ಬಿಜಿಂಗ್(ಏ.19): ಚೀನಾದ ಮಹತ್ವಾಕಾಂಕ್ಷಿ ಯೋಜನೆಯಾದ ಒನ್ ಬೆಲ್ಟ್, ಒನ್ ರೋಡ್ ಯೋಜನೆಯನ್ನು ಭಾರತ ತೀವ್ರವಾಗಿ ವಿರೋಧಿಸುತ್ತಿದೆ. ನೆಲ ಮತ್ತು ಸಮುದ್ರ ಮಾರ್ಗದ ಮೂಲಕ ತನ್ನನ್ನು ಸುತ್ತುವರೆಯುವ ಚೀನಾದ ತಂತ್ರವಿದು ಎಂದು ಭಾರತ ವಾದಿಸುತ್ತಿದೆ.

ಅದರಲ್ಲೂ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್(CPEC) ಕುರಿತು ತೀವ್ರ ಆಕ್ಷೇಪ ಹೊಂದಿರುವ ಭಾರತ, ಈ ಮಾರ್ಗ ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೋಗುವುದಕ್ಕೆ ಭಾರತ ವಿರೋಧಿಸುತ್ತಿದೆ.

ಸುಮಾರು 60 ಬಿಲಿಯನ್ ಯುಎಸ್ ಡಾಲರ್ ಮೊತ್ತದಲ್ಲಿ ಸಿಪಿಇಸಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಇದು ಭಾರತವನ್ನು ಕಟ್ಟಿಹಾಕುವ ಕುತಂತ್ರ ಎಂಬುದು ಗೋಡೆ ಮೇಲಿನ ಬರಹದಷ್ಟೇ ಸತ್ಯ.

ಈ ಮಧ್ಯೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಯನ್ನು ಭಾರತ ಒಪ್ಪಿಕೊಂಡರೆ ಆರ್ಥಿಕವಾಗಿ ಅದಕ್ಕೆ ಲಾಭವಾಗಲಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ. ಈ ಮೂಲಕ ಭಾರತದ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಚೀನಾ ಮುಂದಾಗಿರುವುದು ಸ್ಪಷ್ಟವಾಗಿದೆ.

ಇದೇ ಏ.25-27ರಂದು ಬಿಜಿಂಗ್ ನಲ್ಲಿ ಬೆಲ್ಟ್ ರೋಡ್ ಫೋರಂ(BRF) ಸಭೆ ನಡೆಯಲಿದ್ದು, ಭಾರತ ಈ ಸಭೆಯನ್ನು ಎರಡನೇಯ ಬಾರಿಯೂ ಧಿಕ್ಕರಿಸಿದೆ. ಅಲ್ಲದೇ ಸಭೆಯಲ್ಲಿ ತಾನು ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಬೆಲ್ಟ್ ರೋಡ್ ಯೋಜನೆ ಭಾರತಕ್ಕೂ ಕೂಡ ಲಾಭದಾಯಕವಾಗಲಿದ್ದು, ಈ ಯೋಜನೆಯನ್ನು ಭಾರತ ಒಪ್ಪಿಕೊಳ್ಳುವುದು ಒಳ್ಳೆಯದು ಎಂದು ಚೀನಾ ಪ್ರತಿಕ್ರಿಯೆ ನೀಡಿದೆ.

ಸುಮಾರು ಒಂದು ಟ್ರಿಲಿಯನ್ ಯುಎಸ್ ಡಾಲರ್ ಮೊತ್ತದ BRF ಯೋಜನೆಗೆ ಚೀನಾ ಈಗಾಗಲೇ ಮುನ್ನುಡಿ ಬರೆದಿದ್ದು, BRF ಸಭೆಗೆ ಸುಮಾರು 150 ದೇಶ ಮತ್ತು 90 ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಸಭೆಯಲ್ಲಿ ಭಾಗವಹಿಸುತ್ತಿವೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.