ಪಿಜಿ ಹಾಗೂ ಹಾಸ್ಟೆಲ್‌ಗಳಲ್ಲಿ ವಾಸ ಮಾಡುವವರಿಗೂ ಇನ್ನು ಮುಂದೆ ಶೇ.12 ಜಿಎಸ್‌ಟಿ ಹೊರೆ ಬೀಳಲಿದೆ. ಕರ್ನಾಟಕದ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ ಶುಕ್ರವಾರ ನೀಡಿದ ಆದೇಶವೊಂದರಲ್ಲಿ ಈ ವಿಚಾರ ತಿಳಿಸಿದೆ.
ಬೆಂಗಳೂರು: ಪಿಜಿ ಹಾಗೂ ಹಾಸ್ಟೆಲ್‌ಗಳಲ್ಲಿ ವಾಸ ಮಾಡುವವರಿಗೂ ಇನ್ನು ಮುಂದೆ ಶೇ.12 ಜಿಎಸ್‌ಟಿ ಹೊರೆ ಬೀಳಲಿದೆ. ಕರ್ನಾಟಕದ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ ಶುಕ್ರವಾರ ನೀಡಿದ ಆದೇಶವೊಂದರಲ್ಲಿ ಈ ವಿಚಾರ ತಿಳಿಸಿದೆ. ಪೇಯಿಂಗ್ ಗೆಸ್ಟ್ ಅಥವಾ ಹಾಸ್ಟೆಲ್‌ಗಳ ಬಾಡಿಗೆ ಹಣಕ್ಕೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆಯೇ ಎಂಬ ಬಗ್ಗೆ ಈ ಹಿಂದೆ ಗೊಂದಲವಿತ್ತು. ಕರ್ನಾಟಕ ಹಾಗೂ ಉತ್ತರಪ್ರದೇಶದ ಎರಡು ಪ್ರತ್ಯೇಕ ಅಥಾಟಿರಿ ಆಫ್ ಅಡ್ವಾನ್ಸ್ಡ್ ರೂಲಿಂಗ್ , ಹಾಸ್ಟೆಲ್ ಹಾಗೂ ಪಿಜಿ ವಾಸ್ತವ್ಯಗಳನ್ನು 'ವಸತಿ ರಹಿತ' ಎಂದು ವರ್ಗೀಕರಿಸಿದ್ದು, ಆದ್ದರಿಂದ ಇನ್ನುಮುಂದೆ ಪಿಜಿ ಅಥವಾ ಹಾಸ್ಟೆಲ್‌ಗಳು ಈಗ ಸಣ್ಣ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಂತೆಯೇ ಶೇ. 12 ಪ್ರತಿಶತ ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ.
ಹಾಸ್ಟೆಲ್‌ನಲ್ಲಿ ಅಥವಾ ಪಿಜಿಗಳಲ್ಲಿ ವಾಸವಿರುವ ನಿವಾಸಿಗಳು ಪಾವತಿಸಿದ ಬಾಡಿಗೆಯೂ 28.06.2017ರಂದು ಹೊರಡಿಸಿದ ಅಧಿಸೂಚನೆ ಸಂಖ್ಯೆ ಎಸ್ಐ ಸಂಖ್ಯೆ 12 ನೋಟೀಫಿಕೇಷನ್ ಸಂಖೆಯ 12.2017ರ ಸೆಂಟ್ರಲ್ ಟ್ಯಾಕ್ಸ್ (ದರ) ಪ್ರಕಾರ ಜಿಎಸ್‌ಟಿ ವಿನಾಯಿತಿ ಅರ್ಹತೆಯನ್ನು ಹೊಂದಿಲ್ಲ, ಏಕೆಂದರೆ ಅರ್ಜಿದಾರರು ಒದಗಿಸುವ ಸೇವೆಗಳು ವಾಸಸ್ಥಳವಾಗಿ ಬಳಸಲು ವಸತಿ ಸ್ಥಳವನ್ನು ಬಾಡಿಗೆಗೆ ನೀಡುವುದಿಲ್ಲ ಎಂದು ಕರ್ನಾಟಕ ಎಎಆರ್‌ನ ಎಂಪಿ ರವಿಪ್ರಸಾದ್ ಹಾಗೂ ಕಿರಣ್ ರೆಡ್ಡಿ ಟಿ ತೀರ್ಪು ನೀಡಿದ್ದಾರೆ.
ಸಣ್ಣ ವ್ಯಾಪಾರಿಗಳು ರಾಜ್ಯದಲ್ಲಿ ಜಿಎಸ್‌ಟಿ ಪಾವತಿ ಮಾಡ್ಬೇಕಿಲ್ಲ; ವಿಧಾನಸಭೇಲಿ ಮಸೂದೆ ಪಾಸ್
12 ಶೇಕಡಾ ಜಿಎಸ್‌ಟಿ ಪಾವತಿಸಬೇಕಾಗಿರುವುದರಿಂದ ಪಿಜಿಗಳು ಹಾಗೂ ಹಾಸ್ಟೆಲ್‌ಗಳು ಬಾಡಿಗೆಯನ್ನು ಹೆಚ್ಚಳ ಮಾಡಲಿವೆ. ಇದರಿಂದ ಹಾಸ್ಟೆಲ್‌ಗಳು ಹಾಗೂ ಪಿಜಿಯಲ್ಲಿ ವಾಸ ಮಾಡುವ ವಿದ್ಯಾರ್ಥಿಗಳ ಮೇಲೆ ಇದು ನೇರ ಹೊರೆಯಾಗಲಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವೂ ಹೆಚ್ಚಾಗಲಿದೆ ಎಂದು ದೆಹಲಿ ಮೂಲದ ತೆರಿಗೆ ತಜ್ಞ ಶರದ್ ಕೊಹ್ಲಿ ಹೇಳಿದ್ದಾರೆ. ಈ ತೀರ್ಪಿನ ನಂತರ ಹೊರಗಿನಿಂದ ಬಂದು ಅಥವಾ ಹೊರ ರಾಜ್ಯಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಶಿಕ್ಷಣದ ವೆಚ್ಚವು ಭಾರಿ ಹೆಚ್ಚಾಗಬಹುದು ಏಕೆಂದರೆ ಇದರಿಂದ ಅವರ ಜೀವನ ವೆಚ್ಚ (Living cost) ತುಂಬಾ ಹೆಚ್ಚಾಗಲಿದೆ. ಆದಾಗ್ಯೂ, ಕೆಲವು ತೆರಿಗೆ ತಜ್ಞರು ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.
ಬೆಂಗಳೂರಿನ ಶ್ರೀ ಸಾಯಿ ಲಕ್ಸುರೀಸ್ ಸ್ಟೇ ಎಲ್‌ಎಲ್‌ಪಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರು ಪೀಠ ಈ ತೀರ್ಪು ನೀಡಿದೆ.
ಮಲ್ಟಿಪ್ಲೆಕ್ಸ್ಗಳಲ್ಲಿ ಆಹಾರ ಬೆಲೆ ಇಳಿಕೆ; GST ದರ ಶೇಕಡ 18 ರಿಂದ 5ಕ್ಕೆ ಇಳಿಕೆ
