ನವದೆಹಲಿ[ಅ.10]: ಈರುಳ್ಳಿ ಬಳಿಕ ಈಗ ಟೊಮೊಟೊ ಬೆಲೆ ಗಗನಕ್ಕೇರಿದೆ. ನವದೆಹಲಿ ಮಾರುಕಟ್ಟೆಯಲ್ಲಿ ಬುಧವಾರ ಪ್ರತಿ ಕೆ.ಜಿ. ಟೊಮೊಟೊ ಬೆಲೆ 80 ರು.ಗೆ ತಲುಪಿದೆ.

ಕಳೆದ ವಾರ ಈರುಳ್ಳಿ ಬೆಲೆಯಲ್ಲಿಯೂ ಭಾರಿ ಏರಿಕೆಯಾಗಿತ್ತು. ಕಳೆದೊಂದು ವಾರದಿಂದ ಸಾಕಷ್ಟುಮಳೆಯಾದ ಹಿನ್ನೆಲೆಯಲ್ಲಿ ಟೊಮೊಟೊ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಇದು ಸಹಜವಾಗಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ ಎಂದಿದೆ. ಬುಧವಾರ ಇಲ್ಲಿನ ಮದರ್‌ ಡೈರಿಗೆ ಸೇರಿದ ಸಫಲ್‌ ಔಟ್‌ಲೆಟ್‌ನಲ್ಲಿ ಪ್ರತಿ ಕೆ.ಜಿ. ಟೊಮೊಟೊ 58 ರು.ಗೆ ಮಾರಾಟ ಮಾಡಲಾಗಿದ್ದರೆ, ಸ್ಥಳೀಯ ಬಿಡಿ ವ್ಯಾಪಾರಸ್ಥರು 60 ರಿಂದ 80 ರು.ಗೆ ಮಾರಾಟ ಮಾಡಿರುವುದಾಗಿ ತಿಳಿಸಿದೆ.

ಕೈಗೆಟುಕುತ್ತಿಲ್ಲ ಈರುಳ್ಳಿ: ಬೆಲೆ ಏರಿದರೆ ದೇಶದಲ್ಲಿ ಸರ್ಕಾರಗಳೂ ಇಳೀತಾವೆ!

ಈರುಳ್ಳಿ ಬೆಲೆ 90 ರು.ಗೆ ತಲುಪಿದ ಹಿನ್ನೆಲೆಯಲ್ಲಿ ಸರ್ಕಾರವೇ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಗ್ರಾಹಕರ ನೆರವಿಗೆ ಧಾವಿಸಿತ್ತು. ವರ್ಷಾಂತ್ಯದಲ್ಲಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆ, ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಸರ್ಕಾರಕ್ಕೂ ಸಮಸ್ಯೆ ತಂದೊಡ್ಡಿದೆ.

ಬೆಲೆ ಏರಿಕೆಗೆ ಬ್ರೇಕ್‌; ಈರುಳ್ಳಿ ರಫ್ತಿಗೆ ಕೇಂದ್ರದ ನಿಷೇಧ