Asianet Suvarna News Asianet Suvarna News

ಅಜ್ಜಿ ಮೆಚ್ಚಿದ ಫಿಲ್ಟರ್ ಕಾಫಿ ಮಾರಲು ಶುರು ಮಾಡಿದ ಸ್ಟಾರ್‌ಬಕ್ಸ್‌...!

 ತನ್ನ ವ್ಯವಹಾರಕ್ಕೆ ಹೇಗೆ ಮಾರುಕಟ್ಟೆ ಮಾಡಬೇಕೆಂಬುದನ್ನು ಚೆನ್ನಾಗಿಯೇ ತಿಳಿದಿರುವ ಸ್ಟಾರ್‌ಬಕ್ಸ್ ಈಗ  ತನ್ನ ಹೊಸ ಸ್ಲೋಗನ್ ಮೂಲಕ ಕನ್ನಡಿಗರ ಮನೆ ಮನ ತಲುಪಲು ಮುಂದಾಗಿದೆ. ಆದರೆ ನೆಟ್ಟಿಗರು ಮಾತ್ರ ಈ ಸ್ಲೋಗನ್‌ ಅನ್ನು ಅಪಹಾಸ್ಯ ಮಾಡಿದ್ದಾರೆ. 

advertisement goes viral Bengaluru Starbucks starts to sell coffee which approved by ajji akb
Author
First Published Jan 24, 2023, 10:12 PM IST

ಬೆಂಗಳೂರು:  ಉತ್ಪನ್ನ ಹೇಗಿದೆ ಎಂಬುದಕ್ಕಿಂತ ಒಂದು ಉತ್ಪನ್ನವನ್ನು ನಾವು ಹೇಗೆ ಮಾರಾಟ ಮಾಡುತ್ತೇವೆ. ಜನರ ಮನದಂಗಳಕ್ಕೆ ಕರೆದೊಯ್ಯುತ್ತೇವೆ ಎಂಬುದರಲ್ಲಿ ವ್ಯವಹಾರದ ಯಶಸ್ಸು ನಿಂತಿದೆ. ಜಗತ್ತಿನಾದ್ಯಂತ ತನ್ನ ಸ್ಟಾಲ್‌ಗಳನ್ನು ಹೊಂದಿರುವ ಕಾಫಿ ಮಾರುಕಟ್ಟೆಯ ದೈತ್ಯ ಸ್ಟಾರ್‌ ಬಕ್ಸ್‌ಗೆ ವ್ಯವಹಾರದ ಪಾಠವನ್ನು ಯಾರೂ ಹೇಳಿಕೊಡಬೇಕಿಲ್ಲ.  ತನ್ನ ವ್ಯವಹಾರಕ್ಕೆ ಹೇಗೆ ಮಾರುಕಟ್ಟೆ ಮಾಡಬೇಕೆಂಬುದನ್ನು ಚೆನ್ನಾಗಿಯೇ ತಿಳಿದಿರುವ ಸ್ಟಾರ್‌ಬಕ್ಸ್ ಈಗ  ತನ್ನ ಹೊಸ ಸ್ಲೋಗನ್ ಮೂಲಕ ಕನ್ನಡಿಗರ ಮನೆ ಮನ ತಲುಪಲು ಮುಂದಾಗಿದೆ. ಆದರೆ ನೆಟ್ಟಿಗರು ಮಾತ್ರ ಈ ಸ್ಲೋಗನ್‌ ಅನ್ನು ಅಪಹಾಸ್ಯ ಮಾಡಿದ್ದಾರೆ. 

ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಸ್ಟಾರ್ ಬಕ್ಸ್ ಸಂಸ್ಥೆ ಇತ್ತೀಚೆಗೆ ಬೆಂಗಳೂರಿನಲ್ಲಿ ತಾನು ನೀಡಿರುವ ಜಾಹೀರಾತಿನ ಪೋಸ್ಟರ್‌ ವೊಂದು ಎಲ್ಲರ ಸೆಳೆಯುತ್ತಿದೆ.  ಬೆಂಗಳೂರಿನಲ್ಲಿ ತಮ್ಮ ಮೆನುವಿನಲ್ಲಿ ಹೊಸ ಕಾಫಿಯ ಜಾಹೀರಾತನ್ನು (advertisement)ಹಾಕಿದೆ.  ಫಿಲ್ಟರ್ ಕಾಫಿಯ ಜಾಹೀರಾತು ಇದಾಗಿದ್ದು,  ಇದಕ್ಕೆ ಅಜ್ಜಿ ಅನುಮೋದಿಸಿದ ಫಿಲ್ಟರ್ ಕಾಫಿ ಎಂಬ ಟ್ಯಾಗ್‌ ಲೈನ್ ನೀಡಲಾಗಿದೆ.  ಅಜ್ಜಿ ಅನುಮೋದಿಸಿದ ಫಿಲ್ಟರ್ ಕಾಫಿ ಈಗ ಕೇವಲ 290 ರೂಪಾಯಿಯಲ್ಲಿ  ಎಂದು ಸ್ಟಾರ್‌ಬಕ್ಸ್ ಜಾಹೀರಾತು ನೀಡಿದೆ. ಆದರೆ ಈ ಜಾಹೀರಾತನ್ನು ಇಂಟರ್‌ನೆಟ್ ಬಳಕೆದಾರರು ಅಪಹಾಸ್ಯ ಮಾಡುತ್ತಿದ್ದಾರೆ.  ಒಂದು ಫಿಲ್ಟರ್ ಕಾಫಿಗೆ ಅಷ್ಟೊಂದು ದುಬಾರಿ ಮೊತ್ತವನ್ನು ನೀಡಲು ಯಾವ ಅಜ್ಜಿಯೂ ಒಪ್ಪುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ, ಫಿಲ್ಟರ್‌ ಕಾಫಿ ಸವಿದ ಸ್ಟಾರ್‌ಬಕ್ಸ್ ಸಹ ಸಂಸ್ಥಾಪಕ

ಆದಿತ್ಯ ವೆಂಕಟೇಶನ್ (Adithya Venkatesan)ಎಂಬುವವರು ಈ ಸ್ಟಾರ್‌ಬಕ್ಸ್ (Starbucks) ಜಾಹೀರಾತಿನ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಡಿಯರ್ ಸ್ಟಾರ್ ಬಕ್ಸ್,  ದೇವರ ಈ ಹಸಿರು ಭೂಮಿಯಲ್ಲಿ 290 ರೂಪಾಯಿ ಜೊತೆ ಹೆಚ್ಚುವರಿ ಟ್ಯಾಕ್ಸ್‌ ಹಣ ನೀಡಿ ಇಷ್ಟು ದುಬಾರಿಯ ಫಿಲ್ಟರ್ ಕಾಫಿಯನ್ನು (filter coffee) ಅನುಮೋದಿಸುವ ಯಾವ ಅಜ್ಜಿಯೂ ಇಲ್ಲ ಎಂದು ಅವರು ಬರೆದುಕೊಂಡಿದ್ದಾರೆ.  ಸ್ಟಾರ್‌ಬಕ್ಸ್‌ನ ಈ ಜಾಹೀರಾತಿನಲ್ಲಿ ವೃದ್ಧ ಮಹಿಳೆ ಹಾಗೂ ಆತನ ಮೊಮ್ಮಗ ಎದುರು ಬದುರಾಗಿ ಕುಳಿತು ಫಿಲ್ಟರ್ ಕಾಫಿ ಹೀರುವ ದೃಶ್ಯವಿದೆ.  ಅಲ್ಲಿ ಅಜ್ಜಿ ಅನುಮೋದಿಸಿದ ಫಿಲ್ಟರ್ ಕಾಫಿ ಶಿವುಗಾಗಿ 290 ರೂಪಾಯಿಯಿಂದ ಆರಂಭ ಎಂದು ಬರೆದುಕೊಂಡಿದೆ. 

ಇದು ಫೋಟೋನಾ? ಪೇಂಟಿಂಗಾ? ಫಿಲ್ಟರ್ ಕಾಫಿಯ ವೈರಲ್ ಚಿತ್ರಕ್ಕೆ ನೆಟ್ಟಿಗರು ಫುಲ್‌ ಕನ್ಫ್ಯೂಸ್

ಈ ಪೋಸ್ಟ್‌ನ್ನು 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 15 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಮತ್ತೆ ಅನೇಕರು ಬೆಲೆ ನೋಡಿ ಅಶ್ಚರ್ಯವ್ಯಕ್ತಪಡಿಸಿದ್ದಾರೆ. ನಿಜವಾಗಿಯೂ ಇದು ತುಂಬಾ ಹೆಚ್ಚಾಯಿತು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.  ಮನೆಯಲ್ಲಿ ಅಜ್ಜಿ ಒಂದು ಬಿಸಿ ಕಪ್ ಕಾಫಿಯನ್ನು ಚಾರ್ ಬಕ್ಸ್‌ (4 ರೂಪಾಯಿಗೆ) ಮಾಡುತ್ತಾರೆ  ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ವೃದ್ಧರೊಬ್ಬರು ಕೂಡ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದು, ಒಬ್ಬ ಅಜ್ಜಿಯಾಗಿ ನನಗೆ ಈ ವಿಚಾರ ಅಚ್ಚರಿ ಎನಿಸಿದೆ.  ಹತ್ತನೇ ಒಂದಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆ ಮತ್ತು ದರ್ಶಿನಿ ಫಿಲ್ಟರ್ ಕಾಫಿಗೆ ನನ್ನ ಸಂಪೂರ್ಣ ಅನುಮೋದನೆ ಇದೆ  ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ನಾನು 299 ರೂಪಾಯಿ ಕೊಟ್ಟು ಈ ಕಾಫಿ ಕುಡಿಯಲು ಮುಂದಾದರೆ ನನ್ನ ಅಜ್ಜಿ ಸಮಾಧಿಯಿಂದ ಮೇಲೆದ್ದು ಬಂದು ನನ್ನ ಕಿವಿ ಹಿಡಿದು ಎಳೆಯಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

 

Follow Us:
Download App:
  • android
  • ios