ಬೆಂಗಳೂರು ಮೂಲದ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಅಕ್ಷರ ಫೌಂಡೇಷನ್ ತನ್ನ ಪರಿಣಾಮದ 25ವರ್ಷಗಳನ್ನು ಸಂಭ್ರಮಿಸುತ್ತಿದ್ದು 'ಪ್ರತಿ ಮಗುವೂ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದೆ ಮತ್ತು ಚೆನ್ನಾಗಿ ಕಲಿಯುತ್ತಿದೆ' ಎನ್ನುವುದನ್ನು ದೃಢೀಕರಿಸಲು...
2024-25 ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಗಳ ವರದಿ, ಗ್ರಾಮೀಣ ಶಿಕ್ಷಣ ಮತ್ತು ಸಮುದಾಯದ ಪ್ರಗತಿಗೆ ಉತ್ತೇಜನ:
ಬೆಂಗಳೂರು ಮೂಲದ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಅಕ್ಷರ ಫೌಂಡೇಷನ್ ತನ್ನ ಪರಿಣಾಮದ 25ವರ್ಷಗಳನ್ನು ಸಂಭ್ರಮಿಸುತ್ತಿದ್ದು 'ಪ್ರತಿ ಮಗುವೂ ಶಾಲೆಯಲ್ಲಿದ್ದು, ಮತ್ತು ಚೆನ್ನಾಗಿ ಕಲಿಯುತ್ತಿರಲಿ' ಎನ್ನುವುದನ್ನು ದೃಢೀಕರಿಸಲು ಬದ್ಧವಾಗಿದ್ದು 2024-25 ಗ್ರಾಮ ಪಂಚಾಯಿತಿ ಮಟ್ಟದ ಗಣಿತದ ಸ್ಪರ್ಧೆಗಳ ವರದಿಯನ್ನು ಇಂದು ಪ್ರಕಟಿಸಿದೆ. ಗಣಿತ ಕಲಿಕಾ ಅಭಿಯಾನ(ಜಿಕೆಎ) ಉಪಕ್ರಮದ ಅಡಿಯಲ್ಲಿ ಗಣಿತ ಕಲಿಕಾ ಚಳವಳಿಗೆ ಕರ್ನಾಟಕ ಸರ್ಕಾರ ಬೆಂಬಲ ನೀಡಿದೆ.

ಅಕ್ಷರ ಫೌಂಡೇಷನ್ (Akshara Foundation) ಕೆಲ ವರ್ಷಗಳಿಂದ ಗ್ರಾಮ ಪಂಚಾಯಿತಿ ಮಟ್ಟದ ಗಣಿತದ ಸ್ಪರ್ಧೆಗಳ ಮೂಲಕ ಸಮುದಾಯ-ಪ್ರೇರಿತ ಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸಿದೆ. ಈ ಸ್ಪರ್ಧೆಗಳು ಗ್ರಾಮೀಣ ಸಮುದಾಯಗಳಲ್ಲಿ ಮಹತ್ತರ ಕಾರ್ಯಕ್ರಮಗಳಾಗಿದ್ದು ಶಾಲೆಯ ಹೊರಗಿನ, ಪೂರ್ವಾಗ್ರಹವಿಲ್ಲದ ಮತ್ತು ಪಾರದರ್ಶಕ ಮೌಲ್ಯಮಾಪನಗಳಾಗಿದ್ದು ಅವು 4,5 ಮತ್ತು 6ನೇ ತರಗತಿಯ ಮಕ್ಕಳಲ್ಲಿನ ಪ್ರಸ್ತುತದ ಗಣಿತ ಕಲಿಕೆಯ ಮಟ್ಟಗಳನ್ನು ಮೌಲ್ಯಮಾಪನ ಮಾಡುತ್ತವೆ.
ಕೋಟಿ ಕೋಟಿ ಒಡತಿಯಾದರೂ 30 ವರ್ಷದಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ!... ಕಾರಣ..!?
2024-25ರಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಸ್ಪರ್ಧೆಗಳನ್ನು ಕರ್ನಾಟಕದ 28 ಜಿಲ್ಲೆಗಳಲ್ಲಿ ನಡೆಸಲಾಯಿತು. 4,890 ಗ್ರಾಮ ಪಂಚಾಯಿತಿಗಳ 26,188 ಶಾಲೆಗಳ 5,95,517 ಮಕ್ಕಳನ್ನು 30 ದಿನಗಳಲ್ಲಿ ಮೌಲ್ಯಮಾಪನ ಮಾಡಲಾಯಿತು. ಸಾಂಪ್ರದಾಯಿಕ ಮೌಲ್ಯಮಾಪನಗಳಂತೆ ಅಲ್ಲದೆ ಈ ಸ್ಪರ್ದೆಗಳನ್ನು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಗಣಿತದ ತಿಳಿವಳಿಕೆಯ ಸಾಮರ್ಥ್ಯವನ್ನು ತಿಳಿಯಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ, ಅವು ಶಾಲೆಯ ಪರಿಸರದ ಹೊರಗಡೆ ನಡೆಸಲಾಗುತ್ತಿದ್ದು ಪೋಷಕರು, ಶಿಕ್ಷಕರು ಮತ್ತು ವಿಸ್ತಾರ ಸಮುದಾಯಕ್ಕೆ ಮಕ್ಕಳ ಕಲಿಕಾ ಮಟ್ಟಗಳ ಕುರಿತು ಚರ್ಚೆಗಳನ್ನು ಉತ್ತೇಜಿಸುತ್ತದೆ.
2024-25ರ ವರದಿಯ ಪ್ರಮುಖಾಂಶಗಳಲ್ಲಿ:
2024-25 ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಗಳಲ್ಲಿ 4, 5 ಮತ್ತು 6ನೇ ತರಗತಿಯ ವಿದ್ಯಾರ್ಥಿಗಳ ಸಾಧನೆಯಲ್ಲಿ ಆಸಕ್ತಿದಾಯಕ ಲಿಂಗ ಆಧರಿತ ಪ್ರವೃತ್ತಿಗಳನ್ನು ಅನಾವರಣಗೊಳಿಸಿದೆ.
ಅವರ ಸಾಧನೆಯನ್ನು ಅರ್ಥ ಮಾಡಿಕೊಳ್ಳಲು ನಾವು ಮೂರು ಕಾರ್ಯಕ್ಷಮತೆಯ ಬ್ಯಾಂಡ್ ಗಳನ್ನು ಸೃಷ್ಟಿಸಿದ್ದು ಅವುಗಳಲ್ಲಿ ಪ್ರತಿಯೊಂದೂ 20 ಪ್ರಶ್ನೆಗಳಲ್ಲಿ 8ಕ್ಕೆ ಸರಿಯಾದ ಉತ್ತರ ನೀಡುವವರ ಶೇಕಡಾವಾರು ಸೂಚಿಸುತ್ತದೆ:
• 0-40% ಗುಂಪು
• 40-70% ಗುಂಪು
• 70-100% ಗುಂಪು
• 4ನೇ ತರಗತಿ: ಭಾಗವಹಿಸಿದ 53.1% ಮಂದಿ ಬಾಲಕಿಯರಾಗಿದ್ದು ಬಾಲಕರು 46.9% ಇದ್ದರು. ಬಾಲಕಿಯರು 70%-100% ಸಾಧನೆಯ ಬ್ಯಾಂಡ್ ನಲ್ಲಿ ಬಹುತೇಕ 4 ಶೇಕಡಾವಾರು ಅಂಶಗಳಲ್ಲಿ ಬಾಲಕರ ಸಾಧನೆ ಮೀರಿದ್ದು ಬಾಲಕರು ಕೆಳಗಿನ ಅಂಚಿನಿಂದ 2.7% ಹಿಂದುಳಿದರು. 4ನೇ ತರಗತಿಯ 44% ಮಕ್ಕಳು ಭಾಗಾಕಾರವನ್ನು ನಿರ್ವಹಿಸಬಲ್ಲವರಾದರೆ 48% ಮಂದಿ ವ್ಯವಕಲನ ಮಾಡಬಲ್ಲವರಾಗಿದ್ದರು.

• 5ನೇ ತರಗತಿ: ಲಿಂಗ ಭಾಗವಹಿಸುವಿಕೆಯು 54.1% ಬಾಲಕಿಯರು ಮತ್ತು 45.9% ಬಾಲಕರಿಗೆ ಕೊಂಚ ಬದಲಾಯಿತು. 4ನೇ ತರಗತಿಯಲ್ಲಿದ್ದಂತೆ ಬಾಲಕಿಯರು ಹೆಚ್ಚಿನ ಶೇಕಡಾವಾರು ಬ್ಯಾಂಡ್ ಗಳಲ್ಲಿ ಉತ್ತಮ ಸಾಧನೆ ತೋರಿದರೆ, 70%-100% ಬ್ಯಾಂಡ್ ನಲ್ಲಿ ಸುಮಾರು 2 ಶೇಕಡಾವಾರು ಅಂಶಗಳಲ್ಲಿ ಬಾಲಕರನ್ನು ಮೀರಿದರು. ಕೆಳಗಿನ ಅಂಚಿನಿಂದ ಬಾಲಕರು ಬಾಲಕಿಯರಿಗಿಂತ 1.6% ಹಿಂದುಳಿದರು. ನಿರ್ದಿಷ್ಟ ಕೌಶಲ್ಯಗಳ ದೃಷ್ಟಿಯಿಂದ 3ನೇ ತರಗತಿಯ 38% ವಿದ್ಯಾರ್ಥಿಗಳು ವಿಭಜನೆಯನ್ನು ನಿರ್ವಹಿಸಬಲ್ಲವರಾದರೆ (4ನೇ ತರಗತಿಗಿಂತ ಕುಸಿತ), 52% ವಿದ್ಯಾರ್ಥಿಗಳು ವ್ಯವಕಲನದಲ್ಲಿ ಪರಿಣಿತಿ ಹೊಂದಿದ್ದರು (4ನೇ ತರಗತಿಯಿಂದ ಸುಧಾರಣೆ).
• 6ನೇ ತರಗತಿ: ಭಾಗವಹಿಸಿದವರಲ್ಲಿ 53.2% ಬಾಲಕಿಯರಿದ್ದರು, ಬಾಲಕರು 46.8% ಇದ್ದರು. 70%-100% ಸಾಧನೆಯ ಬ್ಯಾಂಡ್ ನಲ್ಲಿ ಬಾಲಕಿಯರು ಬಾಲಕರನ್ನು 2.5 ಶೇಕಡಾವಾರು ಅಂಶಗಳಲ್ಲಿ ಮೀರಿದ್ದು, ಕೆಳಗಿನ ಅಂಚಿನಲ್ಲಿ ಬಾಲಕರು 3.1% ಹಿಂದುಳಿದಿದ್ದಾರೆ. ಈ ಲಿಂಗ ಸಾಧನೆಯ ಪ್ರವೃತ್ತಿಗಳು ಪ್ರಾರಂಭಿಕ ತರಗತಿಗಳಲ್ಲಿ ಪ್ರತಿಫಲಿಸಿವೆ.
ಪ್ರಮುಖಾಂಶಗಳು:
1. ಲಿಂಗದ ಅಂತರ: ಎಲ್ಲ ತರಗತಿಗಳಲ್ಲೂ ಬಾಲಕಿಯರು ಹೆಚ್ಚಿನ ಸಾಧನೆಯ ಗುಂಪುಗಳಲ್ಲಿ ಬಾಲಕರನ್ನು ಮೀರಿ ಸಾಧನೆ ತೋರಿದ್ದು, ಬಾಲಕರು ಕೆಳ ಹಂತದಲ್ಲಿ ಬಾಲಕಿಯರಿಗಿಂತ ಹಿಂದುಳಿದಿರುವುದು ಕಂಡುಬರುತ್ತದೆ.
2. ಕೌಶಲ್ಯ ಪ್ರಾವೀಣ್ಯತೆ ಪ್ರವೃತ್ತಿಗಳು: ಇವು ತರಗತಿಗಳ ನಡುವಿನ ನಿರ್ದಿಷ್ಟ ಸಾಮರ್ಥ್ಯಗಳಲ್ಲಿ ಗುರುತಿಸಬಲ್ಲ ಏರಿಳಿತಗಳಾಗಿವೆ. ವ್ಯವಕಲನ ಕೌಶಲ್ಯಗಳು 4ನೇ ತರಗತಿಯಿಂದ 5ನೇ ತರಗತಿಗೆ ಸುಧಾರಿಸಿದರೆ ವಿಭಜನೆಯ ಕೌಶಲ್ಯಗಳು ಕುಸಿದಿದ್ದು ಇವು ಉದ್ದೇಶಿತ ಮಧ್ಯಪ್ರವೇಶದ ಕ್ಷೇತ್ರಗಳನ್ನು ಸೂಚಿಸಿದೆ.
ಈ ಪ್ರವೃತ್ತಿಗಳು ಲಿಂಗಾಧಾರಿತ ಕಲಿಕಾ ವ್ಯತ್ಯಾಸಗಳನ್ನು ನಿವಾರಿಸುವಲ್ಲಿ ಮತ್ತು ಬಾಲಕರನ್ನು ಬೆಂಬಲಿಸಲು ಅದರಲ್ಲಿಯೂ ವಿಭಜನೆಯಂತಹ ಮೂಲಭೂತ ಕೌಶಲ್ಯಗಳಲ್ಲಿ ವಿಶೇಷವಾಗಿ ರೂಪಿಸಲಾದ ಮಧ್ಯಪ್ರವೇಶಗಳ ಅಗತ್ಯವನ್ನು ತೋರಿಸಿದೆ.
ಈ ವರದಿಯ ಕುರಿತು ಅಕ್ಷರ ಫೌಂಡೇಷನ್ ಅಧ್ಯಕ್ಷರಾದ ಶ್ರೀ ಅಶೋಕ್ ಕಾಮತ್, 'ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಾವು ಗ್ರಾಮೀಣ ಕರ್ನಾಟಕದಲ್ಲಿ ಗಣಿತದ ಕಲಿಕೆ ಲಭ್ಯ ಮತ್ತು ಸಕ್ರಿಯವಾಗಿರುವಂತೆ ಪರಿಸರ ಸೃಷ್ಟಿಸಲು ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ.
ಗಣಿತಶಾಸ್ತ್ರವು ಮಗುವಿನ ಶಿಕ್ಷಣದ ಪ್ರಮುಖ ಘಟ್ಟವಾಗಿದೆ ಎಂದು ನಾವು ನಂಬಿದ್ದು ಇದು ಎಲ್ಲ ಭವಿಷ್ಯದ ಕಲಿಕೆ ಮತ್ತು ಪ್ರಗತಿಗೆ ತಳಹದಿ ನಿರ್ಮಿಸುತ್ತದೆ. ಗಣಿತ ಕಲಿಕಾ ಆಂದೋಲನದ ಮೂಲಕ ನಮ್ಮ ಪ್ರಯತ್ನಗಳು ಸುದೀರ್ಘ ಪರಿಣಾಮವನ್ನು ಬೀರಲಿದ್ದು ಸಮುದಾಯಗಳು, ಪೋಷಕರು, ಶಿಕ್ಷಕರು ಮತ್ತು ಮಕ್ಕಳನ್ನು ಒಗ್ಗೂಡಿಸುವ ಮೂಲಕ ಗ್ರಾಮೀಣ ಕರ್ನಾಟಕದಾದ್ಯಂತ ಗಣಿತಶಾಸ್ತ್ರದ ಶಿಕ್ಷಣವನ್ನು ಉನ್ನತೀಕರಿಸುತ್ತದೆ ಎಂಬ ವಿಶ್ವಾಸ ನಮ್ಮದು.
ಸ್ಥಳೀಯ ಗ್ರಾಮ ಪಂಚಾಯಿತಿಗಳು, ಶಿಕ್ಷಣ ಇಲಾಖೆ ಮತ್ತು ನಮ್ಮ ಸ್ವಯಂಸೇವಕರು ತೋರಿರುವ ಈ ಸಹಯೋಗವು ಅಸಾಧಾರಣವಾದುದು. ಈ ವರದಿಯು ಸ್ಪರ್ಧಿಗಳಲ್ಲಿ ಅಪಾರ ಉತ್ಸಾಹದ ಭಾಗವಹಿಸುವಿಕೆ ಕಂಡಿದ್ದೇ ಅಲ್ಲದೆ ಗ್ರಾಮೀಣ ಮತ್ತು ಸೀಮಿತ ಸಂಪನ್ಮೂಲಗಳನ್ನು ಒಳಗೊಂಡ ಪ್ರದೇಶಗಳಲ್ಲಿ ಮಕ್ಕಳು ಎದುರಿಸುವ ಸವಾಲುಗಳ ಕುರಿತು ಮೌಲ್ಯಯುತ ಒಳನೋಟಗಳನ್ನು ಕೂಡಾ ನೀಡಿದೆ.
ಅಕ್ಷರ ಫೌಂಡೇಷನ್ ನಲ್ಲಿ ನಾವು ಈ ಅಂತರಗಳನ್ನು ತುಂಬಲು ಮತ್ತು ಪ್ರತಿ ಮಗುವೂ ಅಭಿವೃದ್ಧಿ ಹೊಂದುವ ಮತ್ತು ಅವರ ಕಲಿಕಾ ಪ್ರಯಾಣದಲ್ಲಿ ಶ್ರೇಷ್ಠರಾಗುವ ಭವಿಷ್ಯ ನಿರ್ಮಿಸಲು ಬದ್ಧರಾಗಿದ್ದೇವೆ' ಎಂದರು.
ಡಾ ರಾಜ್‌ಕುಮಾರ್ ಬಗೆಗಿನ ಎಲ್ಲಾ ವದಂತಿ-ವಿವಾದಗಳಿಗೆ ಅಂದೇ ತೆರೆ ಎಳೆದಿದ್ದಾರೆ ಪಾರ್ವತಮ್ಮ.. ಇಲ್ನೋಡಿ!
ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಗಳು ಹಲವಾರು ಪಾಲುದಾರರ ಸತತ ಬೆಂಬಲದಿಂದ ಸ್ಪಷ್ಟವಾಗಿ ಗ್ರಾಮೀಣ ಶಿಕ್ಷಣದಲ್ಲಿ ಪರಿವರ್ತನೀಯ ಶಕ್ತಿ ಎಂದು ಸಾಬೀತುಪಡಿಸಿವೆ. ಅಕ್ಷರ ಸಿಂಪೋಸಿಯಂ `ಇಟ್ ಆಲ್ ಆಡ್ಸ್ ಅಪ್ 202-25 ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ದೆಯ ವರದಿಗಳನ್ನು ಎಚ್.ಡಿ.ಎಫ್.ಸಿ. ಬ್ಯಾಂಕ್ ಪರಿವರ್ತನ್ ಪ್ರಾಯೋಜಿಸಿದೆ.
ಮಾಧ್ಯಮ ವಿವರಗಳಿಗೆ ಅಥವಾ ಅಕ್ಷರ ಫೌಂಡೇಷನ್ ಉಪಕ್ರಮಗಳಿಗೆ ದಯವಿಟ್ಟು ಸಂಪರ್ಕಿಸಿ:
ಅಕ್ಷರ ಫೌಂಡೇಷನ್ ನಿಂದ:
ಸುಶ್ಮಿತಾ ಅನಂತ್ | sushmita@akshara.org.in |+91 98862 50519
ಪಿ.ಆರ್. ಪಂಡಿತ್ ಹವಾಸ್ ರೆಡ್ ನಿಂದ:
ಶ್ವೇತಾ ಬಿ.ಎನ್. | Shwetha.n@prpundithavasred.com | +919741864300
ಪ್ರಭು ಕೆ. | prabhu.k@prpundithavasred.com | +91 8123466894
