Asianet Suvarna News Asianet Suvarna News

ಈಗ ಆಗಿದ್ರೆ ನಾನು ಖಂಡಿತಾ ಭಾರತ ಬಿಟ್ಟು ಅಮೆರಿಕಕ್ಕೆ ತೆರಳುತ್ತಿರಲಿಲ್ಲ: ಅಡೋಬ್ ಸಿಇಒ

ಅಡೋಬ್ ಸಿಇಒ ಶಂತನು ನಾರಾಯಣ್ ಹೈದರಾಬಾದ್ ಮೂಲದವರಾಗಿದ್ದು, ಇತ್ತೀಚೆಗೆ ನಡೆದ ಟೈ ಗ್ಲೋಬಲ್ ಸಮಿತ್ 2022ರಲ್ಲಿ ಭಾಗವಹಿಸಿ ಉದ್ಯಮಿಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಹಾಗಾದ್ರೆ ಶಂತನು ಭಾರತದ ಈಗಿನ ಪರಿಸ್ಥಿತಿ ಹಾಗೂ ಅವಕಾಶಗಳ ಬಗ್ಗೆ ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ. 

Adobes Indian origin CEO said he would never have left Hyderabad to go to US if he was growing up right now
Author
First Published Dec 13, 2022, 4:38 PM IST

ಹೈದರಾಬಾದ್ (ಡಿ.13): 'ನಾನು ಈಗೇನಾದ್ರೂ ಪ್ರೌಢಾವಸ್ಥೆಗೆ ಬಂದಿದ್ರೆ ಖಂಡಿತಾ ಹೈದರಾಬಾದ್ ಬಿಟ್ಟು ಅಮೆರಿಕಕ್ಕೆ ತೆರಳುತ್ತಿರಲಿಲ್ಲ. ಪ್ರಸ್ತುತ ಹೈದರಾಬಾದ್ ಹಾಗೂ ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ' ಎಂದು ಅಡೋಬ್ ಸಿಇಒ ಶಂತನು ನಾರಾಯಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಟೈ ಗ್ಲೋಬಲ್ ಸಮಿತ್ 2022ರಲ್ಲಿ '2022ನೇ ಸಾಲಿನ ವರ್ಷದ ಸಿಇಒ' ಗೌರವ ಸ್ವೀಕರಿಸಿ ಮಾತನಾಡಿದ ಶಂತನು ನಾರಾಯಣ್, ಭಾರತದ ಚಿತ್ರಣ ಈಗ ಬದಲಾಗಿದ್ದು, ಉದ್ಯಮಿಗಳಿಗೆ ಸಾಕಷ್ಟು ಅವಕಾಶಗಳು ಲಭ್ಯವಿವೆ ಎಂದು ಹೇಳಿದರು. ಜಾಗತಿಕ ಸಾಫ್ಟ್ ವೇರ್ ಕಂಪನಿ ಅಡೋಬ್ ಸಿಇಒ ಆಗಿರುವ ಶಂತನು ನಾರಾಯಣ್, ಹೈದರಾಬಾದ್ ಮೂಲದವರಾಗಿದ್ದು, ಪದವಿ ಬಳಿಕ ಅಮೆರಿಕಕ್ಕೆ ತೆರಳಿದ್ದರು.  ಹೈದರಾಬಾದ್ ನಗರದಲ್ಲಿ ಪ್ರಸ್ತುತವಿರುವ ಉದ್ಯಮಸ್ನೇಹಿ ವಾತಾವರಣವನ್ನು ಶಂತು ನಾರಾಯಣ್ ಹಾಡಿ ಹೊಗಳಿದ್ದಾರೆ. ಹಾಗೆಯೇ ಇಂಥದೊಂದು ವಾತಾವರಣ ಸೃಷ್ಟಿಸಲು ಶ್ರಮಿಸಿದ ತೆಲಂಗಾಣ ಕೈಗಾರಿಕೆಗಳು ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮ್ ರಾವ್ ಹಾಗೂ ಕಾರ್ಯದರ್ಶಿ ಜಯೇಶ್ ರಂಜನ್ ಅವರನ್ನು ಶ್ಲಾಘಿಸಿದ್ದಾರೆ ಕೂಡ. ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಶಂತನು, ಅವರಿಗೆ ಅನೇಕ ಸಲಹೆಗಳನ್ನು ಕೂಡ ನೀಡಿದ್ದಾರೆ. 

ಯಾರಿಗಾದ್ರೂ ಉತ್ತಮ ಸಮಯ ಅನ್ನೋದು ಇರೋದಿಲ್ಲ. ನಿಮ್ಮ ಕನಸುಗಳೊಂದಿಗೆ ಬದುಕಿ. ಹೊಸ ತಂತ್ರಜ್ಞಾನಗಳ ಜೊತೆಗೆ ಲಭಿಸುವ ಹೆಚ್ಚಿನ ಅವಕಾಶಗಳನ್ನು ಬಳಸಿಕೊಳ್ಳಿ ಎಂದು ಶಂತನು ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ. ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯುವಂತೆ ಉದ್ಯಮಿಗಳಿಗೆ ಸಲಹೆ ನೀಡಿರುವ ಶಂತನು, ಯಾವುದೇ ಕಾರಣಕ್ಕೂ ಯಾವುದೇ ಪ್ರಶ್ನೆಗೂ 'ಇಲ್ಲ' ಎಂಬ ಉತ್ತರ ಹೊಂದದ್ದೀರಿ ಎಂಬ ಸಲಹೆ ನೀಡಿದ್ದಾರೆ. 15  ವರ್ಷಗಳ ಹಿಂದೆ ಆರ್ಥಿಕ ಹಿಂಜರಿತದ ಸಮಯದಲ್ಲಿ ಸಬ್ ಸ್ಕ್ರಿಪ್ಷನ ಮಾಡೆಲ್ ಗೆ ಬದಲಾಗುವ ನಿರ್ಧಾರವನ್ನು ಅಡೋಬ್ ತೆಗೆದುಕೊಂಡಿತು, ಅದ್ರಿಂದ ಸಂಸ್ಥೆ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು.

Retail Inflation:ಆರ್‌ಬಿಐ ಗುರಿಯ ಮಿತಿಯೊಳಗೆ ಚಿಲ್ಲರೆ ಹಣದುಬ್ಬರ; ನವೆಂಬರ್‌ನಲ್ಲಿ ಶೇ.5.88ಕ್ಕೆ ಇಳಿಕೆ

ಉದ್ಯಮಗಳಲ್ಲಿ ಇರಬೇಕಾದ ಕೆಲವು ಗುಣಗಳ ಬಗ್ಗೆ ಮಾತನಾಡಿದ ಶಂತನು, 'ಒಂದು ವೇಳೆ ನೀವು ಸಹನೆ ಕಡಿಮೆಯಿರುವ ಉದ್ಯಮಿಗಳಾಗಿದ್ರೆ, ಅದು ಹೊಗಳುವಂತಹ ಗುಣವೇ ಆಗಿದೆ. ಯಶಸ್ವಿ ಉದ್ಯಮಿಯೊಬ್ಬ ಯಾವುದೇ ಪ್ರಶ್ನೆಗೆ 'ಇಲ್ಲ' ಎಂಬ ಉತ್ತರ ಹೊಂದಲೇ ಬಾರದು' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಉದ್ಯಮ ರಂಗದ ಬೆಳವಣಿಗೆಗೆ ವ್ಯಾಪಕ ಅವಕಾಶಗಳಿವೆ ಎಂಬ ಮಾತನ್ನು ಅವರು ಪುನರುಚ್ಚರಿಸಿದರು. 

ಶಂತನು ನಾರಾಯಣ್ 2007ರಲ್ಲಿ ಅಡೋಬ್ (Adobe) ಸಿಒಒ (CEO) ಆಗಿ ಅಧಿಕಾರ ಸ್ವೀಕರಿಸಿದ್ದರು.  ಶಂತನು ಅಡೋಬ್ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅಡೋಬ್ ಫೋಟೋಶಾಪ್  (Photoshop) ಸೇರಿದಂತೆ ವಿವಿಧ ಸಾಫ್ಟ್ ವೇರ್ ಗಳ  (Softwares)ಅಭಿವೃದ್ಧಿಗೆ ಇವರು ಕಾರಣರಾಗಿದ್ದಾರೆ. 

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಅಂತಿಮ ಗಡುವು ಮುಗಿದಿದ್ರೂ 3 ದಿನಗಳ ಕಾಲ ದಂಡ ವಿಧಿಸುವಂತಿಲ್ಲ, ಏಕೆ ಗೊತ್ತಾ?

ಶಂತನು ನಾರಾಯಣ್ ವಿದ್ಯಾಭ್ಯಾಸ ಹೈದರಾಬಾದ್ ನಲ್ಲೇ ನಡೆದಿತ್ತು. ಹೈದರಾಬಾದ್ (Hyderabad) ಒಸ್ಮಾನಿಯ (Osmania) ವಿಶ್ವವಿದ್ಯಾಲಯ ವ್ಯಾಪ್ತಿಯ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಪದವಿ ಪಡೆದ ಶಂತನು ಆ ಬಳಿಕ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ (USA) ತೆರಳಿದ್ದರು. 1986ಲ್ಲಿಒಹಿಯೋ ಬೌಲಿಂಗ್ ಗ್ರೀನ್ ಸ್ಟೇಟ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ (Computer science) ಸ್ನಾತಕೋತ್ತರ ಪದವಿ (Master degree) ಪಡೆದರು. 1993ರಲ್ಲಿ ಬೆರ್ಕೆಲೆ (Berkeley) ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ( University of California) ಹಾಸ್ ಸ್ಕೂಲ್ ಆಫ್ ಬ್ಯುಸಿನೆಸ್ ( Haas School of Business) ಸಂಸ್ಥೆಯಿಂದ ಎಂಬಿಎ (MBA) ಪದವಿ ಗಳಿಸಿದ್ದಾರೆ. ಆ್ಯಪಲ್ (Apple) ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಕೂಡ ಶಂತನು ಅವರಿಗಿದೆ. 

Follow Us:
Download App:
  • android
  • ios