Asianet Suvarna News Asianet Suvarna News

ನಷ್ಟದಲ್ಲಿರುವ ಪೇಟಿಎಂ ಅದಾನಿ ತೆಕ್ಕೆಗೆ? ವರದಿ ಬೆನ್ನಲ್ಲೇ ಷೇರು ಮೌಲ್ಯ ಶೇ.5ಕ್ಕೆ ಜಿಗಿತ!

‘ನಷ್ಟದಲ್ಲಿರುವ ಪೇಟಿಎಂ ಪೇಮೆಂಟ್‌ ಆ್ಯಪ್‌ನ ಮಾತೃಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್‌ನಲ್ಲಿ ಷೇರು ಖರೀದಿಸಲು ಅದಾನಿ ಗ್ರೂಪ್ ಅಧ್ಯಕ್ಷ ಹಾಗೂ ದೇಶದ ನಂ.1 ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರು ಮುಂದಾಗಿದ್ದಾರೆ. ಈ ಸಂಬಂಧದ ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರ ಜತೆ ಮಾತುಕತೆ ನಡೆಸಿದ್ದಾರೆ’ ಎಂದು ವರದಿಗಳು ಹೇಳಿವೆ.

Adani in talks with Paytm to acquire stake Speculative says reports rav
Author
First Published May 30, 2024, 10:38 AM IST

ಮುಂಬೈ (ಮೇ.30): ‘ನಷ್ಟದಲ್ಲಿರುವ ಪೇಟಿಎಂ ಪೇಮೆಂಟ್‌ ಆ್ಯಪ್‌ನ ಮಾತೃಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್‌ನಲ್ಲಿ ಷೇರು ಖರೀದಿಸಲು ಅದಾನಿ ಗ್ರೂಪ್ ಅಧ್ಯಕ್ಷ ಹಾಗೂ ದೇಶದ ನಂ.1 ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರು ಮುಂದಾಗಿದ್ದಾರೆ. ಈ ಸಂಬಂಧದ ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರ ಜತೆ ಮಾತುಕತೆ ನಡೆಸಿದ್ದಾರೆ’ ಎಂದು ವರದಿಗಳು ಹೇಳಿವೆ.

ಮಂಗಳವಾರ ಅಹಮದಾಬಾದ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಅದಾನಿ ಅವರು ಶರ್ಮಾರನ್ನು ಭೇಟಿ ಮಾಡಿದರು. ಈ ವೇಳೆ ಒಪ್ಪಂದದ ಸ್ವೂಪದ ಬಗ್ಗೆ ಮಾತುಕತೆ ನಡೆಯತು ಎಂದು ಮೂಲಗಳು ಹೇಳಿವೆ.

ಷೇರು ಶೇ.5ರಷ್ಟು ಏರಿಕೆ:

ಈ ವರದಿ ಪ್ರಕಟಗೊಂಡ ಬೆನ್ನಲ್ಲೇ ಬುಧವಾರ ಷೇರುಪೇಟೆಯಲ್ಲಿ ಪೇಟಿಎಂ ಷೇರುಗಳು ಶೇ.5ರಷ್ಟು ಜಿಗಿತ ಕಂಡಿವೆ. ಅದಾನಿಯಂಥ ದೊಡ್ಡ ಉದ್ಯಮಿ ಪೇಟಿಎಂ ಖರೀದಿಗೆ ಯತ್ನ ನಡೆಸಿದ್ದಾರೆ ಎಂಬ ವರದಿಗಳು, ಷೇರುಪೇಟೆಯಲ್ಲಿ ನಷ್ಟದಲ್ಲಿರುವ ಕಂಪನಿಗೆ ಟಾನಿಕ್‌ ನೀಡಿದೆ.

 

ಅಧಿಕಾರಕ್ಕೆ ಬಂದ 1 ತಿಂಗಳಲ್ಲೇ ಅದಾನಿ ಹಗರಣ ತನಿಖೆ: ಕಾಂಗ್ರೆಸ್‌

ಅದಾನಿ, ಪೇಟಿಎಂ ನಕಾರ:

ಈ ವರದಿಗಳ ಬೆನ್ನಲ್ಲೇ ಅದಾನಿ ಹಾಗೂ ಪೇಟಿಎಂ ಕಂಪನಿಗಳು ಪ್ರತ್ಯೇಕ ಹೇಳಿಕೆ ನೀಡಿ, ‘ಇವು ಕೇವಲ ಊಹಾಪೋಹದ ವರದಿಗಳು. ಉಭಯ ಕಂಪನಿಗಳ ಮುಖ್ಯಸ್ಥರ ನಡುವೆ ಪಾಲು ಖರೀದಿ ಅಥವಾ ಮಾರಾಟದ ಬಗ್ಗೆ ಯಾವುದೇ ಮಾತುಕತೆ ನಡದಿಲ್ಲ’ ಎಂದಿವೆ.

Latest Videos
Follow Us:
Download App:
  • android
  • ios