Asianet Suvarna News Asianet Suvarna News

ಅಮೆಜನಾ ಫ್ಲಿಪ್‌ಕಾರ್ಟ್‌ನಲ್ಲಿ ಇಂಡಿಪೆಂಡೆನ್ಸ್ ಆಫರ್, ಐಫೋನ್ 15 ಸೇರಿ ಹಲವು ವಸ್ತು ಮೇಲೆ ಭರ್ಜರಿ ಡಿಸ್ಕೌಂಟ್!

ದೇಶ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಗೆ ಸಜ್ಜಾಗುತ್ತಿದೆ. ಇದರ ನಡುವೆ ಇ ಕಾಮರ್ಸ್ ದೈತ್ಯ ಕಂಪನಿಗಳಾದ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್ ಭರ್ಜರಿ ಡಿಸ್ಕೌಂಟ್ ಸೇಲ್ ಫೆಸ್ಟಿವಲ್ ಆಫರ್ ಘೋಷಿಸಿದೆ.

Amazon flipkart Independence day sale offers massive discounts on iphone tv home appliance and more ckm
Author
First Published Aug 9, 2024, 8:47 AM IST | Last Updated Aug 9, 2024, 8:56 AM IST

ಬೆಂಗಳೂರು(ಆ.09) ಭಾರತ ಇದೀಗ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ದೇಶದ ಜನತೆಯನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ಸ್ವಾತಂತ್ರ ಸಂಭ್ರಮ ಎಲ್ಲೆಡೆ ಕಳೆಗಟ್ಟುತ್ತಿದೆ. ಇದರ ನಡುವೆ ಭಾರತದಲ್ಲಿ ಇ ಕಾಮರ್ಸ್ ದೈತ್ಯ ಕಂಪನಿಗಳಾಗಿ ಬೆಳೆದಿರುವ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್ ಪ್ರತಿ ವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ಫೆಸ್ಟಿವಲ್ ಆಫರ್ ಘೋಷಿಸಿದೆ. ಈಗಾಗಲೇ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಆರಂಭಗೊಂಡಿದೆ.

ಸ್ಮಾರ್ಟ್‌ಫೋನ್, ಟಿವಿ, ಗೃಹ ಬಳಕೆ ವಸ್ತುಗಳು, ಫರ್ನೀಚರ್, ಬಟ್ಟೆ, ಫೂಟ್‌ವೇರ್, ಸೌಂದರ್ಯ ವರ್ಧಕ ಸೇರಿದಂತೆ ಹಲವು ವಸ್ತುಗಳ ಮೇಲೆ ಸೇಲ್ ಆಫರ್ ನೀಡಲಾಗಿದೆ. ಪ್ರಮುಖವಾಗಿ ವಿವಿಧ ಬಗೆಯ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ. ಇದೀಗ ಗ್ರಾಹಕರು ಆನ್‌ಲೈನ್ ಮೂಲಕ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ಜಿಯೋ ಗ್ರಾಹಕರಿಗೆ ಮುಕೇಶ್ ಅಂಬಾನಿ ಗಿಫ್ಟ್: 336 ದಿನ ವ್ಯಾಲಿಟಿಡಿ ಸೇರಿ 4 ರಿಚಾರ್ಜ್ ಪ್ಲಾನ್ ಜಾರಿ!

ಫ್ಲಿಪ್‌ಕಾರ್ಟ್ ಇಂಡಿಪೆಂಡೆನ್ಸ್ ಡೇ ಫೆಸ್ಟಿವಲ್ ಆಫರ್
ಫ್ಲಿಪ್‌ಕಾರ್ಟ್ ಇಂಡಿಪೆಂಡೆನ್ಸ್ ಡೇ ಸೇಲ್ ಆಫರ್‌ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಗರಿಷ್ಠ ಶೇಕಡಾ 80 ರಷ್ಟು ರಿಯಾಯಿತಿ ಆಫರ್ ನೀಡಿದೆ. ಇನ್ನು ಗೃಹ ಬಳಕೆ ವಸ್ತುಗಳು, ಫರ್ನೀಚರ್ ಸೇರಿದಂತೆ ಇತರ ಕೆಲ ವಸ್ತುಗಳ ಮೇಲೆ ಶೇಕಡಾ 50 ರಿಂದ 80 ರಷ್ಟು ಡಿಸ್ಕೌಂಟ್ ಆಫರ್ ನೀಡಲಾಗಿದೆ. ಕ್ಯಾಮೆರಾ ಬೆಲೆ ಕೇವಲ 5,034 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಟ್ಯಾಬ್ ಬೆಲೆ 7.999 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇನ್ನು ಸ್ಮಾರ್ಟ್‌ಫೋನ್‌ಗಳಾದ ಐಫೋನ್ 15, ಸ್ಯಾಮ್ಸಸಂಗ್, ಗ್ಯಾಲಕ್ಸಿ 23, ಗ್ಯಾಲಕ್ಸಿ S23 FE, ವಿವೋ ಟಿ3 5ಜಿ, ಮೊಟೋರಲೋ ಎಡ್ಜ್ 50 ಫ್ಯುಶನ್ ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗಿದೆ. 

ಇದರ ಜೊತೆಗೆ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಐಸಿಐಸಿಐ ಬ್ಯಾಂಕ್, ಬರೋಡಾ ಬ್ಯಾಂಕ್, ಯೆಸ್ ಬ್ಯಾಂಕ್ ಸೇರಿದಂತೆ ಇತರ ಕೆಲ ಬ್ಯಾಂಕ್ ಕಾರ್ಡ್ ಬಳಸಿ ಖರೀದಿ ಮಾಡಿದರೆ ಶೇಕಡಾ 10 ರಷ್ಟು ಡಿಸ್ಕೌಂಟ್ ಆಫರ್ ನೀಡಿದೆ. ಇನ್ನು ಇಎಂಐ ಮೂಲಕ ವಸ್ತುಗಳನ್ನು ಖರೀದಿಸಿದರೆ ಬಡ್ಡಿ ರಹಿತಿ, ಹೆಚ್ಚುವರಿ ಶುಲ್ಕ ರಹಿತಿ ಆಫರ್‌ಗಳನ್ನು ನೀಡಲಾಗಿದೆ. ಫ್ಲಿಪ್‌ಕಾರ್ಟ್ ಇಂಡಿಪೆಂಡೆನ್ಸ್ ಡೇ ಸೇಲ್ ಆಗಸ್ಟ್ 6 ರಿಂದ ಆರಂಭಗೊಂಡಿದೆ.

ಅಮೇಜಾನ್ ಫ್ರೀಡಂ ಫೆಸ್ಟಿವಲ್ ಸೇಲ್
ಅಮೆಜಾನ್ ಫ್ರೀಡಂ ಫೆಸ್ಟಿವಲ್ ಸೇಲ್ ಕೂಡ ಆರಂಭಗೊಂಡಿದೆ. ಐಫೋನ್ 15 ಮೇಲೆ 9,000 ರೂಪಾಯಿ ಕಡಿತ ಮಾಡಿದ್ದಾರೆ. ಐಫೋನ್, ಸ್ಯಾಮ್ಸಂಗ್ ಗ್ಯಾಲಕ್ಸಿ ಸೇರಿದಂತೆ ಇತರ ಕೆಲ ಫೋನ್‌ಗಳ ಮೇಲೆ ಶೇಕಡಾ 65 ರಷ್ಟು ಡಿಸ್ಕೌಂಟ್ ಆಫರ್ ಘೋಷಿಸಿದೆ. ಗೃಹ ಬಳಕೆ ವಸ್ತುಗಳು ಸೇರಿದಂತೆ ಟಿವಿ, ಲ್ಯಾಪ್‌ಟಾಪ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲೂ ಗರಿಷ್ಠ ಶೇಕಡಾ 65ರಷ್ಟು ಆಫರ್ ನೀಡಲಾಗಿದೆ. ಆಗಸ್ಟ್ 6 ರಿಂದ ಅಮೆಜಾನ್ ಫ್ರೀಡಂ ಸೇಲ್ ಆಫರ್ ಆರಂಭಗೊಂಡಿದೆ.

ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ಟಾಟಾ, SUV ಕಾರುಗಳಿಗೆ 1.4 ಲಕ್ಷ ರೂ ವರೆಗೆ ರಿಯಾಯಿತಿ!
 

Latest Videos
Follow Us:
Download App:
  • android
  • ios