Asianet Suvarna News Asianet Suvarna News

ಕ್ರಿಪ್ಟೋಕರೆನ್ಸಿ ವಹಿವಾಟಿಗೆ ತೆರಿಗೆ; ವೈದ್ಯರಿಗೆ ಹೊಸ ಟಿಡಿಎಸ್ ನಿಯಮ; ಜುಲೈಯಲ್ಲಿ ಈ 8 ನಿಯಮಗಳಲ್ಲಿ ಬದಲಾವಣೆ

ಜುಲೈ ತಿಂಗಳ ಪ್ರಾರಂಭಕ್ಕೆ ಕೇವಲ ಎರಡು ದಿನಗಳಷ್ಟೇ ಬಾಕಿ ಉಳಿದಿವೆ. ಜುಲೈನಲ್ಲಿ ಕೆಲವು ಆರ್ಥಿಕ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಈ ನಿಯಮಗಳು ಜನಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರಲಿವೆ ಕೂಡ. ಹಾಗಾದ್ರೆ ಈ ಬದಲಾವಣೆಗಳು ಯಾವುವು? ಇಲ್ಲಿದೆ ಮಾಹಿತಿ.

8 major financial changes in July 2022 that effects day to day life
Author
Bangalore, First Published Jun 28, 2022, 6:49 PM IST

ನವದೆಹಲಿ (ಜು.28): ಬದಲಾವಣೆ (Change) ಜಗದ ನಿಯಮ. ಹಾಗೆಯೇ ಪ್ರತಿ ತಿಂಗಳು ಆರ್ಥಿಕ ವಿಚಾರಗಳಿಗೆ ಸಂಬಂಧಿಸಿ ಒಂದಿಷ್ಟು ಬದಲಾವಣೆಗಳು ಆಗುತ್ತಲೇ ಇರುತ್ತವೆ. ಈ ಬದಲಾವಣೆಗಳು ಸಾಮಾನ್ಯ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುವ ಕಾರಣ ಇವುಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಜುಲೈ (July) ತಿಂಗಳು ಪ್ರಾರಂಭಕ್ಕೆ ಇನ್ನು ಎರಡು ದಿನಗಳಷ್ಟೇ ಬಾಕಿ ಉಳಿದಿವೆ. ಜುಲೈನಲ್ಲಿ (July) ಅನೇಕ ನಿಯಮಗಳಲ್ಲಿ (Rules) ಬದಲಾವಣೆಯಾಗಲಿದೆ. ಹಾಗಾದ್ರೆ ಜುಲೈನಲ್ಲಿ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಯಾಗಲಿದೆ? ಇಲ್ಲಿದೆ ಮಾಹಿತಿ. 

1.ಕ್ರಿಪ್ಟೋಕರೆನ್ಸಿ ವಹಿವಾಟಿಗೆ ತೆರಿಗೆ ಕಡಿತ
ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿ ಖರೀದಿ ವ್ಯವಹಾರದ ಮೇಲೆ ಶೇ.1ರಷ್ಟು ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್‌) ಮಾಡುವ ವ್ಯವಸ್ಥೆ ಜು.1ರಿಂದ ಜಾರಿಗೆ ಬರಲಿದೆ. ಕಳೆದ ಫೆಬ್ರವರಿಯಲ್ಲಿ ಮಂಡನೆ ಮಾಡಿದ್ದ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕ್ರಿಪ್ಟೋಕರೆನ್ಸಿ ಖರೀದಿ ವ್ಯವಹಾರದ ಮೇಲೆ ಶೇ.1ರಷ್ಟು ಟಿಡಿಎಸ್‌ ಹಾಗೂ ಶೇ.30ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದ್ದರು. ಅದು ಈಗ ಜಾರಿಗೆ ಬರುತ್ತಿದೆ. ಯಾವುದೇ ವ್ಯಕ್ತಿ ಕ್ರಿಪ್ಟೋಕರೆನ್ಸಿ ಖರೀದಿಗೆ ಹಣ ಪಾವತಿಸಿದರೆ ಆ ಸಂದರ್ಭದಲ್ಲಿ ಶೇ.1ರಷ್ಟುಟಿಡಿಎಸ್‌ ಕಡಿತ ಮಾಡಬೇಕು. 

Breaking News: ರಿಲಯನ್ಸ್ ಜಿಯೋ ಚೇರ್ಮನ್‌ ಸ್ಥಾನಕ್ಕೆ ಮುಖೇಶ್ ಅಂಬಾನಿ ರಾಜೀನಾಮೆ, ಆಕಾಶ್ ಅಂಬಾನಿ ಹೊಸ ಅಧ್ಯಕ್ಷ!

2.ವೈದ್ಯರಿಗೆ ಹೊಸ ಟಿಡಿಎಸ್ ನಿಯಮ
ಭಾರತದಲ್ಲಿ ವೈದ್ಯರು (Doctors) ಹಾಗೂ ಸೋಷಿಯಲ್ ಮೀಡಿಯಾ ಪ್ರಭಾವಿಗಳು (Social Media Influencers) ಮಾರಾಟ (Sale) ಉತ್ತೇಜನಕ್ಕಾಗಿ ಉದ್ಯಮ ಸಂಸ್ಥೆಗಳಿಂದ ಸ್ವೀಕರಿಸುವ ಉಡುಗೊರೆಗಳ ಮೇಲೆ ಜುಲೈ 1ರಿಂದ ಟಿಡಿಎಸ್ (TDS) ಅನ್ವಯಿಸುತ್ತದೆ.  ಹೊಸ ನಿಬಂಧನೆಗಳ ಅನ್ವಯದ ಕುರಿತು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ತೆರಿಗೆ ಆದಾಯದ ಸೋರಿಕೆಯನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಬಜೆಟ್ ನಲ್ಲಿ (Central Budget) ಆದಾಯದ ಮೇಲೆ ಟಿಡಿಎಸ್ (TDS) ಅನ್ವಯವಾಗುವಂತೆ ಮಾಡಲು ಆದಾಯ ತೆರಿಗೆ ಕಾಯ್ದೆ (Icome Tax Act), 1961ಕ್ಕೆ 194R ಎಂಬ ಹೊಸ ಸೆಕ್ಷನ್ ಅನ್ನು ಸೇರ್ಪಡೆಗೊಳಿಸಿದೆ. ಇದರ ಪ್ರಕಾರ ವಾರ್ಷಿಕ 20,000ರೂ.ಗಿಂತ ಹೆಚ್ಚಿನ ಪ್ರಯೋಜನ ಪಡೆಯುವ ಯಾವುದೇ ವ್ಯಕ್ತಿ ಶೇ.10ರಷ್ಟು ಟಿಡಿಎಸ್ (TDS)ಪಾವತಿಸಬೇಕು.

3.ಪ್ಯಾನ್ -ಆಧಾರ್ ಲಿಂಕ್ ಗೆ 1000 ರೂ. ದಂಡ
ನೀವು ಇನ್ನೂ ಆಧಾರ್ ನೊಂದಿಗೆ (Aadhar) ಪ್ಯಾನ್ ಕಾರ್ಡ್  (PAN Card) ಲಿಂಕ್ (Link) ಮಾಡಿಲ್ವ? ಹಾಗಾದ್ರೆ ತಪ್ಪದೇ ಜೂನ್ 30ರೊಳಗೆ ಈ ಕೆಲಸವನ್ನು ಮಾಡಿ ಮುಗಿಸಿ. ಏಕೆಂದ್ರೆ ಜುಲೈ 1ರ ಬಳಿಕ 500ರೂ. ಅಲ್ಲ 1000ರೂ. ದಂಡ (Penalty) ಪಾವತಿಸಬೇಕಾಗುತ್ತದೆ.  2022 ರ ಏಪ್ರಿಲ್ 1ರಿಂದ ಜೂನ್ 30ರ ತನಕ ತೆರಿಗೆದಾರರು ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡಿದ್ರೆ  500ರೂ. ವಿಳಂಬ ಶುಲ್ಕ (late fee) ಪಾವತಿಸಬೇಕು. ಇನ್ನು ಜುಲೈ 1ರ ಬಳಿಕ ಆಧಾರ್-ಪ್ಯಾನ್ ಜೋಡಣೆಗೆ  1000 ರೂ. ದಂಡ ಪಾವತಿಸಬೇಕು.

4.ಐಟಿಆರ್ ಸಲ್ಲಿಕೆಗೆ ಅಂತಿಮ ಗಡುವು
ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಅಂತಿಮ ಗಡುವು ಸಮೀಪಿಸುತ್ತಿದೆ. ಐಟಿಆರ್ ಸಲ್ಲಿಕೆಗೆ ಜುಲೈ 31 ಅಂತಿಮ ದಿನಾಂಕವಾಗಿದೆ.

5.ಡಿಮ್ಯಾಟ್ ಖಾತೆ ಕೆವೈಸಿ
ಡಿ ಮ್ಯಾಟ್ ಖಾತೆ ಹೊಂದಿರೋರು ಜೂನ್ 30 ರೊಳಗೆ ಕೆವೈಸಿ ಪೂರ್ಣಗೊಳಿಸಬೇಕು. ಇಲ್ಲವಾದ್ರೆ ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಇದ್ರಿಂದ ಷೇರುಗಳ ಖರೀದಿ ಹಾಗೂ ಮಾರಾಟ ಮಾಡೋದು ಸಾಧ್ಯವಾಗೋದಿಲ್ಲ. 

6.ಹೊಸ ವೇತನ ಸಂಹಿತೆ ಜಾರಿ
ಜುಲೈ 1ರಿಂದ ಹೊಸ ವೇತನ ಸಂಹಿತೆ ಜಾರಿಯಾಗೋ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದು ಜಾರಿಯಾದ್ರೆ ವಾರದಲ್ಲಿ ನಾಲ್ಕೇ ದಿನ ಕೆಲಸ ಸೇರಿದಂತೆ ವೇತನ (Salary),ಕೆಲಸದ ಅವಧಿ (Working hours) ಹಾಗೂ ಪಿಎಫ್ ಗೆ(PF) ಸಂಬಂಧಿಸಿ ಬದಲಾವಣೆಗಳಾಗೋ ಸಾಧ್ಯತೆಯಿದೆ. ಜೊತೆಗೆ ಸಂಬಳದ ರಚನೆಯಲ್ಲಿ ಕೂಡ ಮಾರ್ಪಾಡುಗಳಾಗಲಿವೆ ಎಂದು ಹೇಳಲಾಗಿದೆ. ಇದು ಜಾರಿಯಾದ್ರೆ  ಉದ್ಯೋಗಿಯ ಟೇಕ್ ಹೋಮ್ ವೇತನ ಇಳಿಕೆಯಾಗಲಿದೆ. 

ನೆನಪಿಡಿ, ಇವುಗಳ ಮೇಲೆ ಹಣ ಹೂಡುವುದು ಇನ್ವೆಸ್ಟ್‌ಮೆಂಟ್ ಅಲ್ಲ!

7.ಅಡುಗೆ ಅನಿಲ ಮತ್ತಷ್ಟು ದುಬಾರಿ
ಪ್ರತಿ ತಿಂಗಳ ಮೊದಲ ದಿನ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ಹಾಗೆಯೇ ಜುಲೈನಲ್ಲಿ ಗೃಹ  ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ. 

8.ತುಟ್ಟಿ ಭತ್ಯೆ ಹೆಚ್ಚಳ ಸಾಧ್ಯತೆ
ಕೇಂದ್ರ ಸರ್ಕಾರ ಜುಲೈನಲ್ಲಿ ತುಟ್ಟಿ ಭತ್ಯೆ ಹೆಚ್ಚಳ ಮಾಡುವ ಸಾಧ್ಯತೆಯಿದೆ. ತುಟ್ಟಿಭತ್ಯೆಯನ್ನು ಶೇ.. 4ರಷ್ಟು ಏರಿಕೆ ಮಾಡುವ ಸಾಧ್ಯತೆಯಿದೆ. ಇದರಿಂದ ತುಟ್ಟಿಭತ್ಯೆ ಶೇ. 38ಕ್ಕೆ ಏರಿಕೆಯಾಗಲಿದೆ. ಉದ್ಯೋಗಿಗಳ ಫಿಟ್‌ಮೆಂಟ್ ಅಂಶವೂ ಹೆಚ್ಚಾಗಬಹುದು ಎಂದು ಹೇಳಲಾಗಿದೆ. 

Follow Us:
Download App:
  • android
  • ios