ಕೋಲ್ಕತಾ: ವಾರದಲ್ಲಿ 5 ದಿನ ಮಾತ್ರ ಕರ್ತವ್ಯ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಜ.30, 31ರಂದು ದೇಶವ್ಯಾಪಿ ಬ್ಯಾಂಕ್‌ಗಳ ಮುಷ್ಕರಕ್ಕೆ ‘ಯುನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಯೂನಿಯನ್‌’ (ಯುಎಫ್‌ಬಿಯು) ಕರೆ ಕೊಟ್ಟಿದೆ. 

ಕೋಲ್ಕತಾ: ವಾರದಲ್ಲಿ 5 ದಿನ ಮಾತ್ರ ಕರ್ತವ್ಯ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಜ.30, 31ರಂದು ದೇಶವ್ಯಾಪಿ ಬ್ಯಾಂಕ್‌ಗಳ ಮುಷ್ಕರಕ್ಕೆ ‘ಯುನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಯೂನಿಯನ್‌’ (ಯುಎಫ್‌ಬಿಯು) ಕರೆ ಕೊಟ್ಟಿದೆ. ಬೇಡಿಕೆಗಳ ಕುರಿತು ಗುರುವಾರ ಮುಂಬೈನಲ್ಲಿ ನಡೆದ ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಷನ್‌ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘಟನೆ ಹೇಳಿದೆ.