ಟಾಟಾಗೆ ಠಕ್ಕರ್ ಕೊಟ್ಟ ಅದಾನಿ, ಹೊಸ ಉದ್ಯಮ ಮೂಲಕ 30,000 ಕೋಟಿ ರೂ ವಹಿವಾಟು

ಗೌತಮ್ ಅದಾನಿ ಇದೀಗ ಟಾಟಾ ಗ್ರೂಪ್ ಸೇರಿದಂತೆ ಹಲವು ದಿಗ್ಗಜ ಕಂಪನಿಗಳಿಗೆ ಠಕ್ಕರ್ ನೀಡಿದೆ. ಕಾರಣ ಹೊಸ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಮಾತ್ರವಲ್ಲ, ವರ್ಷಕ್ಕೆ 30,000 ಕೋಟಿ ರೂಪಾಯಿ ವಹಿವಾಟು ಒಪ್ಪಂದಕ್ಕೆ ಮುಂದಾಗಿದೆ. ಇದು ಟಾಟಾ ಸೇರಿದಂತೆ ಹಲವರ ನಿದ್ದೆಗೆಡಿಸಿದೆ
 

Gautam Adani enters to copper sector set to finalize rs 30000 crore deal with BHP ckm

ಅಹಮ್ಮದಾಬಾದ್(ಅ.25) ಉದ್ಯಮ ಕ್ಷೇತ್ರದಲ್ಲಿನ ದಿಗ್ಗಜ ಹೆಸರಗಳ ಪೈಕಿ ಗೌತಮ್ ಅದಾನಿ ಕೂಡ ಒಬ್ಬರು. ಕಳೆದ ಕೆಲ ವರ್ಷಗಳಿಂದ ಗೌತಮ್ ಅದಾನಿ ಹಲವು ಏಳುಬೀಳು, ಟೀಕೆ ಎದುರಿಸಿದ್ದಾರೆ. ಪ್ರಮುಖವಾಗಿ ರಾಜಕೀಯ ವಲಯದಲ್ಲಿ ಅದಾನಿ ಹೆಸರು ಪದೇ ಪದೇ ಬಳಕೆಯಾಗಿದೆ. ಹಿಂಡನ್‌ಬರ್ಗ್ ವರದಿ ಸೇರಿದಂತೆ ಹಲವು ಕಾರಣಗಳಿಂದ ಅದಾನಿ ಉದ್ಯಮ ಸಾಮ್ರಾಜ್ಯ ಅಲುಗಾಡಿದ್ದು ಸುಳ್ಳಲ್ಲ. ಆದರೆ ಈ ಹಿನ್ನಡೆ ಮೆಟ್ಟಿ ನಿಂತಿರುವ ಅದಾನಿ ಇದೀಗ ತೆಗೆದುಕೊಂಡ ನಿರ್ಧಾರದಿಂದ ಟಾಟಾ ಸೇರಿದಂತೆ ಹಲವು ಪ್ರತಿಸ್ಪರ್ಧಿಗಳು ನಡುಗಿದ್ದಾರೆ. ಕಾರಣ ಹೊಸ ಹೊಸ ಉದ್ಯಮಕ್ಕೆ ತೆರೆದುಕೊಳ್ಳುತ್ತಿರುವ ಅದಾನಿ ಗ್ರೂಪ್ ಇದೀಗ ತಾಮ್ರದ ವಹಿವಾಟಿಗೆ ಮುಂದಾಗಿದೆ. ಇದೀಗ ಆಸ್ಟ್ರೇಲಿಯಾದ ಬಿಹೆಚ್‌ಪಿ ಕಂಪನಿ ಜೊತೆಗೆ ವಾರ್ಷಿಕ 30,000 ಕೋಟಿ ರೂಪಾಯಿ ವಹಿವಾಟಿಗೆ ಸಜ್ಜಾಗಿದೆ.

ಅದಾನಿ ಗ್ರೂಪ್ ಪ್ರಮುಖ ಉದ್ಯಮಗಳಲ್ಲಿ ನಂಬರ್ 1 ಆಗಿ ಗುರುತಿಸಿಕೊಂಡಿದೆ ಏರ್‌ಪೋರ್ಟ್ ನಿರ್ವಹಣೆ, ಬಂದರು ನಿರ್ವಹಣೆ, ಇಂಧನ ಕ್ಷೇತ್ರದಲ್ಲಿ ಅದಾನಿ ಕಂಪನಿ ಭಾರತ ಮಾತ್ರವಲ್ಲ ವಿದೇಶಗಳಲ್ಲೂ ಭಾರಿ ಹೂಡಿಕೆ ಮಾಡಿ ವಹಿವಾಟು ನಡೆಸುತ್ತಿದೆ. ಕಳೆದ ವರ್ಷದ ಸಿಮೆಂಟ್ ಕ್ಷೇತ್ರಕ್ಕೂ ಅದಾನಿ ಗ್ರೂಪ್ ಕಾಲಿಟ್ಟಿತ್ತು. ಅಂಬುಜಾ ಸಿಮೆಂಟ್ ಹಾಗೂ ಎಸಿಸಿ ಸಿಮೆಂಟ್ ಕಂಪನಿ ಖರೀದಿಸಿದ ಅದಾನಿ ಭಾರತದ 2ನೇ ಅತೀ ದೊಡ್ಡ ಸಿಮೆಂಟ್ ಉತ್ಪಾದಕ ಕಂಪನಿಯಾಗಿ ಹೊರಹೊಮ್ಮಿದೆ. ಇದೀಗ ತಾಮ್ರ ವಹಿವಾಟಿಗೂ ಅದಾನಿ ಗ್ರೂಪ್ ಕಾಲಿಟ್ಟಿದೆ.

ಮೂವರ ಬಳಿ ಇದೆ ವಿಶ್ವದ ದುಬಾರಿ 232 ಕೋಟಿ ರೂ ಕಾರು: ಅಂಬಾನಿ, ಅದಾನಿ, ಟಾಟಾ ಅಲ್ಲ!

ತಾಮ್ರಕ್ಕೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ತಾಮ್ರದ ಬಳಕೆ ಹೆಚ್ಚಾಗುತ್ತಿದೆ. ಅತ್ಯಮ್ಯೂಲ್ಯ ತಾಮ್ರದ ವ್ಯವಹಾರ ನಡೆಸುತ್ತಿರುವ ಅದಾನಿ ಗ್ರೂಪ್ ‌ನ ಕಚ್ ಕಾಪರ್ ಘಟಕ ಇದೀಗ ಆಸ್ಟ್ರೇಲಿಯಾದ ಬಿಹೆಚ್‌ಪಿ ಕಂಪನಿ ಜೊತೆ ಮಹತ್ವದ ಮಾತುಕತೆ ನಡೆಸಿದೆ. ವಾರ್ಷಿಕ 30,000 ಕೋಟಿ ರೂಪಾಯಿ ಮೌಲ್ಯದ ತಾಮ್ರ ಪೂರೈಕೆಗೆ ಅದಾನಿ ಗ್ರೂಪ್ ಮಾತುಕತೆ ನಡೆಸಿದೆ. ಈ ಮಾತುಕತೆ ಫಲಪ್ರದವಾಗಿದೆ ಎಂದು ಮೂಲಗಳು ಹೇಳಿವೆ. ಶೀಘ್ರದಲ್ಲೇ ವಹಿವಾಟಿನ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ. ಭಾರತದಲ್ಲಿ ಟಾಟಾ ಮೋಟಾರ್ಸ್, ಮಹೀಂದ್ರ ಸೇರಿದಂತೆ ಕೆಲ ಪ್ರಮುಖ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಬಳಕೆ ಮಾಡುತ್ತಿದೆ. ಈ ಕಂಪನಿಗಳಿಗೆ ಠಕ್ಕರ್ ನೀಡಿರುವ ಅದಾನಿ ಗ್ರೂಪ್ ಹೊಸ ಮುನ್ನುಡಿ ಬರೆಯಲು ಸಜ್ಜಾಗಿದೆ. 

ಮಾರುಕಟ್ಟೆ ತಜ್ಞರ ಪ್ರಕಾರ ಡಿಸೆಂಬರ್ 2025ರ ವೇಳೆಗೆ ತಾಮ್ರದ ಬೆಲೆ ಜಾಗತಿಕವಾಗಿ ಏರಿಕೆಯಾಗಲಿದೆ. ತಾಮ್ರ ಅತ್ಯಂತ ದುಬಾರಿ ವಸ್ತುವಾಗಿ ಮಾರ್ಪಡಲಿದೆ. ಈ ವರ್ಷದ ಆರಂಭದಲ್ಲಿ ಅದಾನಿ ಗ್ರೂಪ್ ಗುಜರಾತ್‌ನ ಮುಂದ್ರಾದಲ್ಲಿ ಕಾಪರ್ ರಿಫೈನರ್ ಪ್ರಾಜೆಕ್ಟ್ಸ್ ಆರಂಭಿಸಿದೆ. ಇದೀಗ ಬಹುದೊಡ್ಡ ಡೀಲ್ ಒಕೆ ಮಾಡುವ ಮೂಲಕ ಅದಾನಿ ಗ್ರೂಪ್ ತಾಮ್ರ ವಹಿವಾಟಿನಲ್ಲಿ ಭಾರತದ ಅತೀ ದೊಡ್ಡ ಕಂಪನಿಯಾಗಿ ಹೊರಹೊಮ್ಮಲು ತುದಿಗಾಲಲ್ಲಿ ನಿಂತಿದೆ.

ಆಸ್ಟ್ರೇಲಿಯಾದ ಬಿಹೆಚ್‌ಪಿ ಕಂಪನಿ ಹಲವು ದೇಶಗಳಿಗೆ ಕಾಪರ್ ಪೂರೈಕೆ ಮಾಡುತ್ತಿದೆ. ಚಿಲಿ, ಅರಿಜೋನಾ, ಅರ್ಜೆಂಟೀನಾ ಸೇರಿದಂತೆ ಕೆಲ ದೇಶಗಳಿಂದ ಬಿಹೆಚ್‌ಪಿ ತಾಮ್ರ ವಹಿವಾಟು ನಡೆಸುತ್ತಿದೆ. ಭಾರತದಲ್ಲಿ ಇತ್ತೀಚೆಗೆ ತಾಮ್ರ ಬೇಡಿಕೆ ಹೆಚ್ಚಾಗುತ್ತಿರು ಕಾರಣ ಇದೀಗ ಅದಾನಿ ಗ್ರೂಪ್ ಈ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ಈ ಮೂಲಕ ಭಾರತದ ಉದ್ಯಮದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದೆ.2025ರ ವೇಳೆಗೆ ಒಂದು ಟನ್ ತಾಮ್ರಕ್ಕೆ 10,000 ಅಮೆರಿಕನ್ ಡಾಲರ್ ಮೌಲ್ಯ ಬರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವೇಳೆ ಭಾರತದಲ್ಲಿ ಅದಾನಿ ಕಂಪಿನ ಹೊಸ ಮೈಲಿಗಲ್ಲು ಸ್ಥಾಪಿಸುವ ಸಾಧ್ಯತೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಭಾರತದ ಕೊಡುಗೈ ದಾನಿ ಯಾರು? 8 ಲಕ್ಷ ಕೋಟಿ ವಿತರಿಸಿದ ಉದ್ಯಮಿ ಅಂಬಾನಿ ಅದಾನಿ ಅಲ್ಲ!

Latest Videos
Follow Us:
Download App:
  • android
  • ios