದಸ್ಯರಿಗೆ ಆನ್ ಲೈನ್ ಶಾಪಿಂಗ್ ನಲ್ಲಿ ದೊಡ್ಡ ಪ್ರಮಾಣದ ಉಳಿತಾಯ ಮಾಡಲು ಮತ್ತೊಂದು ಅದ್ಭುತ ಅವಕಾಶ ಸಿಕ್ಕಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಆನ್ ಲೈನ್ ಶಾಪಿಂಗ್ ಪ್ರಿಯರು ನಿರೀಕ್ಷಿಸುತ್ತಿದ್ದ ದಿನ ಹತ್ತಿರ ಬಂದೇ ಬಿಟ್ಟಿದೆ. ಅಮೆಜಾನ್ ಶಾಪಿಂಗ್ ತಾಣದಲ್ಲಿ ಆನ್ ಲೈನ್ ಖರೀದಿ ಮೇಲೆ ಭಾರೀ ಡಿಸ್ಕೌಂಟ್ಸ್, ಆಕರ್ಷಕ ಇಎಂಐ ಆಫರ್ ಗಳನ್ನು ಪಡೆಯುವ ವರ್ಷದ ಸಮಯ ಇದಾಗಿದೆ. ಲ್ಯಾಪ್ ಟಾಪ್ಸ್, ಟಿವಿಗಳು, ವಾಷಿಂಗ್ ಮಷಿನ್ಸ್ , ಫ್ರಿಜ್ ಗಳು, ಫಿಟ್ನೆಸ್ ಉಪಕರಣಗಳು, ಬಟ್ಟೆಗಳು, ಅಸ್ಸೆಸರೀಸ್, ಆಭರಣಗಳು ಹಾಗೂ ಇನ್ನೂ ಅನೇಕ ವಸ್ತುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ಸ್, ಇಎಂಐ ಹಾಗೂ ಇನ್ನೂ ಅನೇಕ ಆಫರ್ ಗಳು ಲಭಿಸಲಿವೆ. ಇನ್ನು ಪ್ರೈಮ್ ಡೇ ಸೇಲ್ ಅವಧಿಯಲ್ಲಿ ಲಭಿಸುವ ವಿಶೇಷ ಕಾರ್ಡ್ ಡಿಸ್ಕೌಂಟ್ ಗಳನ್ನು ಬಳಸಿ ನಿರ್ದಿಷ್ಟ ಪಾಲುದಾರ ಬ್ಯಾಂಕಿನ ಕಾರ್ಡ್ ಗಳಿಂದ ಪಾವತಿ ಮಾಡಿದ  ಪ್ರೀಪೇಯ್ಡ್ ಹಾಗೂ ಇಎಂಐ ಆಡರ್ರ್ ಗಳ ಮೇಲೆ ನೀವು ಹೆಚ್ಚುವರಿ ಹಣ ಉಳಿತಾಯ ಮಾಡಲು ಕೂಡ ಅವಕಾಶವಿದೆ. 

ಯಾವಾಗ ಪ್ರಾರಂಭ?
2022ನೇ ಸಾಲಿನ ಅಮೆಜಾನ್ ಪ್ರೈಮ್  ಡೇ ಸೇಲ್ (Amazon Prime Day Sale) ಜುಲೈ 23 ಹಾಗೂ 24ರಂದು ನಡೆಯಲಿದೆ. ಈ ಮಾರಾಟ ಜುಲೈ 23ರ ಮಧ್ಯರಾತ್ರಿ ಪ್ರಾರಂಭವಾಗಿ ಜುಲೈ 24 ರಂದು ಕೊನೆಯಾಗಲಿದೆ. ಹೀಗಾಗಿ ಎಲ್ಲ ಪ್ರೈಮ್ ಸದಸ್ಯರಿಗೆ  2 ಪೂರ್ಣ ದಿನಗಳ ಕಾಲ ಮನೆ, ಕಚೇರಿಗಳಿಗೆ ಅಗತ್ಯವಾದ ವಸ್ತುಗಳು ಅಥವಾ ಇನ್ಯಾವುದೇ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಸಿಗಲಿದೆ. ಈ ಮಾರಾಟದ ಸಮಯದಲ್ಲಿ ಕೆಲವು ಫ್ಲಾಶ್ ಸೇಲ್ಸ್ ಸೇರಿದಂತೆ ಗ್ರಾಹಕರಿಗೆ ಸಾಕಷ್ಟು ಆಫರ್ ಗಳು ಲಭ್ಯವಿವೆ. ಹೀಗಾಗಿ ನೀವು ಆನ್ ಲೈನ್ ನಲ್ಲಿ ಖರೀದಿ ಮಾಡುವಾಗ ಚುರುಕಾಗಿರಬೇಕು. ಆಗ ಮಾತ್ರ ಅಮೆಜಾನ್ ಪ್ರೈಮ್ ಡೇ ಸೇಲ್ ನ ಉತ್ತಮ ಡೀಲ್ ಗಳನ್ನು ಪಡೆಯಲು ಸಾಧ್ಯವಿದೆ. ನೀವು ಆ ದಿನಗಳಂದು ಖರೀದಿ ಮಾಡಲು ಬಯಸುವ ವಸ್ತುಗಳ ವಿಶ್ ಲಿಸ್ಟ್ ಕೂಡ ಸಿದ್ಧಪಡಿಸಿಡಬಹುದು. ಇದ್ರಿಂದ ನಿಮಗೆ ಜುಲೈ  23 ಹಾಗೂ 24ರಂದು ಆನ್ ಲೈನ್ ಶಾಪಿಂಗ್ ಮಾಡೋದು ಸುಲಭವಾಗಲಿದೆ.

ಮೊದಲ ಬಾರಿ 80 ದಾಟಿದ ರು. ಮೌಲ್ಯ: ದಿನದಂತ್ಯಕ್ಕೆ 79.98ರಲ್ಲಿ ಸ್ಥಿರ

ಹೆಚ್ಚು ಉಳಿತಾಯ ಮಾಡೋದು ಹೇಗೆ?
ಈ ಮಾರಾಟದ ಸಮಯದಲ್ಲಿ ಪ್ರೀಪೇಯ್ಡ್ ಹಾಗೂ ಇಎಂಐ ವಹಿವಾಟುಗಳ ಮೇಲೆ ಐಸಿಐಸಿಐ ಬ್ಯಾಂಕ್ ( ICICI Bank) ಹಾಗೂ ಎಸ್ ಬಿಐ (SBI) ಕಾರ್ಡ್ ಗಳನ್ನು ಬಳಸಿದ್ರೆ ಹೆಚ್ಚುವರಿ ಕೊಡುಗೆಗಳಿವೆ. ಹೀಗಾಗಿ ಲಭ್ಯವಿರುವ ಡಿಸ್ಕೌಂಟ್ ಆಫರ್ ಗಳ ಮೇಲೆ ಹೆಚ್ಚುವರಿ ಹಣ ಉಳಿತಾಯ ಮಾಡಲು ಅವಕಾಶವಿದೆ. ಇನ್ನು ನಿಮ್ಮ ಮನೆಯಲ್ಲಿರುವ ಹಳೆಯ ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ವಸ್ತುಗಳಿಗೆ ಎಕ್ಸ್ ಚೇಂಜ್ ಆಫರ್ ಕೂಡ ಇದೆ. 

ಯಾರು ಪ್ರಯೋಜನ ಪಡೆಯಬಹುದು?
ಈ ಅಮೆಜಾನ್ ಮಾರಾಟ ಪ್ರೈಮ್ ಸದಸ್ಯರಿಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ನೀವು ಈ ಮಾರಾಟ ಮೇಳದ ಸಮಯದಲ್ಲಿ ಅಗತ್ಯ ಹಾಗೂ ದುಬಾರಿ ವಸ್ತುಗಳ ಖರೀದಿ ಮೇಲೆ ಹಣ ಉಳಿಸಲು ಬಯಸಿದ್ರೆ ಪ್ರೈಮ್ ಸದಸ್ಯತ್ವ ಪಡೆಯೋದು ಅಗತ್ಯ.

ಹಬ್ಬಗಳ ಋತು ಶುರು..! ಅಡುಗೆ ಎಣ್ಣೆ ಬೆಲೆಯಲ್ಲಿ 30 ರೂಪಾಯಿ ಇಳಿಕೆ ಮಾಡಿದ ಅದಾನಿ ವಿಲ್ಮರ್‌!

ಏನೆಲ್ಲ ನಿರೀಕ್ಷೆ ಮಾಡ್ಬಹುದು?
*ಅಲೆಕ್ಸ್ ಸಾಧನಗಳ (Alexa devices) ಮೇಲೆ ಶೇ.55ರ ತನಕ ಡಿಸ್ಕೌಂಟ್
*ಮೊಬೈಲ್ ಗಳು ಹಾಗೂ ಅಸೆಸ್ಸರೀಸ್ ಮೇಲೆ ಶೇ.40ರ ತನಕ ಉಳಿತಾಯ 
*ಲ್ಯಾಪ್ ಟಾಪ್ಸ್, ಹೆಡ್ ಫೋನ್ಸ್ ಹಾಗೂ ಇನ್ನೂ ಅನೇಕ ವಸ್ತುಗಳ ಮೇಲೆ ಶೇ.75 ತನಕ ಆಫರ್ 
*ಗೃಹ ಹಾಗೂ ಅಡುಗೆ ಮನೆ ಸಲಕರಣೆಗಳ ಮೇಲೆ ಶೇ.75ರ ತನಕ ಡಿಸ್ಕೌಂಟ್
*ಅತ್ಯಾಧುನಿಕ ಸ್ಮಾರ್ಟ್ ಟಿವಿಗಳು, ವಾಷಿಂಗ್ ಮಷಿನ್ಸ್ ಹಾಗೂ ಇತರ ಗೃಹೋಪಯೋಗಿ ಉಪಕರಣಗಳ ಮೇಲೆ ಶೇ. 60ರ ತನಕ ಉಳಿತಾಯಕ್ಕೆ ಅವಕಾಶ
*ಅಮೆಜಾನ್ ಫ್ಯಾಷನ್ ಮೇಲೆ ಶೇ.80ರ ತನಕ ಉಳಿತಾಯಕ್ಕೆ ಅವಕಾಶ

Disclaimer:ಈ ಲೇಖನದಲ್ಲಿಉಲ್ಲೇಖಿಸಿರುವ ಆಫರ್ ಗಳಿಗೆ ನಾವು ಜವಾಬ್ದಾರರಲ್ಲ. ಇದು ಅಮೆಜಾನ್ ಪ್ರೈಮ್ ಡೇ ದಿನ, ಅಮೆಜಾನ್ ನಿರ್ಧಾರಗಳಿಗೆ ಅನುಗುಣವಾಗಿ ಬದಲಾಗಬಹುದು. 
 

Follow Us:
Download App:
  • android
  • ios