ಮಾರುಕಟ್ಟೆಯಲ್ಲಿ ಮುಗಿಯಿತಾ ಸಾವರಿನ್ ಗೋಲ್ಡ್ ಬಾಂಡ್ ಅಧ್ಯಾಯ?
ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು 15% ರಿಂದ 6% ಕ್ಕೆ ಇಳಿಕೆ ಮಾಡಿದೆ. ಇದು ಆರ್‌ಬಿಐ ಇಶ್ಯು ಮಾಡುವ ಸಾವರಿನ್ ಗೋಲ್ಡ್ ಬಾಂಡ್ ಮುಕ್ತಾಯಕ್ಕೂ ಕಾರಣವಾಗಬಹುದು.
ಮುಂಬೈ (ಜು.27): ಕೇಂದ್ರ ಸಾವರಿನ್ ಗೋಲ್ಡ್ ಬಾಂಡ್‌ಗಳ (ಎಸ್‌ಜಿಬಿ) ಯೋಜನೆಯನ್ನು ಹಿಂಪಡೆಯಬಹುದು ಅಥವಾ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ. ಸರ್ಕಾರದ ಮಟ್ಟಿಗೆ ಇದು ತುಂಬಾ ದುಬಾರಿ ಎಂದು ಪರಿಗಣನೆ ಮಾಡಿದೆ ಎಂದು ಈ ಕುರಿತಾಗಿ ಮಾಹಿತಿ ಇರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕಗಳನ್ನು ಕೇಂದ್ರ ಸರ್ಕಾರ ಶೇ. 15 ರಿಂದ ಶೇ. 6ಕ್ಕೆ ಇಳಿಸಿತ್ತು. ಕಸ್ಟಮ್ಸ್ ಸುಂಕ ಇಳಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಸಾವರಿನ್‌ಗೋಲ್ಡ್ ಬಾಂಡ್‌ಗಳ ಬೇಡಿಕೆಯನ್ನು ತಗ್ಗಿಸುವ ನಿರೀಕ್ಷೆ ಇದೆ. ತೆರಿಗೆ ಕಡಿತದ ನಂತರ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಎಸ್‌ಜಿಬಿ ಬೆಲೆಗಳು 2-5 ಪ್ರತಿಶತದಷ್ಟು ಕುಸಿದವು.
2015ರ ನವೆಂಬರ್ 30 ರಂದು ನೀಡಲಾದ ಎಸ್‌ಜಿಬಿಯ ಮೊದಲ ಭಾಗವು ನವೆಂಬರ್ 2023 ರಲ್ಲಿ ಅದರ ರಿಡಮ್ಶನ್ ತಲುಪಿಇತ್ತು. ಆಗಸ್ಟ್ 2016 ರಲ್ಲಿ ನೀಡಲಾದ ಎಸ್‌ಜಿಬಿ ಸ್ಕೀಮ್ 2016-17 -ಸರಣಿ 1 ರಲ್ಲಿ ಭಾಗವಹಿಸಿದ ಹೂಡಿಕೆದಾರರು ತಮ್ಮ ಅಂತಿಮ ರಿಡಮ್ಶನ್‌ನ ಸಮೀಪದಲ್ಲಿದ್ದಾರೆ. ಆಗಸ್ಟ್ 2024 ರ ಮೊದಲ ವಾರ ಇದರ ರಿಡಮ್ಶನ್ ಆಗಲಿದೆ. ಸಾವರಿನ್ ಗೋಲ್ಡ್ ಬಾಂಡ್ 2016-17 -ಸರಣಿ I ನ ಮೂಲ ಸಂಚಿಕೆ ಬೆಲೆಯು 2.75 ಶೇಕಡಾ ವಾರ್ಷಿಕ ಬಡ್ಡಿ ದರದೊಂದಿಗೆ 3,119 ರೂಪಾಯಿ ಆಗಿತ್ತು. ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ಲಿಮಿಟೆಡ್ ಪ್ರಕಟಿಸಿದ 999 ಶುದ್ಧತೆಯ ಚಿನ್ನದ ಸರಾಸರಿ ಬೆಲೆಯನ್ನು ರಿಡೆಂಪ್ಶನ್ ದಿನಾಂಕದ ಹಿಂದಿನ ಮೂರು ವ್ಯವಹಾರ ದಿನಗಳವರೆಗೆ ಬಳಸಿಕೊಂಡು SGB ಗಳ ರಿಡೆಂಪ್ಶನ್ ಬೆಲೆಯನ್ನು ಲೆಕ್ಕಹಾಕಲಾಗುತ್ತದೆ. ಹೂಡಿಕೆದಾರರಿಗೆ ಅವರು ಎಸ್‌ಜಿಬಿ ಮೇಲೆ ಹೂಡಿದ ಮೊತ್ತ ಹಾಗೂ ಆ ದಿನದ ಚಿನ್ನದ ಬೆಲೆಯ ಆಧಾರದ ಮೇಲೆ ಮೆಚ್ಯುರಿಟಿಯ ವೇಳೆ ಹಣ ನೀಡಲಾಗುತ್ತದೆ. "ನಾವು ವರ್ಷಕ್ಕೆ 9-11 ಪ್ರತಿಶತದಷ್ಟು ಆದಾಯವನ್ನು ನೀಡಿದ್ದೇವೆ ಮತ್ತು ಅದರ ಮೇಲೆ 2.5% ಬಡ್ಡಿಯನ್ನು ನೀಡಿದ್ದೇವೆ" ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರು.
ಪ್ರಸ್ತುತ ಸಾವರಿನ್‌ಗೋಲ್ಡ್ ಬಾಂಡ್‌ಗೆ ಆರ್‌ಬಿಐ ವಾರ್ಷಿಕವಾಗಿ ಶೇ. 2.5ರಷ್ಟು ಬಡ್ಡಿ ನೀಡುತ್ತದೆ. ಇದು ಸಂಪೂರ್ಣ ಎಸ್‌ಜಿಬಿ ಬಾಂಡ್ ಇರಿಸಿಕೊಳ್ಳುವ ಎಂಟೂ ವರ್ಷಕ್ಕೂ ಒಂದೇ ರೀತಿ ಇರುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಆರ್‌ಬಿಐ ಇದನ್ನು ಹೂಡಿಕೆದಾರರಿಗೆ ನೇರವಾಗಿ ಪಾವತಿ ಮಾಡುತ್ತದೆ. ರಿಸ್ಕ್‌ನಲ್ಲಿ ನೀವು ಮ್ಯೂಚುವಲ್ ಫಂಡ್‌ನಲ್ಲಿ ಶೇ. 10 ರಿಂದ 11ರಷ್ಟು ರಿಟರ್ನ್ ಪಡೆಯುತ್ತೀರಿ. ಆದರೆ, ಎಸ್‌ಜಿಬಿಯಲ್ಲಿ ಯಾವುದೇ ರಿಸ್ಕ್ ಇರೋದಿಲ್ಲ. ಎಸ್‌ಜಿಬಿ ತುಂಬಾ ಆಕರ್ಷಕವಾಗಿದ್ದರೂ, ಇದರಲ್ಲಿ ಎಕಾನಾಮಿಕ್ ರೇಷನಲ್ ಇರೋದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾವರಿನ್ ಗೋಲ್ಡ್ ಬಾಂಡ್ ನಾಲ್ಕನೇ ಸರಣಿ ಇಂದಿನಿಂದ ಪ್ರಾರಂಭ; ಆನ್ ಲೈನ್ ಖರೀದಿ ಹೇಗೆ? ಇಲ್ಲಿದೆ ಮಾಹಿತಿ
ಈ ವರ್ಷದ ಫೆಬ್ರವರಿಯಿಂದ ಆರ್‌ಬಿಐ ಯಾವುದೇ ಸಾವರಿನ್‌ಗೋಲ್ಡ್ ಬಾಂಡ್ ಅನ್ನು ಇಶ್ಯು ಮಾಡಿಲ್ಲ. ಚಿನ್ನದ ಮೇಲಿನ ಆಮದು ಸುಂಕವನ್ನು 2012 ರಲ್ಲಿ ಶೇಕಡಾ 2 ರಿಂದ 2012-13 ರ ಬಜೆಟ್‌ನಲ್ಲಿ ಶೇಕಡಾ 4 ಕ್ಕೆ ಸತತವಾಗಿ ಹೆಚ್ಚಿಸಲಾಗಿದೆ. 2013ರಲ್ಲಿ ಚಿನ್ನಾಭರಣಗಳ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೇ.15ಕ್ಕೆ ಸರ್ಕಾರ ಹೆಚ್ಚಿಸಿತ್ತು. ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲು ಸರ್ಕಾರವು ಹಲವಾರು ಕಾರಣಗಳನ್ನು ಉಲ್ಲೇಖ ಮಾಡಿತ್ತು. ಇದರಲ್ಲಿ ಚಿನ್ನದ ಕಳ್ಳಸಾಗಣೆಯನ್ನು ಕಡಿಮೆ ಮಾಡುವ ಕ್ರಮ ಮತ್ತು ಹೆಚ್ಚುತ್ತಿರುವ ಚಾಲ್ತಿ ಖಾತೆ ಕೊರತೆನ್ನು ಕಡಿಮೆ ಮಾಡುವ ನಿಟ್ಟಿನ ಪ್ರಯತ್ನ ಎಂದು ಹೇಳಿತ್ತು.
NPS ವಿತ್ ಡ್ರಾನಿಂದ ಹಿಡಿದು ಸಾವರಿನ್ ಗೋಲ್ಡ್ ಬಾಂಡ್ ತನಕ ಫೆಬ್ರವರಿಯಲ್ಲಿ ಈ 6 ಹಣಕಾಸು ನಿಯಮಗಳಲ್ಲಿಬದಲಾವಣೆ
“ಸರ್ಕಾರವು ಅದನ್ನು ಹಿಂದಕ್ಕೆ ಪಡೆಯಬೇಕಾಗಿತ್ತು.. ಚಿನ್ನವು ಪ್ರಮುಖ ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿದೆ. ಇದು ನಮ್ಮ ರಫ್ತಿಗೆ ಕೊಡುಗೆ ನೀಡುವ ಕ್ಷೇತ್ರವಾಗಿದೆ ಎಂದು ಮೂಲವೊಂದು ತಿಳಿಸಿದೆ.