ಬಾಂಗ್ಲಾಗೆ ಕರೆಂಟ್ ಶಾಕ್ ಕೊಟ್ಟ ಅದಾನಿ; 72 ಸಾವಿರ ಕೋಟಿ ಬಿಡುಗಡೆಗೆ ಡೆಡ್‌ಲೈನ್ ನೀಡಿದ ಉದ್ಯಮಿ

7200 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಪಾವತಿಸದಿದ್ದರೆ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವುದಾಗಿ ಅದಾನಿ ಪವರ್ ಎಚ್ಚರಿಕೆ ನೀಡಿದೆ. ಈಗಾಗಲೇ ಭಾಗಶಃ ವಿದ್ಯುತ್ ಕಡಿತ ಆರಂಭವಾಗಿದ್ದು, ನವೆಂಬರ್ 7ರ ಗಡುವು ನೀಡಲಾಗಿದೆ.

Adani Power Jharkhand Limited supply cut impacts crisis-hit Bangladesh economy mrq

ನವದೆಹಲಿ: 7200 ಕೋಟಿ ರು.ನಷ್ಟು ಭಾರೀ ಮೊತ್ತದ ವಿದ್ಯುತ್ ಬಿಲ್ ಬಾಕಿಯನ್ನು ನ.7ರೊಳಗೆ ಪಾವತಿ ಮಾಡದೇ ಹೋದಲ್ಲಿ ಬಾಂಗ್ಲಾದೇಶಕ್ಕೆ ವಿದ್ಯುತ್‌ ಪೂರೈಕೆ ಸಂಪೂರ್ಣ ಸ್ಥಗಿತ ಮಾಡುವುದಾಗಿ ನೆರೆ ದೇಶಕ್ಕೆ ಉದ್ಯಮಿ ಗೌತಮ್ ಆದಾನಿ ಅವರ 'ಅದಾನಿ ಪವರ್' ಎಚ್ಚರಿಕೆ ನೀಡಿದೆ. ಹೀಗಾಗಿ ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬಾಂಗ್ಲಾ ಮತ್ತಷ್ಟು ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದೆ. ಈಗಾಗಲೇ ಆ.31ರಿಂದ ಭಾಗಶಃ ವಿದ್ಯುತ್ ಕಡಿತವನ್ನು ಆದಾನಿ ಪವರ್ ಆರಂಭಿಸಿದೆ.

ನ.7ರೊಳಗೆ ಬಿಲ್ ಕಟ್ಟದಿದ್ದರೆ ಪೂರ್ತಿ ಕಡಿತ ಮಾಡುವುದಾಗಿ ಅದು ಹೇಳಿದೆ. ಈಗ ಭಾಗಶಃ ಪೂರೈಕೆ ಕಡಿತದ ಕಾರಣ ಬಾಂಗ್ಲಾದೇಶ ಗುರುವಾರ ಮತ್ತು ಶುಕ್ರವಾರದ ನಡುವ ರಾತ್ರಿ 1.600 ಮೆಗಾ ವ್ಯಾಟ್ ಗಿಂತ ಹೆಚ್ಚಿನ ವಿದ್ಯುತ್ ಕೊರತೆಯನ್ನು ವರದಿ ಮಾಡಿದೆ. ಹೀಗಾಗಿ ಈಗಾಗಲೇ ಕಡಿತದ ಎಫೆಕ್ಟ್ ದೇಶದಲ್ಲಿ ಆರಂಭವಾಗಿದ್ದು, ಹಲವಾರು ಗಂಟೆ ವಿದ್ಯುತ್ ಖೋತಾ ಆಗುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. 

ಇದನ್ನೂ ಓದಿ: ಭಾರತದ ಕೊಡುಗೈ ದಾನಿ ಯಾರು? 8 ಲಕ್ಷ ಕೋಟಿ ವಿತರಿಸಿದ ಉದ್ಯಮಿ ಅಂಬಾನಿ ಅದಾನಿ ಅಲ್ಲ!

ಬಿಕ್ಕಟ್ಟು ಏನು?: ಬಾಂಗ್ಲಾದೇಶಕ್ಕೆ ಜಾರ್ಖಂಡ್‌ನಲ್ಲಿರುವ ತನ್ನ ತಲಾ 800 ಮೆ.ವ್ಯಾ.ಸಾಮರ್ಥದ 2 ಘಟಕಗಳ ಮೂಲಕ ಆದಾನಿ ಪವರ್, ವಿದ್ಯುತ್ ಪೂರೈಸುತ್ತವೆ. ಈಗ ಒಂದು ಘಟಕ ಪೂರ್ತಿ ವಿದ್ಯುತ್ ನಿಲ್ಲಿಸಿದ್ದು, ಇನ್ನೊಂದು ಘಟಕ ಕೇವಲ 500 ಮೆ.ವ್ಯಾ. ಮಾತ್ರ ಪೂರೈಸುತ್ತಿದೆ. ಹೀಗಾಗಿ ಆದಾನಿ 1100 ಮ. ವ್ಯಾ. ಪೂರೈಕೆ ನಿಲ್ಲಿಸಿದಂತಾಗಿದೆ. ಹೊಸದಾಗಿ ವಿದ್ಯುತ್ ಪೂರೈಕೆಗೆ 1500 ರು. ಕೋಟಿ ಮೊತ್ತದ ಖಾತರಿ ನೀಡುವಂತೆ ಬಾಂಗ್ಲಾದೇಶ ಪವರ್ ಡೆವಲಪ್ ಮೆಂಟ್ ಬೋರ್ಡ್‌ ಅದಾನಿ ಪವರ್ ಸೂಚಿಸಿತ್ತು. ಆದರೆ ಆ ಗಡುವಿನೊಳಗೆ ಹಣ ಪಾವತಿ ಮಾಡದ ಕಾರಣ ಈಗಾಗಲೇ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ಅದಾನಿ ಪವರ್ ಭಾಗಶಃಕಡಿತ ಮಾಡಿದೆ. ಆದರೆ ಮುಂದುವರೆದ ಭಾಗವಾಗಿ ಇದೀಗ ನ.7ರ ಗಡುವು ನೀಡಿದ್ದು, ಅಷ್ಟರಲ್ಲಿ ಹಣ ಪಾವತಿ ಮಾಡದೇ ಹೋದಲ್ಲಿ ಪೂರ್ತಿ ವಿದ್ಯುತ್ ಪೂರೈಕೆಯನ್ನೇ ಸ್ಥಗಿತ ಮಾಡುವ ಎಚ್ಚರಿಕೆ ನೀಡಿದೆ. 

ಈ ನಡುವೆ, ಇತ್ತೀಚೆಗೆ ಅದಾನಿ ಸಮೂಹಕ್ಕೆ ಹಣ ಪಾವತಿ ಪ್ರಕ್ರಿಯೆ ನಡೆದಿತ್ತು. ಆದರೆ ಬಾಂಗ್ಲಾದೇಶ ಡಾಲರ್ ಕೊರತೆ ಎದು ರಿಸುತ್ತಿರುವ ಕಾರಣ ಪಾವತಿ ಆಗಲಿಲ್ಲ, ಈಗ ಸಮಸ್ಯೆ ಇತ್ಯರ್ಥಕ್ಕೆ ಮಾತುಕತೆಗಳೂ ನಡೆದಿದೆ ಎಂದು ಮೂಲಗಳು ಹೇಳಿದೆ.

ಇದನ್ನೂ ಓದಿ: ಟಾಟಾಗೆ ಠಕ್ಕರ್ ಕೊಟ್ಟ ಅದಾನಿ, ಹೊಸ ಉದ್ಯಮ ಮೂಲಕ 30,000 ಕೋಟಿ ರೂ ವಹಿವಾಟು

Latest Videos
Follow Us:
Download App:
  • android
  • ios