ಭಾರತದಲ್ಲಿ ಅಮೆಜಾನ್ AWS 1.05 ಲಕ್ಷ ಕೋಟಿ ರೂ ಹೂಡಿಕೆ, ಪ್ರತಿ ವರ್ಷ 1.32 ಲಕ್ಷ ಉದ್ಯೋಗ ಸೃಷ್ಟಿ!
ಇ ಕಾಮರ್ಸ್ ಕ್ಷೇತ್ರದಲ್ಲಿ ಅಮೇಜಾನ್ ವಿಶ್ವದ ದೈತ್ಯನಾಗಿ ಬೆಳೆದು ನಿಂತಿದೆ. ಇದೀಗ ಭಾರತದಲ್ಲಿ 1.05 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಸಜ್ಜಾಗಿದೆ. ಇದರಿಂದ ಭಾರತದಲ್ಲಿ ಪ್ರತಿ ವರ್ಷ 1.32 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.
ನವದೆಹಲಿ(ಮೇ.18): ಭಾರತದಲ್ಲಿ ಉದ್ಯೋಗ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ ಅವಿರತ ಶ್ರಮ ಪಡುತ್ತಿದೆ. ಈಗಾಗಲೇ ಸರ್ಕಾರಿ ಇಲಾಖೆಗಳ ಉದ್ಯೋಗ ಭರ್ತಿ ಕಾರ್ಯ ಭರದಿಂದ ಸಾಗಿದೆ. ಇದರ ಜೊತೆಗೆ ವಿದೇಶಿ ಬಂಡವಾಳ ಹೂಡಿಕೆ ದಾಖಲೆ ಪ್ರಮಾಣದಲ್ಲಿ ಹರಿದು ಬಂದಿದೆ. ಇದರಿಂದ ಖಾಸಗಿ ವಲಯದಲ್ಲೂ ಉದ್ಯೋಗ ಸೃಷ್ಟಿಯಾಗಿದೆ. ಇದೀಗ ಅಮೇಜಾನ್ ಭಾರತದಲ್ಲಿ ಪ್ರತಿ ವರ್ಷ 1.32 ಲಕ್ಷ ಮಂದಿಗೆ ಉದ್ಯೋಗ ನೀಡಲಿದೆ. ಇದಕ್ಕೆ ಮುಖ್ಯ ಕಾರಣ, ಅಮೇಜಾನ್ ಭಾರತದಲ್ಲಿ 1.05 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ.
ಅಮೇಜಾನ್ ವೆಬ್ ಸರ್ವೀಸ್(AWS) ಭಾರತದಲ್ಲಿ ವಹಿವಾಟು ವಿಸ್ತರಿಸುತ್ತಿದೆ. ಕ್ಲೌಡ್ ಸರ್ವೀಸ್ ಸೌಲಭ್ಯ ವಿಸ್ತರಣೆಗಾಗಿ 1.05 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಇದರಿಂದ ಪ್ರತಿ ವರ್ಷ 1,31,700 ಉದ್ಯೋಗ ಸೃಷ್ಟಿಯಾಗಲಿದೆ. ಇವೆಲ್ಲವೂ ಪೂರ್ಣಾವಧಿ ಉದ್ಯೋಗ ಅನ್ನೋದು ಮತ್ತೊಂದು ವಿಶೇಷತೆ. ಅಮೆಜಾನ್ ವೆಬ್ ಸರ್ವೀಸ್ ಹೂಡಿಕೆ ಹಾಗೂ ವ್ಯಾಪಾರ ವಹಿವಾಟು ವಿಸ್ತರಣೆಯಿಂದ 2030ರ ವೇಳೆ ಅಮೆಜಾನ್ ಭಾರತದ ಆರ್ಥಿಕತೆಗೆ 23.3 ಬಿಲಿಯನ್ ಅಮೆರಿಕನ್ ಡಾಲರ್ ಕೊಡುಗೆ ನೀಡಲಿದೆ.
Make Money : ಆರ್ಡರ್ ಹಾಕೋದು ಮಾತ್ರವಲ್ಲ ಹಣ ಸಂಪಾದನೆಗೂ ಅಮೆಜಾನ್ ಬಳಸಿ
ಅಮೆಜಾನ್ ವೆಬ್ ಸರ್ವೀಸ್ 2016ರಿಂದ 20222ರ ವರೆಗೆ ಭಾರತದಲ್ಲಿ 3 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದೆ. ಇದೀಗ ವಹಿವಾಟು ವಿಸ್ತರಣೆ ಹಾಗೂ ಹೂಡಿಕೆ ಕುರಿತು ಮಾನಾಡಿದ ಅಮೆಜಾನ್ ವೆಬ್ ಸರ್ವೀಸ್ ಸಿಇಒ ಆ್ಯಡಮ್ ಸೆಲಿಪ್‌ಸ್ಕೈ, ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಮೂಲಭೂತ ಸೌಕರ್ಯಗಳು ಗಣನೀಯವಾಗಿ ಅಭಿವೃದ್ಧಿಯಾಗಿದೆ. ಇದೀಗ ಭಾರತ ಡಿಜಿಟಲ್ ಪವರ್ ಹೌಸ್ ಆಗಿ ರೂಪುಗೊಂಡಿದೆ. ವಿಶ್ವದಲ್ಲೇ ಆರ್ಥಿಕ ಹಿಂಜರಿತಗಳು ತಲೆನೋವಾಗಿ ಪರಿಣಮಿಸಿದ್ದರೆ, ಭಾರತ ಸುಸ್ಥಿರ ಆರ್ಥಿಕತೆ ಹೊಂದಿದೆ. ಹೀಗಾಗಿ ಭಾರತದಲ್ಲಿ ಹೂಡಿಕೆ ಮೂಲಕ ವ್ಯವಾಹರ ವಿಸ್ತರಣೆಗೊಳ್ಳುತ್ತಿದೆ ಎಂದು ಆ್ಯಡಮ್ ಹೇಳಿದ್ದಾರೆ.
ಸ್ಟೋರೇಜ್, ರೊಬೊಟಿಕ್ಸ್, ಆರ್ಟಿಫೀಶಿಯಲ್ ಇಂಟೆಲೆಜನ್ಸ್ ಸೇರಿದಂತೆ 200ಕ್ಕೂ ಸರ್ವೀಸ್‌ಗಳನ್ನು ಅಮೆಜಾನ್ ವೆಬ್ ಸರ್ವೀಸ್ ನೀಡುತ್ತಿದೆ. ಕೇಂದ್ರ ಸರ್ಕಾರದ ಡಿಜಿಲಾಕರ್ ಹಾಗೂ ಕೋವಿನ್ ಆ್ಯಪ್ ನಿರ್ವಹಣೆಯನ್ನು ಇದೆ ಅಮೆಜಾನ್ ವೆಬ್ ಸರ್ವೀಸ್ ಮಾಡುತ್ತಿದೆ.
ಇ ಕಾಮರ್ಸ್ ದೈತ್ಯರ ಸ್ವಾಮ್ಯಕ್ಕೆ ಲಗ್ಗೆ ಇಡಲಿದೆ ಭಾರತದ ಒಎನ್‌ಡಿಸಿ
ಅಮೆಜಾನ್ ವೆಬ್ ಸರ್ವೀಸ್ ಹೂಡಿಕೆಯಿಂದ ಭಾರತದ ಡಿಜಿಟಲ್ ಆರ್ಥಿಕತೆ ವೇಗವನ್ನು ಇಮ್ಮಡಿಗೊಳಿಸಲಿದೆ. ಭಾರತದಲ್ಲಿ ಡಿಜಿಟಲ್ ಇಂಡಿಯಾವನ್ನು ಮತ್ತಷ್ಟು ಸುಭದ್ರ ಹಾಗೂ ಸುಸ್ಥಿರಗೊಳಿಸಲು ಕೇಂದ್ರ ಸರ್ಕಾರ ಈಗಾಗಲೇ ಹಲವು ಕಾರ್ಯಕ್ರಮ ರೂಪಿಸಿದೆ. ಐಟಿ ಸಚಿವಾಲಯ ಕ್ಲೌಡ್ ಹಾಗೂ ಡೇಟಾ ಸೆಂಟರ್ ನೀತಿಯನ್ನು ಸುಲಲಿತ ಹಾಗೂ ಸುಸ್ಥಿರತೆಗೊಳಿಸುತ್ತಿದೆ. ಭಾರತದ ಕ್ಲೌಡ್ ಬೆಳವಣಿಗೆಯಲ್ಲಿ ಅಮೆಜಾನ್ ವೆಬ್ ಸರ್ವೀಸ್ ಪಾತ್ರ ಮಹತ್ವವಾಗಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.