ನವದೆಹಲಿ(ಅ.22): ಕೊರೋನಾ ವೈರಸ್‌ನಿಂದ ಆರ್ಥಿಕ ಹಿಂಜರಿತ ಉಂಟಾಗಿರುವ ಹೊರತಾಗಿಯೂ ಹಬ್ಬದ ಋುತುವಿನ ನಿಮಿತ್ತ ದೇಶದಲ್ಲಿ ಅಮೆಜಾನ್‌, ಫ್ಲಿಪ್‌ಕಾರ್ಟ್‌, ಸ್ನಾ್ಯಪ್‌ಡೀಲ್‌ನಂತಹ ಇ- ಕಾಮರ್ಸ್‌ ಕಂಪನಿಗಳು ನಡೆಸಿದ ವಹಿವಾಟಿನಲ್ಲಿ ಕೇವಲ 4.5 ದಿನಗಳಲ್ಲಿ 22 ಸಾವಿರ ಕೋಟಿ ರು. ವ್ಯಾಪಾರವಾಗಿದೆ ಎಂದು ರೆಡ್‌ಸೀರ್‌ ಕನ್ಸಲ್ಟಿಂಗ್‌ ಕಂಪನಿ ತಿಳಿಸಿದೆ.

ಈ ಬಾರಿ ಮಾರಾಟ ಮೇಳದಲ್ಲಿ ಮಹಾನಗರಗಳಿಗಿಂತ ಸಣ್ಣ ಸಣ್ಣ ನಗರದ ಗ್ರಾಹಕರು ಹೆಚ್ಚಿನ ವಸ್ತುಗಳನ್ನು ಖರೀದಿಸಿದ್ದಾರೆ. ಎಂದಿನಂತೆ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಈ ಸಲದ ಹಬ್ಬದ ಋುತುವಿನಲ್ಲಿ ಇ- ಕಾಮರ್ಸ್‌ ಕಂಪನಿಗಳ ಮಾರಾಟ 51 ಸಾವಿರ ಕೋಟಿ ರು. ದಾಟುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.

ಫ್ಲಿಪ್‌ಕಾರ್ಟ್‌ ಆಯೋಜಿಸಿದ್ದ ಬಿಗ್‌ಬಿಲಿಯನ್‌ ಡೇಸ್‌ ಹಾಗೂ ಅಮೆಜಾನ್‌ನ ಗ್ರೇಟ್‌ ಇಂಡಿಯನ್‌ ಪೆಸ್ಟಿವಲ್‌ ಸೇಲ್‌ ಭಾರೀ ಯಶಸ್ಸು ಕಂಡಿದೆ. ಆರು ದಿನಗಳ ಮಾರಾಟ ಉತ್ಸವದ ಮೊದಲ 4.5 ದಿನದ ಅವಧಿಯಲ್ಲಿ 22,000 ಕೋಟಿ ರು. ವ್ಯಾಪಾರವಾಗಿದೆ.

ಮಾರುಕಟ್ಟೆಸಂಶೋಧನಾ ಸಂಸ್ಥೆ ರೆಸ್‌ ಸೀರ್‌ ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ.