ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಅಂತಿಮ ಗಡುವು ಮುಗಿದಿದ್ರೂ 3 ದಿನಗಳ ಕಾಲ ದಂಡ ವಿಧಿಸುವಂತಿಲ್ಲ, ಏಕೆ ಗೊತ್ತಾ?

ಒಂದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಗಳಿದ್ದಾಗ ಬಿಲ್ ಪಾವತಿ ಅಂತಿಮ ಗಡುವು ಮರೆತು ಹೋಗೋದು ಸಾಮಾನ್ಯ. ಆದರೆ, ಅಂತಿಮ ಗಡುವು ಮೀರಿದ ಕಾರಣಕ್ಕೆ ಇನ್ಮುಂದೆ ದಂಡ ಪಾವತಿಸುವಂತಿಲ್ಲ. ಬದಲಿಗೆ ಮೂರು ದಿನಗಳ ಹೆಚ್ಚುವರಿ ಕಾಲಾವಕಾಶವನ್ನು ಕಾರ್ಡ್ ಬಳಕೆದಾರರಿಗೆ ನೀಡುವಂತೆ ಆರ್ ಬಿಐ ಸೂಚಿಸಿದೆ. 
 

Credit Card Payment Rule RBI Allows Three Days Post Deadline To Clear Dues

ನವದೆಹಲಿ (ಡಿ.12): ಇಂದು ಬಹುತೇಕರ ಬಳಿ ಕ್ರೆಡಿಟ್ ಕಾರ್ಡ್ ಇದೆ. ಅದರಲ್ಲೂ ಕೆಲವರ ಬಳಿಯಂತೂ ಪರ್ಸ್ ತುಂಬಾ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಗಳು ತುಂಬಿ ತುಳುಕುತ್ತಿರುತ್ತವೆ.  ತಿಂಗಳಿಗೊಮ್ಮೆ ಪಾವತಿಸುವ ವಿದ್ಯುತ್, ನೀರು ಬಿಲ್ ಗಳೇ ಕೆಲವೊಮ್ಮೆ ಮರೆತು ಹೋಗುತ್ತವೆ. ಹೀಗಿರುವಾಗ ಒಂದಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ಗಳಿದ್ರೆ ಬಿಲ್ ಪಾವತಿ ದಿನಾಂಕ ಮರೆತು ಹೋದ್ರೆ ಅದರಲ್ಲಿ ಅಚ್ಚರಿಪಡುವಂತಹದ್ದೇನೂ ಇಲ್ಲ. ಕ್ರೆಡಿಟ್ ಕಾರ್ಡ್ ಬಿಲ್ ಸಮಯಕ್ಕೆ ಸರಿಯಾಗಿ ಪಾವತಿಸದಿದ್ರೆ ಅದರ ಮೇಲೆ ತಕ್ಷಣದಿಂದಲೇ  ಜಾರಿಯಾಗುವಂತೆ ದಂಡ ಬೀಳುತ್ತದೆ. ಆದ್ರೆ, ವಿಳಂಬ ಬಿಲ್ ಪಾವತಿ ದಂಡವನ್ನು ಅಂತಿಮ ಗಡುವು ಮೀರಿದ ಮೂರು ದಿನಗಳ ಬಳಿಕವಷ್ಟೇ ವಿಧಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕ್ ಗಳು ಹಾಗೂ ಕ್ರೆಡಿಟ್ ಕಾರ್ಡ್ ವಿತರಕರಿಗೆ ನಿರ್ದೇಶನ ನೀಡಿದೆ.  ಆರ್ ಬಿಐ 2022ರ ಏಪ್ರಿಲ್ 21ರಂದು ಪ್ರಕಟಿಸಿದ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ -ವಿತರಣೆ ಹಾಗೂ ನೀತಿ ನಿರ್ದೇಶನಗಳು -2022 ರಲ್ಲಿಈ ಬಗ್ಗೆ ಉಲ್ಲೇಖಿಸಿದೆ.  ಇದರ ಅನ್ವಯ ಒಂದು ವೇಳೆ ನೀವು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಮರೆತಿದ್ರೆ ಅಂತಿಮ ಗಡುವಿನ ಮೂರು ದಿನಗಳೊಳಗೆ ಈ ಕಾರ್ಯವನ್ನು ಮಾಡಿ ಮುಗಿಸಬಹುದು. ಆಗ ಯಾವುದೇ ದಂಡ ವಿಧಿಸಲಾಗೋದಿಲ್ಲ. 

ಒಂದು ವೇಳೆ ಕ್ರೆಡಿಟ್ ಕಾರ್ಡ್ (Credit card) ಬಳಕೆದಾರ ಅಂತಿಮ ಗಡುವಿನ ಮೂರು ದಿನಗಳೊಳಗೆ ಬಿಲ್ ಪಾವತಿಸದಿದ್ರೆ, ವಿಳಂಬ ಪಾವತಿ ಶುಲ್ಕವನ್ನು ವಿಧಿಸಲಾಗುತ್ತದೆ. ಮುಂದಿನ ಬಿಲ್ಲಿಂಗ್ ಸೈಕಲ್ ವಿಳಂಬ ಶುಲ್ಕವನ್ನು ಒಳಗೊಂಡಿರುತ್ತದೆ. ವಿಳಂಬ ಪಾವತಿ ದಂಡದ ಮೊತ್ತವನ್ನು ಬ್ಯಾಂಕ್ ಗಳು ಅಥವಾ ಕ್ರೆಡಿಟ್ ಕಾರ್ಡ್ ಕಂಪನಿಗಳು ನಿರ್ಧರಿಸುತ್ತವೆ. ಬಿಲ್ ಗಾತ್ರ ಆಧರಿಸಿ ವಿಳಂಬ ಶುಲ್ಕದ ಮೊತ್ತ ಹಚ್ಚಳವಾಗುತ್ತದೆ. ಅಂತಿಮ ದಿನಾಂಕದ ಆಧಾರದಲ್ಲಿ ಪಾವತಿ ಮಾಡದ ದಿನಗಳು ಹಾಗೂ ವಿಳಂಬ ಪಾವತಿ ದಂಡದ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಇದು ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ವಿತರಣೆ ಸಂಸ್ಥೆ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಎಸ್ ಬಿಐ ಕಾರ್ಡ್ ಬಾಕಿ ಮೊತ್ತ500ರೂ.ಗಿಂತ ಹೆಚ್ಚು ಹಾಗೂ 1,000ರೂ. ಗಿಂತ ಕಡಿಮೆ ಇದ್ರೆ, 400ರೂ. ವಿಳಂಬ ಪಾವತಿ ಶುಲ್ಕವನ್ನು ವಿಧಿಸುತ್ತದೆ. ಅಂತಿಮ ಗಡುವಿನ ಬಳಿಕ ಉಳಿದ ಬ್ಯಾಲೆನ್ಸ್ ಗೆ ಬಡ್ಡಿ, ವಿಳಂಬ ಪಾವತಿ ಶುಲ್ಕಗಳು ಹಾಗೂ ಇತರ ಸಂಬಂಧಿತ ವೆಚ್ಚಗಳನ್ನು ವಿಧಿಸಲಾಗುತ್ತದೆ.

ಎರಡು ಅಥವಾ ಅದಕ್ಕಿಂತ ಹೆಚ್ಚಿನ ಇಪಿಎಫ್ ಖಾತೆಗಳನ್ನು ವಿಲೀನಗೊಳಿಸೋದು ಹೇಗೆ? ಇಲ್ಲಿದೆ ಮಾಹಿತಿ

ಬಿಲ್ಲಿಂಗ್ ಸೈಕಲ್ ಹೀಗಿರುತ್ತದೆ
ನಿಮ್ಮ ಕೊನೆಯ (ಈ ಹಿಂದಿನ)  ಹಾಗೂ ಮುಂದಿನ ಕ್ರೆಡಿಟ್ ಕಾರ್ಡ್ ಕ್ಲೋಸಿಂಗ್ ಸ್ಟೇಟ್ಮೆಂಟ್ ನಡುವಿನ ಅವಧಿಯೇ  ಬಿಲ್ಲಿಂಗ್ ಸೈಕಲ್  (Billing Cycle).ಇದನ್ನು ಇನ್ನೂ ಸುಲಭವಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ನಿದರ್ಶನದೊಂದಿಗೆ ನೋಡೋಣ. ಉದಾಹರಣೆಗೆ ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ಪ್ರತಿ ತಿಂಗಳು  18ರಂದು ಸೃಷ್ಟಿಯಾಗುತ್ತದೆ ಎಂದು ಭಾವಿಸೋಣ. ಆಗ ನಿಮ್ಮ ಬಿಲ್ಲಿಂಗ್ ಸೈಕಲ್ ಕಳೆದ ತಿಂಗಳ 19ರಂದು ಪ್ರಾರಂಭವಾಗಿ ಈ ತಿಂಗಳ 19ರ ತನಕ ಮುಂದುವರಿಯುತ್ತದೆ. ಈ ಬಿಲ್ಲಿಂಗ್ ಅವಧಿಯಲ್ಲಿನ ಬ್ಯಾಲೆನ್ಸ್ ವರ್ಗಾವಣೆ (Balance transfer), ನಗದು ವಿತ್ ಡ್ರಾಗಳು (Cash withdraws) ಸೇರಿದಂತೆ ಎಲ್ಲ  ವಹಿವಾಟುಗಳು ನಿಮ್ಮ ಮಾಸಿಕ ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ಅಥವಾ ಬಿಲ್ ನಲ್ಲಿ ಇರುತ್ತವೆ. ಈ ಬಿಲ್ಲಿಂಗ್ ಸೈಕಲ್ ಬಳಿಕ ನಡೆಸಿದ ಯಾವುದೇ ವಹಿವಾಟು ಮುಂದಿನ ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ನಲ್ಲಿ ಬರುತ್ತದೆ. ಉದಾಹರಣೆಗೆ ನೀವು ಈ ತಿಂಗಳ 20ರಂದು ಕ್ರೆಡಿಟ್ ಕಾರ್ಡ್ ಬಳಸಿ ಯಾವುದೇ ವಹಿವಾಟು ನಡೆಸಿದ್ರೆ ಅದರ ಮಾಹಿತಿ ಮುಂದಿನ ಬಿಲ್ ನಲ್ಲಿ ಇರುತ್ತದೆ. ನಿಮ್ಮ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ವಿತರಕರನ್ನು ಅವಲಂಬಿಸಿ ಬಿಲ್ಲಿಂಗ್ ಸೈಕಲ್ ಅವಧಿ 28 ರಿಂದ 31 ದಿನಗಳ ಕಾಲ ಇರುತ್ತದೆ.

ನಿಮ್ಮ ಎಸ್ ಬಿಐ ಉಳಿತಾಯ ಖಾತೆಯಿಂದ 147.5ರೂ. ಕಡಿತವಾಗಿದೆಯಾ? ಇದೇ ಕಾರಣಕ್ಕೆ ನೋಡಿ

 

Latest Videos
Follow Us:
Download App:
  • android
  • ios