Asianet Suvarna News Asianet Suvarna News

ಟೆಸ್ಲಾ, ಟ್ವಿಟರ್ ಓನರ್ ಎಲಾನ್ ಮಸ್ಕ್ ಈ ಅಭ್ಯಾಸದಿಂದ ಸಿರಿವಂತರಾಗಿದ್ದಂತೆ!

ಶ್ರೀಮಂತ ವ್ಯಕ್ತಿ ಹಿಂದೆ ಸಾಕಷ್ಟು ಪರಿಶ್ರಮವಿರುತ್ತೆ. ಅವರ ಒಳ್ಳೆ ಅಭ್ಯಾಸ, ಹವ್ಯಾಸಗಳೇ ಅವರನ್ನು ಇಲ್ಲಿಗೆ ತಂದು ನಿಲ್ಲಿಸಿರುತ್ತೆ. ನಾವು ಅವರ ದಾರಿ ಹಿಡಿ ಬೇಕೆಂದ್ರೆ ಅವರು ನಡೆದು ಬಂದ ಹಾದಿಯ ಬಗ್ಗೆ ತಿಳಿದಿರಬೇಕು.
 

Alon Musk Ex Wife Justine Wilson Shares How His Husband Became Most Successful And Rich Person With These Habits roo
Author
First Published Sep 25, 2023, 12:12 PM IST

ಎಲೋನ್ ಮಸ್ಕ್ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ಅವರ ಮಾಜಿ ಪತ್ನಿ ಜಸ್ಟಿನ್ ಮಸ್ಕ್ ಒಳ್ಳೆಯ ಮಾತುಗಾರ್ತಿ ಹಾಗೂ ಬರಹಗಾರ್ತಿ. ಸಾಮಾಜಿಕ ಜಾಲತಾಣದಲ್ಲಿ ಜಸ್ಟಿನ್ ಮಸ್ಕ್ ಅನೇಕ ವಿಡಿಯೋಗಳನ್ನು ಪೋಸ್ಟ್ ಮಾಡ್ತಿರುತ್ತಾರೆ. ಈಗ ಜಸ್ಟಿನ್ ಮಸ್ಕ್ ಅವರ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಅದ್ರಲ್ಲಿ ಅವರು ಎಲೋನ್ ಮಸ್ಕ್ ಇಷ್ಟೊಂದು ಯಶಸ್ವಿಯಾಗಲು ಎರಡು ಕಾರಣಗಳನ್ನು ಹೇಳಿದ್ದಾರೆ. ಅವರ ಎರಡು ಅಭ್ಯಾಸ ಅವರನ್ನು ಇಷ್ಟೊಂದು ಎತ್ತರಕ್ಕೆ ತಂದು ನಿಲ್ಲಿಸಿದೆ ಎಂದು ಜಸ್ಟಿನ್ ಮಸ್ಕ್ ಹೇಳಿದ್ದಾರೆ. 

ಎಲೋನ್ ಮಸ್ಕ್ (Elon Musk) ಬೆಳವಣಿಗೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ ಎನ್ನುವ ಜಸ್ಟಿನ್ ಮಸ್ಕ್ (Justine Musk), ಅವರು ತಮ್ಮ ಶಕ್ತಿಯನ್ನು ಹೇಗೆ ಉಳಿಸಿಕೊಂಡು ತಮ್ಮ ಗುರಿ ತಲುಪುವ ಪ್ರಯತ್ನ ನಡೆಸ್ತಾರೆ ಎಂಬುದನ್ನೂ ಹೇಳಿದ್ದಾರೆ. ಎಲೋನ್ ಮಸ್ಕ್ ರಂತೆ ಆಗ್ಬೇಕು ಎಂಬುದು ಅನೇಕರ ಕನಸು. ಅವರ ಯಶಸ್ಸಿನ ಬಗ್ಗೆ ಅವರ ಮಾಜಿ ಪತ್ನಿ ಹೇಳಿದ್ದನ್ನು ಕೇಳಿ, ಅದರ ಪಾಲನೆಗೆ ಪ್ರಯತ್ನ ಮಾಡಿದ್ರೆ ನೀವೂ ಅವರ ದಾರಿಯಲ್ಲಿ ಸಾಗ್ಬಹುದು. ನಾವಿಂದು ಎಲೋನ್ ಮಸ್ಕ್ ಬಗ್ಗೆ ಜಸ್ಟಿನ್ ಮಸ್ಕ್ ಹೇಳಿದ್ದೇನು ಎಂಬುದನ್ನು ಹೇಳ್ತೇವೆ.

ಭಾರತದ ನಂ. 1 ಸ್ಮಾರ್ಟ್‌ಫೋನ್ ರಫ್ತುದಾರ ಯಾವ್ದು ಗೊತ್ತಾ? ದೇಶದ ನಂ. 1 ಬ್ರ್ಯಾಂಡ್‌ಗೆ ಶಾಕ್‌!

ನಾನು ಎಲೋನ್ ಮಸ್ಕ್ ಬೆಳವಣಿಗೆಯನ್ನು ಕಂಡಿದ್ದೇನೆ : ಎಲೋನ್ ಮಸ್ಕ್ ಒಂದು ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರು. ಅವರ ತಂದೆಯ ಕೆಲಸದಿಂದ ಅವರ ಕುಟುಂಬ ಮಧ್ಯಮ ವರ್ಗದ ಹಂತಕ್ಕೆ ಬಂದು ನಿಂತಿತ್ತು. ಆದ್ರೆ ತಂದೆಗೆ ದೊಡ್ಡ ನಷ್ಟವಾಯ್ತು. ಆಗ ಕುಟುಂಬ ಮತ್ತೆ ಕೆಟ್ಟ ಸ್ಥಿತಿ ಎದುರಿಸಬೇಕಾಯ್ತು. ತಂದೆಯಿಂದ ಮಗ ಎಲೋನ್ ಮಸ್ಕ್ ಗೆ ಯಾವುದೇ ಆಸ್ತಿಪಾಸ್ತಿ ಸಿಕ್ಕಿರಲಿಲ್ಲ. ಎಲೋನ್ ಮಸ್ಕ್ ಬಗ್ಗೆ ಅನೇಕ ಬಾರಿ ಮಾತನಾಡಿರುವ ಜಸ್ಟಿನ್ ಮಸ್ಕ್, ನಾನು ಯಶಸ್ಸು ಕಂಡ ವ್ಯಕ್ತಿಯನ್ನು ಮದುವೆಯಾಗಿದ್ದೆ. ಎಲೋನ್ ಮಸ್ಕ್ ಹಂತ ಹಂತವಾಗಿ ಬೆಳೆಯೋದನ್ನು ನಾನು ನೋಡಿದ್ದೇನೆ ಎನ್ನುತ್ತಾರೆ ಜಸ್ಟಿನ್ ಮಸ್ಕ್.

ಶಕ್ತಿಯನ್ನು ಹೀಗೆ ಉಳಿಸಿಕೊಳ್ತಾರೆ ಎಲೋನ್ ಮಸ್ಕ್ :   ಎಲೋನ್ ಮಸ್ಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ ಜಸ್ಟಿನ್ ಮಸ್ಕ್, ಎಲೋನ್ ಮಸ್ಕ್ ಎರಡು ಅಭ್ಯಾಸಗಳನ್ನು ನಾನು ಗಮನಿಸಿದ್ದೇನೆ. ಒಂದು, ಅವರು ಹೆಚ್ಚು ಕೆಲಸ ಮಾಡ್ತಾರೆ. ಎಷ್ಟೆಂದ್ರೆ ನೀವು ಅದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಜಸ್ಟಿನ್ ಮಸ್ಕ್. ಎರಡನೇಯದೆಂದ್ರೆ ನೋ ಎನ್ನುವ ಪದ ಎನ್ನುತ್ತಾರೆ ಜಸ್ಟಿನ್. ಅವರು ತಮ್ಮ ಶಕ್ತಿ, ಸಮಯ ಹಾಗೂ ಗಮನವನ್ನು ಹಾಳು ಮಾಡುವ ವ್ಯಕ್ತಿಗೆ ನೋ ಎನ್ನುವ ಪದವನ್ನು ಹೆಚ್ಚು ಬಳಸ್ತಾರೆ ಎನ್ನುತ್ತಾರೆ ಜಸ್ಟಿನ್. ಅವರು ಹೀಗೆ ಇಲ್ಲ ಎನ್ನುವ ಪದ ಬಳಕೆ ಮಾಡೋದ್ರಿಂದ ಅವರ ಶಕ್ತಿ, ಸಂಪನ್ಮೂಲ ಉಳಿಯುತ್ತದೆ. ಅದನ್ನು ಅವರು ತಮ್ಮ ಗುರಿ ಸಾಧನೆಗೆ ಬಳಸಿಕೊಳ್ತಾರೆ. ಪ್ರತಿಯೊಂದು ನೋ ಎಂಬ ಪದದಲ್ಲೂ ಒಂದು ಯಸ್ ಎನ್ನುವ ಆಳವಾದ  ಪದ ಅಡಗಿರುತ್ತದೆ ಎನ್ನುತ್ತಾರೆ ಜಸ್ಟಿನ್. 

ಅಲ್ಪ ಆದಾಯದಲ್ಲೇ ದುಡ್ಡಿನ ಉಳಿತಾಯ ಹೇಗೆ? ಮೂರು ಟಿಪ್ಸ್​ ಕೊಟ್ಟ ನಟಿ ಅದಿತಿ ಪ್ರಭುದೇವ

ನಿಮ್ಮ ಆದ್ಯತೆ ಅರ್ಥ ಮಾಡಿಕೊಳ್ಳಿ : ನೀವು ಏನು ಬಯಸುತ್ತೀರಿ ಎಂಬುದು ಗೊತ್ತಾದಾಗ ಮಾತ್ರ ನಿಮಗೆ ಯಸ್ ಹಾಗೂ ಬೇರೆಯವರಿಗೆ ನೋ ಪದ ಹೇಗೆ ಬಳಸಬೇಕು ಎಂಬುದು ನಿಮಗೆ ತಿಳಿಯುತ್ತದೆ ಎನ್ನುತ್ತಾರೆ ಜಸ್ಟಿನ್. ನಿಮ್ಮ ಆದ್ಯತೆ ನಿಮಗೆ ತಿಳಿದಿಲ್ಲದೆ ಹೋದಾಗ ನೀವು ಎಲ್ಲದಕ್ಕೂ ಎಸ್ ಎನ್ನುತ್ತೀರಿ ಎಂಬುದು ಜಸ್ಟಿನ್ ಮಸ್ಕ್ ಅಭಿಪ್ರಾಯ. 

ನೋ ಎಂಬುದರಲ್ಲಿದೆ ಇಷ್ಟೊಂದು ಲಾಭ : ನಾನು ನಮಗೆ ಹೆಚ್ಚು ಮಹತ್ವ ನೀಡಿದಾಗ ನಮ್ಮ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ. ನಮಗಿಷ್ಟವಿಲ್ಲದ ಕೆಲಸ ಮಾಡಲು ಮನಸ್ಸು ಒಪ್ಪದೆ ನಾವು ನೋ ಎಂದಾಗ ನಾವು ನಮ್ಮ ಗುರಿ ನಿಶ್ಚಯಿಸುತ್ತೇವೆ ಹಾಗೆಯೇ ಆತ್ಮವಿಶ್ವಾಸವನ್ನು ಅನಿಭವಿಸುತ್ತೇವೆ ಎನ್ನುತ್ತಾರೆ ಜಸ್ಟಿನ್ ಮಸ್ಕ್. 
 

Follow Us:
Download App:
  • android
  • ios