Asianet Suvarna News Asianet Suvarna News

ಹೊಸ ಟೋಲ್ ಫ್ರೀ ನಂಬ್ರ ಪ್ರಾರಂಭಿಸಿದ ಯುಐಡಿಎಐ; ಆಧಾರ್ ಕಾರ್ಡ್ ಮಾಹಿತಿ, ದೂರಿಗೆ ಈ ಸಂಖ್ಯೆಗೆ ಕರೆ ಮಾಡಿ

ಆಧಾರ್ ಕಾರ್ಡ್ ಗೆ ಸಂಬಂಧಿಸಿ ನಿಮಗೆ ಅನೇಕ ಪ್ರಶ್ನೆಗಳಿರಬಹುದು ಇಲ್ಲವೆ ಸಮಸ್ಯೆಗಳಿರಬಹುದು. ಅವುಗಳಿಗೆಲ್ಲ ಉತ್ತರ ಅಥವಾ ಪರಿಹಾರ ಒದಗಿಸಲು ಯುಐಡಿಎಐ ಹೊಸ ಟೋಲ್ ಫ್ರೀ ಸಂಖ್ಯೆ ಪ್ರಾರಂಭಿಸಿದೆ. ಹಾಗೆಯೇ ಆಧಾರ್ ಸ್ಟೇಟಸ್ ಚೆಕ್ ಮಾಡಲು ಎ1 ಚಾಟ್ ಸಪೋರ್ಟ್ ಕೂಡ ಆರಂಭಿಸಿದೆ. 
 

Aadhaar card holders Alert UIDAI launches new tollfree number AI chat support to check Aadhaar card status
Author
First Published Jan 7, 2023, 5:03 PM IST

ನವದೆಹಲಿ (ಜ.7): ಭಾರತದಲ್ಲಿಇಂದು ಎಲ್ಲ ಕೆಲಸಗಳಿಗೂ ಆಧಾರ್ ಕಾರ್ಡ್ ಬೇಕೇಬೇಕು. ಬ್ಯಾಂಕ್ ಖಾತೆ ತೆರೆಯೋದ್ರಿಂದ ಹಿಡಿದು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯುವ ತನಕ ಪ್ರತಿಯೊಂದಕ್ಕೂ ಆಧಾರ್ ಕಡ್ಡಾಯ. ವೈಯಕ್ತಿಕ ಮಾಹಿತಿಗಳು, ವಿಳಾಸ, ಫೋಟೋ, ಮೊಬೈಲ್ ಸಂಖ್ಯೆ  ಸೇರಿದಂತೆ ಎಲ್ಲ ಮುಖ್ಯವಾದ ಮಾಹಿತಿಗಳನ್ನು ಆಧಾರ್ ಕಾರ್ಡ್ ಒಳಗೊಂಡಿದೆ. ಇನ್ನು ಬ್ಯಾಂಕ್ ಖಾತೆ, ವಾಹನ ಚಾಲನ ಪರವಾನಗಿ, ವಿಮೆ, ಪ್ಯಾನ್ ಕಾರ್ಡ್ ಸೇರಿದಂತೆ ಪ್ರಮುಖವಾದ ಎಲ್ಲ ದಾಖಲೆಗಳಿಗೂ ಆಧಾರ್ ಕಾರ್ಡ್ ಜೋಡಣೆಯಾಗಿರುತ್ತದೆ. ಹೀಗಾಗಿ ಆಧಾರ್ ಕಾರ್ಡ್ ಒಂದಿದ್ದರೆ ಸಾಕು, ಎಲ್ಲ ದಾಖಲೆಗಳು ನಿಮ್ಮ ಬಳಿ ಇದ್ದಂತೆಯೇ. ಆಧಾರ್ ಕಾರ್ಡ್ ವಿತರಣೆ ಹಾಗೂ ನಿಯಂತ್ರಣ ಮಂಡಳಿ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಆಗಾಗ ಹೊಸ ನಿಯಮಗಳು, ಸೇವೆಗಳ ಬಗ್ಗೆ ನಾಗರಿಕರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಒದಗಿಸುತ್ತಲಿರುತ್ತದೆ. ಇತ್ತೀಚೆಗೆ ಕೂಡ  ಯುಐಡಿಎಐ ಹೊಸ ಸಂವಾದಾತ್ಮಕ ಧ್ವನಿ ಪ್ರತಿಕ್ರಿಯೆ (ಐವಿಆರ್) ತಂತ್ರಜ್ಞಾನ ಪ್ರಾರಂಭಿಸಿದೆ. ಇದು ಗ್ರಾಹಕರಿಗೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಯಾವುದೇ ಮಾಹಿತಿ ಪಡೆಯಲು ಇರುವ ಉಚಿತ ಸೇವೆಯಾಗಿದ್ದು, ದಿನದ 24 ಗಂಟೆಯೂ ಲಭ್ಯವಿರಲಿದೆ.

ಈ ಹೊಸ ಸೇವೆ ಬಗ್ಗೆ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಈ ಐವಿಆರ್ (IVR) ಆಧಾರಿತ ಸೇವೆಗಳನ್ನು ಬಳಸಲು ಗ್ರಾಹಕರು 1947 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬೇಕು. ಪಿವಿಸಿ ಕಾರ್ಡ್ಗಳು (PVC cards) ಹಾಗೂ ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದ ಅಪ್ಡೇಟ್ ಚೆಕ್ ಮಾಡಲು ಅಥವಾ ಎಸ್ ಎಂಎಸ್ ಮೂಲಕ ಯಾವುದೇ ಮಾಹಿತಿ ಪಡೆಯಲು ಕೂಡ ಈ ಸೇವೆ ಬಳಸಿಕೊಳ್ಳಬಹುದು. ಇನ್ನು  help@uidai.gov.in ಸಂಪರ್ಕಿಸುವ ಮೂಲಕ ಕೂಡ ಮಾಹಿತಿ ಪಡೆಯಬಹುದು ಅಥವಾ ದೂರು ದಾಖಲಿಸಬಹುದು.

ಅಪ್ರಾಪ್ತ ವಯಸ್ಕರು ಪ್ಯಾನ್ ಕಾರ್ಡ್ ಪಡೆಯಬಹುದಾ? ಅರ್ಜಿ ಸಲ್ಲಿಕೆ ಹೇಗೆ?

ಇನ್ನು ಯುಐಡಿಎಐ AI/ML ಆಧಾರಿತ ಹೊಸ ಚಾಟ್ (chat) ವ್ಯವಸ್ಥೆಯನ್ನು ಕೂಡ ಪರಿಚಯಿಸಿದೆ. ಇದರ ಮೂಲಕ ನಾಗರಿಕರು ಪಿವಿಸಿ ಕಾರ್ಡ್ ಗಳ (PVC cards) ಸ್ಟೇಟಸ್ ಚೆಕ್ ಮಾಡಬಹುದು. 

ಆಧಾರ್ ಕಾರ್ಡ್ ದೂರುಗಳನ್ನು ದಾಖಲಿಸೋದು ಹೇಗೆ?
ಅಂಚೆ ಮೂಲಕ ಕೂಡ ನೀವು ಆಧಾರ್ ಕಾರ್ಡ್ ಗೆ (Aadhaar card) ಸಂಬಂಧಿಸಿದ ದೂರುಗಳನ್ನು ಯುಐಡಿಎಐ (UIDAI) ರಾಷ್ಟ್ರೀಯ ಕಚೇರಿ ಹಾಗೂ  ದೇಶಾದ್ಯಂತ ಇರುವ ವಿವಿಧ ಪ್ರಾದೇಶಿಕ ಶಾಖೆಗಳಿಗೆ (Regional Branches) ಸಲ್ಲಿಕೆ ಮಾಡಬಹುದು. ನಿಮ್ಮ ದೂರುಗಳನ್ನು (Complaints) ಪರಿಶೀಲಿಸಿದ ಬಳಿಕ ಸಂಬಂಧಪಟ್ಟ ವಿಭಾಗಗಳಿಗೆ ಕಳುಹಿಸಲಾಗುತ್ತದೆ. ಇ-ಮೇಲ್ ಮೂಲಕ ಕೂಡ ಯುಐಡಿಎಐ ಅಧಿಕಾರಿಗಳು ದೂರಿಗೆ ಪ್ರತಿಕ್ರಿಯೆ ನೀಡುತ್ತಾರೆ. 
ಇನ್ನು ಸಾರ್ವಜನಿಕ ಕೊಂದು ಕೊರತೆ (Public Grievance) ಪೋರ್ಟಲ್ ಮೂಲಕ ಕೂಡ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಪೋರ್ಟಲ್ ನಲ್ಲಿ ಹಿಂದೆ ಅಥವಾ ಇಂಗ್ಲಿಷ್ ನಲ್ಲಿ ದೂರು ದಾಖಲಿಸಲು ಅವಕಾಶವಿದೆ. ಆನ್ ಲೈನ್ ವ್ಯವಸ್ಥೆಯಾಗಿರುವ ಕಾರಣ ಎಲ್ಲಿಂದ ಬೇಕಾದರೂ ದಿನದ 24 ಗಂಟೆಯೂ ದೂರು ದಾಖಲಿಸಲು ಅವಕಾಶವಿದೆ. 

ಆನ್ ಲೈನ್ ನಲ್ಲೇ KYC ನವೀಕರಿಸಬಹುದು, ಬ್ಯಾಂಕಿಗೆ ಭೇಟಿ ನೀಡೋದು ಕಡ್ಡಾಯವಲ್ಲ: ಆರ್ ಬಿಐ

ದೂರಿನ ಸ್ಟೇಟಸ್ ಚೆಕ್ ಮಾಡೋದು ಹೇಗೆ?
ಕಂಪ್ಲೇಂಟ್ ಸ್ಟೇಟಸ್ ಪೇಜ್ ಗೆ ಭೇಟಿ ನೀಡಿ. 14 ಅಂಕೆಗಳ ದೂರು ಐಡಿ ನಮೂದಿಸಿ. ಕ್ಯಾಪ್ಚ ಕೋಡ್ ನಮೂದಿಸಿ. ಆ ಬಳಿಕ ‘Check Status'ಮೇಲೆ ಕ್ಲಿಕ್ ಮಾಡಿ. ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಸಮಸ್ಯೆಗಳಿಗೆ ನಾಗರಿಕರಿಗೆ ಶೀಘ್ರದಲ್ಲಿ ಪರಿಹಾರ ಒದಗಿಸಲು ಯುಐಡಿಎಐ ಈ ರೀತಿಯ ಸೇವೆಗಳನ್ನು ಪ್ರಾರಂಭಿಸಿದೆ. 
 

Follow Us:
Download App:
  • android
  • ios