ಅಮೆಜಾನ್, ಫ್ಲಿಪ್ ಕಾಟರ್ಟ್ ಮೇಲೆ ಅಕ್ರಮ ಕಾಸ್ಮೆಟಿಕ್ಸ್ ಮಾರಾಟ ಆರೋಪ! ಔಷಧ ನಿಯಂತ್ರಕ ಸಂಸ್ಥೆ ಡಿಸಿಜಿಐನಿಂದ ನೋಟಿಸ್ ಜಾರಿ! ದೇಶೀಯ ಮತ್ತು ವಿದೇಶಿ ಅಕ್ರಮ ಬ್ರ್ಯಾಂಡ್‌ಗಳ ಮಾರಾಟ ಆರೋಪ! ನಕಲಿ ಉತ್ಪನ್ನ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ ಅಮೆಜಾನ್

ನವದೆಹಲಿ(ಅ.24): ಅಕ್ರಮ ಕಾಸ್ಮೆಟಿಕ್‌ಗಳನ್ನು ಮಾರಾಟ ಮಾಡುತ್ತಿರುವ ಆರೋಪದನ್ವಯ ಅಮೆಜಾನ್‌ ಸೇರಿದಂತೆ ಕೆಲವು ಇ-ಕಾಮರ್ಸ್‌ ಜಾಲತಾಣಗಳಿಗೆ ದೇಶದ ಔಷಧ ನಿಯಂತ್ರಕ ಸಂಸ್ಥೆಯಾದ ಡಿಸಿಜಿಐ ನೋಟಿಸ್‌ ನೀಡಿದೆ.ಡ್ಕಲಬೆರಕೆ ಮತ್ತು ಅನುಮೋದನೆ ಇಲ್ಲದ ಕಾಸ್ಮಿಟಿಕ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇವುಗಳಲ್ಲಿ ವಿದೇಶಿ ಬ್ರ್ಯಾಂಡ್‌ಗಳೂ ಇವೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂಬ ದೂರನ್ನು ಡಿಸಿಜಿಐ ಅನುಮೋದಿಸಿ ಈ ಸಂಸ್ಥೆಗಳಿಗೆ ನೋಟಿಸ್‌ ಜಾರಿ ಮಾಡಿದೆ. 

ದೂರಿನ ಅನ್ವಯ ಅ.5 ಮತ್ತು 6ರಂದು ದೇಶದ ನಾನಾ ಕಡೆ ಔಷಧ ಪರೀಕ್ಷಕ ಅಧಿಕಾರಿಗಳು ದಾಳಿ ಮಾಡಿದ್ದರು. ಕೆಲವು ಕಡೆ ಮಾನ್ಯತೆ ಇಲ್ಲದೆಯೇ ದೇಶೀಯವಾಗಿ ಉತ್ಪಾದಿಸಿದ ಪರವಾನಿಗೆ ಇಲ್ಲದ ಕಾಸ್ಮಿಟಿಕ್ಸ್‌ಗಳು ಪತ್ತೆಯಾಗಿದ್ದವು. 

ಇಂಥ ದೋಷಗಳಿಗೆ ದಂಡದ ಜೊತೆಗೆ ಸೆರೆವಾಸದ ಶಿಕ್ಷೆ ವಿಧಿಸುವ ಅವಕಾಶವೂ ಕಾನೂನಿನಲ್ಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆಜಾನ್‌ ಇಂಡಿಯಾ ವಕ್ತಾರರು, 'ಅಕ್ರಮ ಅಥವಾ ನಕಲಿ ಉತ್ಪನ್ನಗಳನ್ನು ಸರಬರಾಜು ಮಾಡುವ ಮಾರಾಟಗಾರರ ವಿರುದ್ಧ ನಮ್ಮ ಕಂಪನಿ ಕಠಿಣ ಕ್ರಮ ಜರಗಿಸಲಿದೆ ಎಂದು ಭರವಸೆ ನೀಡಿದ್ದಾರೆ.