ಮುಂಬೈ (ಜ. 03): ಏರ್‌ ಇಂಡಿಯಾವನ್ನು ಖಾಸಗಿಕರಣಗೊಳಿಸದೇ ಸರ್ಕಾರಕ್ಕೆ ಬೇರೆ ಆಯ್ಕೆ ಇಲ್ಲ. ಏರ್‌ ಇಂಡಿಯಾ ಸುಮಾರು 80,000 ಕೋಟಿ ರು. ನಷ್ಟದಲ್ಲಿದೆ. ಖಾಸಗಿಕರಣ ಪ್ರಕ್ರಿಯೆಗೆ ಉದ್ಯೋಗಿಗಳ ಸಹಕಾರ ಅಗತ್ಯ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಗುರುವಾರ ಹೇಳಿದ್ದಾರೆ.

‘ಮಹಾರಾಜ’ನ ಮಾರಾಟ! ಸತತ ನಷ್ಟದಲ್ಲಿರುವ ಏರ್‌ಇಂಡಿಯಾವನ್ನು ಖರೀದಿಸುವವರು ಯಾರು?

ಏರ್‌ ಇಂಡಿಯಾದ 13 ಯೂನಿಯನ್‌ಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಏರ್‌ ಇಂಡಿಯಾ ಖಾಸಗಿಕರಣದ ಬಳಿಕ ಉದ್ಯೋಗಕ್ಕೆ ಸಂಬಂಧಿಸಿದ ಕಳವಳವನ್ನು ಬಗೆ ಹರಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಏರ್‌ ಇಂಡಿಯಾ ಸಂಸ್ಥೆ ಮಾರಾಟಕ್ಕಿಟ್ಟಿದ್ದರೂ ಖರೀದಿದಾರರೇ ಸಿಗ್ತಿಲ್ಲ!

ಈ ವೇಳೆ ಏರ್‌ ಇಂಡಿಯಾವನ್ನು ಖಾಸಗಿಯವರಿಗೆ ಹಸ್ತಾಂತರಿಸುವುದಕ್ಕೆ ಯೂನಿಯನ್‌ಗಳು ವಿರೋಧ ವ್ಯಕ್ತಪಡಿಸಿವೆ. ಸರ್ಕಾರದ ಬೆಂಬಲ ದೊರೆತರೆ ಸಂಸ್ಥೆಯನ್ನು ಮುನ್ನಡೆಸುವ ಸಾಮರ್ಥ್ಯವನ್ನು ಉದ್ಯೋಗಿಗಳು ಹೊಂದಿದ್ದಾರೆ ಎಂದು ಪ್ರತಿಪಾದಿಸಿವೆ.

ಆದರೆ, ಏರ್‌ ಇಂಡಿಯಾವನ್ನು ಉಳಿಸಿಕೊಳ್ಳುವುದಕ್ಕೆ ಅಸಹಾಯಕತೆ ವ್ಯಕ್ತಪಡಿಸಿದ ಹರ್ದೀಪ್‌ ಸಿಂಗ್‌ ಪುರಿ, ಏರ್‌ ಇಂಡಿಯಾ ಈಗಾಗಲೇ 80 ಸಾವಿರ ಕೋಟಿ ರು. ನಷ್ಟದಲ್ಲಿದೆ. ಯಾವ ತಜ್ಞರ ಬಳಿಯೂ ಇದಕ್ಕೆ ಪರಿಹಾರ ಇಲ್ಲ. ಖಾಸಗಿಕರಣ ಮಾತ್ರ ಸರ್ಕಾರದ ಬಳಿ ಇರುವ ಏಕೈಕ ಆಯ್ಕೆ ಎಂದು ಹೇಳಿದ್ದಾರೆ.