Asianet Suvarna News Asianet Suvarna News

ಅದಾನಿ ಕೇಸಿಂದ ಆರ್ಥಿಕತೆಗೆ ಪೆಟ್ಟಿಲ್ಲ: ನಿರ್ಮಲಾ ಸೀತಾರಾಮನ್‌; ಮೋದಿಗೆ 3 ಪ್ರಶ್ನೆ ಕೇಳಿದ ಕಾಂಗ್ರೆಸ್‌

ಅದಾನಿ ಷೇರು ಕುಸಿತ ಆ ಕಂಪನಿಗೆ ಸಂಬಂಧಿಸಿದ ವಿಷಯ, ಬ್ಯಾಂಕ್‌, ವಿಮಾ ಕಂಪನಿಗಳು ಒಂದೇ ಕಂಪನಿಯಲ್ಲಿ ಹೂಡಿಕೆ ಮಾಡಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. 

-

adani given no favour opposition is being hypocritical says union finance minister nirmala sitharaman ash
Author
First Published Feb 6, 2023, 3:26 PM IST

ನವದೆಹಲಿ: ಅಮೆರಿಕ ಮೂಲದ ಹಿಂಡನ್‌ಬರ್ಗ್‌ ಕಂಪನಿಯ ನಕಾರಾತ್ಮಕ ವರದಿ ಬಳಿಕ ನಿರಂತರವಾಗಿ ಅದಾನಿ ಕಂಪನಿ ಷೇರು ಕುಸಿಯುತ್ತಿರುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸತತ 3ನೇ ದಿನವೂ ಪ್ರತಿಕ್ರಿಯೆ ನೀಡಿದ್ದಾರೆ. ಅದಾನಿ ಷೇರು ಕುಸಿತ ಆ ಕಂಪನಿಗೆ ಸಂಬಂಧಿಸಿದ ವಿಷಯ ಎಂದು ಹೇಳಿದ್ದಾರೆ.

ಇದೇ ವೇಳೆ, ಷೇರುಪೇಟೆಯಲ್ಲಿ (Stock Market) ಸ್ಥಿರತೆ ಕಾಯ್ದುಕೊಳ್ಳಲು ಸೆಬಿ (SEBI) ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ (Reserve Bank of India) ಯಾವಾಗಲೂ ಎಚ್ಚರವಾಗಿರಬೇಕು. ಈ ವಿಚಾರದಲ್ಲಿ ನಿಯಂತ್ರಕ ಸಂಸ್ಥೆಗಳು ಸಕಾಲಕ್ಕೆ ಸ್ಪಂದಿಸಬೇಕು ಎಂಬುದನ್ನು ಹೊರತುಪಡಿಸಿ ಇನ್ಯಾವುದೇ ಅಭಿಪ್ರಾಯವನ್ನು ನಾನು ಹೊಂದಿಲ್ಲ. ಭಾರತದ (India) ಯಾವುದೇ ಬ್ಯಾಂಕುಗಳು (Banks) ಅಥವಾ ವಿಮಾ ಕಂಪನಿಗಳು (Insurance Companies) ಯಾವುದೇ ಒಂದು ಕಂಪನಿಯಲ್ಲಿ (Company) ಮಿತಿ ಮೀರಿ ಹೂಡಿಕೆ ಮಾಡಿಲ್ಲ. ಭಾರತೀಯ ಮಾರುಕಟ್ಟೆಗಳನ್ನು ಅದರ ನಿಯಂತ್ರಕರು ಚೆನ್ನಾಗಿಯೇ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಅದಾನಿ ಸಮೂಹದ ಬಗ್ಗೆ ಮಾರುಕಟ್ಟೆ ನಿಯಂತ್ರಕರ ನಿಗಾ; ದೇಶದ ಇಮೇಜ್‌ಗೆ ಧಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್

ನಿಜ, ಕೆಲವೊಂದು ಬಾರಿ ಸಣ್ಣದೋ ಅಥವಾ ದೊಡ್ಡದೋ, ಕೆಲವೊಂದು ಅನಿರೀಕ್ಷಿತ ಘಟನೆಗಳು ಆಗಿರಬಹುದು. ಆಗಲೂ ನಿಯಂತ್ರಕರು ಅದನ್ನು ಪರಿಹರಿಸುತ್ತಾರೆ. ಈಗಾಗಲೇ ಈ ವಿಷಯ (ಅದಾನಿ)ದ ಬಗ್ಗೆಯೂ ಅವರು ಗಮನಹರಿಸಿರುತ್ತಾರೆ ಎಂಬ ವಿಶ್ವಾಸವಿದೆ ಎಂದು ಟಿವಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹಮ್‌ ಅದಾನಿಕೇ ಹೇ ಕೌನ್‌: ಮೋದಿಗೆ ಕಾಂಗ್ರೆಸ್‌ ನಿತ್ಯ 3 ಪ್ರಶ್ನೆ
ಅದಾನಿ ಕಂಪನಿ ಮೇಲೆ ಹಿಂಡನ್‌ಬರ್ಗ್‌ ಕಂಪನಿ ಅಕ್ರಮದ ಆರೋಪ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದನ್ನು ಕಾಂಗ್ರೆಸ್‌ ಪ್ರಶ್ನಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಹಿರಿಯ ನಾಯಕ ಜೈರಾಂ ರಮೇಶ್‌, ‘ಹಮ್‌ ಅದಾನಿ ಕೇ ಹೇ ಕೌನ್‌’ ಶೀರ್ಷಿಕೆಯಡಿ ಪ್ರತಿ ದಿನ ಮೋದಿ ಸರ್ಕಾರಕ್ಕೆ 3 ಪ್ರಶ್ನೆ ಕೇಳಲಾಗುವುದು. ಅದಾನಿ ಮಹಾ ಮೆಗಾ ಹಗರಣದ ಕುರಿತು ಮೋದಿ ಅವರ ಮೌನವೇ ನಮಗೆ ಪ್ರಶ್ನೇ ಕೇಳುವಂತೆ ಮಾಡಿದೆ. ಚುಪ್ಪಿ ತೋಡಿಯೇ (ಮೌನ ಮುರಿಯಿರಿ) ಪ್ರಧಾನಿ ಅವರೇ ಎಂದು ಮೋದಿ ಅವರ ಮೌನವನ್ನು ಪ್ರಶ್ನಿಸಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಮುಳುಗಿಯೇ ಬಿಡುತ್ತಾ ಅದಾನಿ ಸಾಮ್ರಾಜ್ಯ..? ಅದಾನಿ ಷೇರಿನಲ್ಲಿರೋ ಎಲ್ಐಸಿ ಹಣ ಎಷ್ಟು ಸೇಫ್?

ಗೌತಮ್‌ ಅದಾನಿ ಪರವಾಗಿ ಮೋದಿ ಅವರ ದಯಾಶೀಲತೆಯನ್ನು ಜಗತ್ತು ನೋಡುತ್ತಿದೆ. ಸಾವಿರಾರು ಜನರ ಹಣ ಅಪಾಯದಲ್ಲಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್‌ ಜನರ ಬೆಂಬಲವಾಗಿ ನಿಂತಿದೆ ಎಂದು ರಮೇಶ್‌ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಮೊದಲ ದಿನದ 3 ಪ್ರಶ್ನೆಗಳು

  • ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೀವು ಅಕೌಂಟ್‌ ಅಕ್ರಮ ಹಾಗೂ ಷೇರಿನಲ್ಲಿ ಮೋಸವಾಗುತ್ತಿರುವ ಬಗ್ಗೆ ತನಿಖೆ ನಡೆಸಿ ಸತ್ಯವಾದ ವರದಿ ನೀಡಿ
  • ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುವ ನಿಮ್ಮ ಸರ್ಕಾರದಿಂದ ನ್ಯಾಯಯುತವಾದ ತನಿಖೆ ಆಪೇಕ್ಷಿಸಬಹುದೇ
  • ಇಂತಹ ಗಂಭೀರ ಆರೋಪಗಳಿರುವ ಕಂಪನಿ ಬಂದರು, ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಹೇಗೆ ಸಾಧ್ಯ

ಇದನ್ನೂ ಓದಿ: ಒಂದೇ ವಾರದಲ್ಲಿ ಅದಾನಿ ಆಸ್ತಿ 10 ಲಕ್ಷ ಕೋಟಿ ಕುಸಿತ! 

Follow Us:
Download App:
  • android
  • ios