ಕಳೆದ ಮೇ ತಿಂಗಳಿನಲ್ಲಿ 2,000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡ ದಿನದಿಂದ ಈವರೆಗೆ ಒಟ್ಟು ಶೇ.88 ರಷ್ಟು2,000 ರು. ನೋಟುಗಳು ಬ್ಯಾಂಕುಗಳಿಗೆ ಮರಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.
ನವದೆಹಲಿ: ಕಳೆದ ಮೇ ತಿಂಗಳಿನಲ್ಲಿ 2,000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡ ದಿನದಿಂದ ಈವರೆಗೆ ಒಟ್ಟು ಶೇ.88 ರಷ್ಟು2,000 ರು. ನೋಟುಗಳು ಬ್ಯಾಂಕುಗಳಿಗೆ ಮರಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ. ದೇಶದಲ್ಲಿ ಚಲಾವಣೆಯಲ್ಲಿದ್ದ 2,000 ರು. ಮುಖಬೆಲೆಯ 3.62 ಲಕ್ಷ ಕೋಟಿ ರು. ಮೌಲ್ಯದ ನೋಟುಗಳ ಪೈಕಿ ಜು.31ರ ತನಕ 3.14 ಲಕ್ಷ ಕೋಟಿ ರು. ವಾಪಸಾಗಿದ್ದು, ಇನ್ನು 48 ಸಾವಿರ ಕೋಟಿ ರು. ಮಾತ್ರ ಬಾಕಿ ಉಳಿದಿದೆ. ಇನ್ನು ವಾಪಸಾದ ನೋಟುಗಳ ಪೈಕಿ ಶೇ.87ರಷ್ಟು ಠೇವಣಿ ಹಾಗೂ ಉಳಿದ ಶೇ.13ರಷ್ಟು ನೋಟುಗಳು ಬದಲಾವಣೆ ರೂಪದಲ್ಲಿ ಬ್ಯಾಂಕಿಗ್ ವ್ಯವಸ್ಥೆಗೆ ಮರಳಿವೆ ಎಂದು ತಿಳಿಸಿದೆ.
ನೋಟುಗಳನ್ನು ಬದಲಿಸಿಕೊಳ್ಳುವ ಹಾಗೂ ಠೇವಣಿ ಮಾಡಲು ಸೆ.30 ಕೊನೆಯ ದಿನಾಂಕವಾಗಿದೆ. ಹೀಗಾಗಿ ಜನರು ತಮ್ಮ ಬಳಿ ಇರುವ ನೋಟುಗಳನ್ನು ಹಿಂದಿರುಗಿಸುವಂತೆ ಆರ್‌ಬಿಐ ಮನವಿ ಮಾಡಿದೆ.
ಅವಧಿಗೂ ಮುನ್ನ ಗೃಹಸಾಲ ಮರುಪಾವತಿಸೋ ಗ್ರಾಹಕರಿಗೆ ಬ್ಯಾಂಕ್ ದಂಡ ವಿಧಿಸಬಹುದಾ? RBI ಏನ್ ಹೇಳಿದೆ?
ಜುಲೈನಲ್ಲಿ 1.65 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ
ನವದೆಹಲಿ: ತೆರಿಗೆ ವಂಚನೆ ತಡೆ ಕ್ರಮಗಳು ಹಾಗೂ ಹೆಚ್ಚಿದ ಗ್ರಾಹಕ ವೆಚ್ಚದಿಂದಾಗಿ ಜುಲೈನಲ್ಲಿ ಜಿಎಸ್‌ಟಿ ಸಂಗ್ರಹ 1.65 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹ ಶೇ.11ರಷ್ಟು ಹೆಚ್ಚಾಗಿದೆ. ಅಲ್ಲದೇ 5ನೇ ಬಾರಿ ತಿಂಗಳೊಂದರಲ್ಲಿ ಸಂಗ್ರಹ 1.6 ಲಕ್ಷ ಕೋಟಿ ರು. ಗಡಿ ದಾಟಿದೆ.
ಜುಲೈ ತಿಂಗಳಿನಲ್ಲಿ ಒಟ್ಟಾರೆ 1,65,105 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದ್ದು, ಇದರಲ್ಲಿ 29,779 ಕೋಟಿ ರು. ಸಿಜಿಎಸ್‌ಟಿ, 37,623 ಕೋಟಿ ಎಸ್‌ಜಿಎಸ್‌ಟಿ, 85,930 ಕೋಟಿ ರು. ಐಜಿಎಸ್‌ಟಿ (41,2339 ಕೋಟಿ ರು. ಆಮದು ಸುಂಕ ಸೇರಿ) ಮತ್ತು 11,779 ಕೋಟಿ ರು. ಸೆಸ್ (840 ಕೋಟಿ ರು. ಆಮದು ಸುಂಕ ಸೇರಿ) ಸೇರಿದೆ. ಸತತ 2ನೇ ಬಾರಿ ಜಿಎಸ್‌ಟಿ ಸಂಗ್ರಹ ಏರಿಕೆ ಹಾದಿಯಲ್ಲಿ ಮುಂದುವರೆದಿದ್ದು, ಮೇನಲ್ಲಿ 1.57 ಲಕ್ಷ ಕೋಟಿ ರು. ಹಾಗೂ ಜೂನ್‌ನಲ್ಲಿ 1.61 ಲಕ್ಷ ಕೋಟಿ ರು. ಸಂಗ್ರಹವಾಗಿತ್ತು. ಏಪ್ರಿಲ್‌ನಲ್ಲಿ ಅತಿ ಹೆಚ್ಚು 1.87 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿತ್ತು.
ಎಂಜಿನಿಯರ್ ವೃತ್ತಿ ಬಿಟ್ಟು ಲಕ್ಷ ಲಕ್ಷ ದುಡಿಯೋ ಈತನ ಬ್ಯಸಿನೆಸ್ ಯಾವ್ದು?
