ಸಣ್ಣ ವ್ಯಾಪಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೋಂದಣಿ ವಿನಾಯಿತಿಯ ಜತೆಗೆ ವ್ಯಾಪಾರಿಗಳು ಸುಳ್ಳು ಮಾಹಿತಿ ನೀಡಿದರೆ ಸರ್ಕಾರದ ಬದಲು ಅವರೇ ಹೊಣೆಗಾರರಾಗುವ ಸಂಬಂಧ ಕರ್ನಾಟಕ ಸರಕು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕವನ್ನು ಸದನವು ಧ್ವನಿಮತದ ಮೂಲಕ ಅಂಗೀಕರಿಸಿದೆ.
ವಿಧಾನಸಭೆ (ಜು.15) : ಸಣ್ಣ ವ್ಯಾಪಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೋಂದಣಿ ವಿನಾಯಿತಿಯ ಜತೆಗೆ ವ್ಯಾಪಾರಿಗಳು ಸುಳ್ಳು ಮಾಹಿತಿ ನೀಡಿದರೆ ಸರ್ಕಾರದ ಬದಲು ಅವರೇ ಹೊಣೆಗಾರರಾಗುವ ಸಂಬಂಧ ಕರ್ನಾಟಕ ಸರಕು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕವನ್ನು ಸದನವು ಧ್ವನಿಮತದ ಮೂಲಕ ಅಂಗೀಕರಿಸಿದೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಅವರು ಮಸೂದೆಗೆ ಅಂಗೀಕಾರ ಕೋರಿದರು. ಸದಸ್ಯರು ವಿಧೇಯಕ ಕುರಿತು ಹಲವು ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿದ ಬಳಿಕ ಮಸೂದೆಯನ್ನು ಅಂಗೀಕರಿಸಲಾಯಿತು. ವಿಧೇಯಕ ಕುರಿತು ಮಾಹಿತಿ ನೀಡಿದ ಸಚಿವ ಎಚ್.ಕೆ.ಪಾಟೀಲ್, ಆರು ವರ್ತಕ ಸ್ನೇಹಿ ಉಪಕ್ರಮಗಳು ಮತ್ತು 16 ಸುಗಮ ತೆರಿಗೆ ಅನುಸರಣಾ ಹಾಗೂ ಆಡಳಿತಾತ್ಮಕ ಉಪಕ್ರಮಗಳಿಗೆ ಸಂಬಂಧಿಸಿದಂತೆ ಅಂಶಗಳನ್ನು ವಿಧೇಯಕದಲ್ಲಿ ಅಳವಡಿಕೆ ಮಾಡಲಾಗಿದೆ. ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಂದಣಿಯಿಂದ ವಿನಾಯಿತಿ ನೀಡಲಾಗಿದೆ. ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ದ್ವಿಗುಣಗೊಂಡಿದೆ. 2017-18ರಲ್ಲಿ 44 ಸಾವಿರ ಕೋಟಿ ರು. ಇದ್ದ ಜಿಎಸ್‌ಟಿ ಸಂಗ್ರಹ 2022-23ರಲ್ಲಿ 81,848 ಕೋಟಿ ರು.ಗೆ ಹೆಚ್ಚಳವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಗೆಳೆತನದ ಬಗ್ಗೆ ರೇವಣ್ಣ ಮಾತು, ನೀನು ಈ ಬಾರಿ ಲಿಂಬೆಹಣ್ಣು ಮಂತ್ರಿಸಿಲ್ಲ-ಕಿಚಾಯಿಸಿದ ಅಶೋಕ್
ಸರಕು ಸಾಗಣೆಗಳ ವ್ಯವಹಾರದಲ್ಲಿ 40 ಲಕ್ಷ ರು.ವರೆಗೆ ನೋಂದಣಿರಹಿತ ವ್ಯವಹಾರ ನಡೆಸಬಹುದು. ಸೇವೆಗಳ ವ್ಯವಹಾರದಲ್ಲಿ 20 ಲಕ್ಷ ರು.ವರೆಗೆ ನೋಂದಣಿ ರಹಿತ ವ್ಯವಹಾರ ನಡೆಸಬಹುದು. ವ್ಯಾಟ್ ವ್ಯವಸ್ಥೆಯ ವೇಳೆ ರಾಜ್ಯದಲ್ಲಿ 5.8 ಲಕ್ಷ ವರ್ತಕರು ವ್ಯಾಟ್ ಪಾವತಿಸುತ್ತಿದ್ದರೆ, ಜಿಎಸ್‌ಟಿ ಅವಧಿಯಲ್ಲಿ 10 ಲಕ್ಷ ವರ್ತಕರು ತೆರಿಗೆ ಪಾವತಿಸುತ್ತಿದ್ದಾರೆ ಎಂದು ವಿವರಿಸಿದರು.
ವಿಧೇಯಕ ಕುರಿತು ಮಾತನಾಡಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರ ಜಿಎಸ್‌ಟಿ ಸೋರಿಕೆ ತಡೆಯಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ತೆರಿಗೆ ರಿಟನ್ಸ್‌ರ್ ಸಲ್ಲಿಸಲು ಮೂರು ವರ್ಷದ ಅವಧಿ ಕಲ್ಪಿಸುವುದು ದುರುಪಯೋಗಕ್ಕೆ ಕಾರಣವಾಗಲಿದೆ. ಹಲವು ರಾಜ್ಯಗಳ ಸಲಹೆ ಮೇರೆಗೆ ಜಿಎಸ್‌ಟಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಸಣ್ಣ ವ್ಯಾಪಾರಿಗಳನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ. ಆದರೆ, ಅವರನ್ನು ನೋಂದಣಿಯಿಂದ ಹೊರಗಿಡುವುದು ಸರಿಯಲ್ಲ ಎಂದರು.
ಆರೆಸ್ಸೆಸ್ ಸಂಸ್ಥೆಗೆ ಬಿಜೆಪಿ ನೀಡಿದ್ದ ಜಾಗ ತಡೆಹಿಡಿದ ಸರ್ಕಾರ; ಬಿಜೆಪಿ ಆಕ್ರೋಶ
ಕೇಂದ್ರ ಸರ್ಕಾರವು ಏಕರೂಪ ತೆರಿಗೆ ಜಾರಿಗೊಳಿಸಲು ಜಿಎಸ್‌ಟಿ ಕಾಯ್ದೆಗೆ ಕೆಲವು ತಿದ್ದುಪಡಿ ಮಾಡಿ ರಾಜ್ಯಕ್ಕೆ ಕಳುಹಿಸಿದ್ದು, ಅನುಷ್ಠಾನ ಮಾಡಲು ಸೂಚಿಸಿತ್ತು. ತಿದ್ದುಪಡಿ ಮಾಡಿರುವ ಅಂಶಗಳ ಪೈಕಿ ವ್ಯಾಪಾರಿಗಳು ತಪ್ಪು ಮಾಹಿತಿ ನೀಡಿದರೆ ಅದರ ಸಂಪೂರ್ಣ ಹೊಣೆ ವ್ಯಾಪಾರಸ್ಥನ ಮೇಲೆ ಇರುತ್ತಿದ್ದನ್ನು ಬದಲಿಸಿ ಸರ್ಕಾರದ ಜವಾಬ್ದಾರಿ ಎಂದು ಹೇಳಿದೆ. ಇದನ್ನು ರಾಜ್ಯ ಸರ್ಕಾರವು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರಾಕರಿಸಿ ನಿರ್ಣಯ ಕೈಗೊಂಡಿದೆ. ಅದರಂತೆ ವಿಧೇಯಕ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.
