Asianet Suvarna News Asianet Suvarna News

7th Pay Commission:ಶೀಘ್ರದಲ್ಲೇ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 26,000ರೂ.ಗೆ ಏರಿಕೆ; ವರದಿಗಳು ಏನ್ ಹೇಳುತ್ತವೆ?

*ಫಿಟ್ ಮೆಂಟ್ ಫ್ಯಾಕ್ಟರ್ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರ ಬೇಡಿಕೆ
*ಮೂಲವೇತನ ಹೆಚ್ಚಳಕ್ಕೆ ಸಚಿವ ಸಂಪುಟ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುವ ಸಾಧ್ಯತೆ
*ಫಿಟ್ ಮೆಂಟ್ ಫ್ಯಾಕ್ಟರ್ ಅನ್ನು 2.57 ಬಾರಿಯಿಂದ  3.68 ಬಾರಿಗೆ ಹೆಚ್ಚಳ ಮಾಡುವ ನಿರೀಕ್ಷೆ

7th Pay Commission Minimum pay to be hiked to Rs 26000 Big decision on fitment factor soon details here
Author
Bangalore, First Published May 21, 2022, 8:20 PM IST

ನವದೆಹಲಿ (ಮೇ 21): ಏಳನೇ ವೇತನ ಆಯೋಗದ (7th Pay Commission) ಶಿಫಾರಸ್ಸಿನಂತೆ ನಿಗದಿಪಡಿಸಿರುವ ಕೇಂದ್ರ ಸರ್ಕಾರಿ ನೌಕರರ (Central Government employees) ಮೂಲ ವೇತನವನ್ನು (Basic Salary) 26,000ರೂ.ಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ (Union Cabinet) ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಫಿಟ್ ಮೆಂಟ್ ಫ್ಯಾಕ್ಟರ್ (fitment factor) ಹೆಚ್ಚಳ ಮಾಡುವಂತೆ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ದೀರ್ಘ ಸಮಯದಿಂದ ಬೇಡಿಕೆ ಮುಂದಿಡುತ್ತಿದ್ದಾರೆ. ಒಂದು ವೇಳೆ ಸರ್ಕಾರ ಫಿಟ್ ಮೆಂಟ್ ಫ್ಯಾಕ್ಟರ್ (fitment factor) ಏರಿಕೆ ಮಾಡಿದ್ರೆ, ಕೇಂದ್ರ ಸರ್ಕಾರಿ ನೌಕರರ ವೇತನ ಕೂಡ ಹೆಚ್ಚಲಿದೆ. ಆದ್ರೆ ಸರ್ಕಾರ ಈ ತನಕ ಅಂಥ ಯಾವುದೇ ನಿರ್ಧಾರ ಕೈಗೊಂಡಿಲ್ಲ. 

ಪ್ರಸ್ತುತ ಕೇಂದ್ರ ಸರ್ಕಾರಿ (Central Government) ನೌಕರರ (Employees) ಕನಿಷ್ಠ ವೇತನ (Minimum wage) 18,000ರೂ. ಇದೆ. ಫಿಟ್ ಮೆಂಟ್ ಫ್ಯಾಕ್ಟರ್ ಹೆಚ್ಚಳದಿಂದ ಇದು 26,000ರೂ.ಗೆ ಏರಿಕೆಯಾಗೋ ಸಾಧ್ಯತೆಯಿದೆ. ಈ ರೀತಿ ಏರಿಕೆಯಾಗಲು ಕೇಂದ್ರ ಸರ್ಕಾರ ಫಿಟ್ ಮೆಂಟ್ ಫ್ಯಾಕ್ಟರ್ (Fitment Factor) ಅನ್ನು 2.57 ಬಾರಿಯಿಂದ 3.68 ಬಾರಿಗೆ ಹೆಚ್ಚಳ ಮಾಡಬೇಕಿದೆ. 

Insurance Renewal:ನಿಮ್ಮಬ್ಯಾಂಕ್ ಖಾತೆಯಲ್ಲಿ 342ರೂ. ಕನಿಷ್ಠ ಬ್ಯಾಲೆನ್ಸ್ ಇದೆಯಾ? ಇಲ್ಲವಾದ್ರೆ ಕೈ ತಪ್ಪುತ್ತದೆ 4ಲಕ್ಷ ರೂ.

ಫಿಟ್ ಮೆಂಟ್ ಫ್ಯಾಕ್ಟರ್ ಲೆಕ್ಕಾಚಾರ ಹೇಗೆ?
ಒಂದು ವೇಳೆ ಕೇಂದ್ರ ಸರ್ಕಾರ ಫಿಟ್ ಮೆಂಟ್ ಫ್ಯಾಕ್ಟರ್ ಅನ್ನು 3.68 ಬಾರಿ ಹೆಚ್ಚಿಸಿದ್ರೆ, ನೌಕರರ ಮೂಲವೇತನ 26,000 ರೂ. ಆಗಲಿದೆ.  ಉದಾಹರಣೆಗೆ ಒಂದು ವೇಳೆ ಸರ್ಕಾರಿ ನೌಕರರ ಕನಿಷ್ಠ ವೇತನ 18,000ರೂ. ಆಗಿದ್ರೆ ಆಗ ಭತ್ಯೆಗಳನ್ನು ಹೊರತುಪಡಿಸಿ ಕನಿಷ್ಠ ವೇತನ 2.57 ಫಿಟ್ ಮೆಂಟ್ ಫ್ಯಾಕ್ಟರ್ ಅನ್ವಯ 46,260 ರೂ. (18,000 X 2.57 = 46,260) ಆಗುತ್ತದೆ. ಒಂದು ವೇಳೆ ಫಿಟ್ ಮೆಂಟ್ ಫ್ಯಾಕ್ಟರ್ 3.68 ಆಗಿದ್ದರೆ, ಆಗ ವೇತನ 95,680 ರೂ.ಗೆ ಏರಿಕೆಯಾಗಲಿದೆ (26000X3.68 = 95,680).

34 ತಿದ್ದುಪಡಿಗಳೊಂದಿಗೆ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಕೇಂದ್ರ ಸಚಿವ ಸಂಪುಟ 2017ರ ಜೂನ್ ನಲ್ಲಿ ಅಂಗೀಕರಿಸಿತ್ತು. ಹೊಸ ವೇತನ ಶ್ರೇಣಿಯಿಂದ ಕನಿಷ್ಠ ಮೂಲ ವೇತನ ಮಾಸಿಕ 7,000ರೂ.ನಿಂದ 18,000ರೂ.ಗೆ ಏರಿಕೆಯಾಗಿತ್ತು. ಇನ್ನೊಂದು ಕಡೆ  ಉನ್ನತ ಮಟ್ಟದ ಅಧಿಕಾರಿಗಳು ಅಂದ್ರೆ ಕಾರ್ಯದರ್ಶಿ ಮಟ್ಟದ ವೇತನ 90,000 ರೂ.ನಿಂದ 2.5 ಲಕ್ಷ ರೂ.ಗೆ ಏರಿಕೆಯಾಗಿತ್ತು. ವರ್ಗ 1ರ ಅಧಿಕಾರಿಗಳಿಗೆ ಪ್ರಾರಂಭದ ವೇತನ 56,100ರೂ. ಫಿಟ್ ಮೆಂಟ್ ಫ್ಯಾಕ್ಟರ್ ಹೆಚ್ಚಳಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡುವ ತನಕ ಏನೂ ಹೇಳುವಂತಿಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಅಧಿಕೃತ ಘೋಷಣೆಗಾಗಿ ಕಾಯುವುದು ಬಿಟ್ಟರೆ ಕೇಂದ್ರ ಸರ್ಕಾರಿ ನೌಕರರಿಗೆ ಸದ್ಯ ಬೇರೆ ಆಯ್ಕೆಯಿಲ್ಲ. 

Econimic Crisis ಪಾಕಿಸ್ತಾನದಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿ, ಕಾರು ಆಮದು ನಿಷೇಧ!

ಜುಲೈನಲ್ಲಿ ತುಟ್ಟಿ ಭತ್ಯೆ (DA) ಹೆಚ್ಚಳ?
ವರದಿಗಳ ಪ್ರಕಾರ ಜುಲೈ (July) ಅಥವಾ ಆಗಸ್ಟ್ ನಲ್ಲಿ (August) ಕೇಂದ್ರ ಸರ್ಕಾರ ನೌಕರರ ತುಟ್ಟಿ ಭತ್ಯೆಯನ್ನು (DA) ಹೆಚ್ಚಳ ಮಾಡುವ ಸಾಧ್ಯತೆಯಿದೆ. ವರದಿಗಳ ಪ್ರಕಾರ ತುಟ್ಟಿಭತ್ಯೆಯು ಜುಲೈನಲ್ಲಿ ಇನ್ನೂ ನಾಲ್ಕು ಪ್ರತಿಶತದಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಇದ್ರಿಂದ ಡಿಎ (DA) ಶೇ.38ಕ್ಕೆ ಏರಿಕೆಯಾಗಲಿದೆ. ಮಾರ್ಚ್‌ನಲ್ಲಿ, ಕೇಂದ್ರ ಸಚಿವ ಸಂಪುಟವು 7ನೇ ವೇತನ ಆಯೋಗದ ಅಡಿಯಲ್ಲಿ ತುಟ್ಟಿಭತ್ಯೆ (ಡಿಎ) ಯಲ್ಲಿ ಶೇ. 3 ರಷ್ಟು ಹೆಚ್ಚಿಸಲು ಅನುಮೋದಿಸಿತು. ಹೀಗಾಗಿ ಡಿಎಯನ್ನು ಮೂಲ ಆದಾಯದ ಶೇಕಡಾ 34ಕ್ಕೆ ತೆಗೆದುಕೊಂಡಿತು.  ಚಿಲ್ಲರೆ ಹಣದುಬ್ಬರದ ದತ್ತಾಂಶದ ಆಧಾರದ ಮೇಲೆ ಜನವರಿ ಮತ್ತು ಜುಲೈ ನಲ್ಲಿ ವರ್ಷಕ್ಕೆ ಎರಡು ಬಾರಿ ಡಿಎ (DA) ಮತ್ತು ಡಿಆರ್  (DR) ಪರಿಷ್ಕರಿಸಲಾಗುತ್ತದೆ. ದೇಶದಲ್ಲಿ ಚಿಲ್ಲರೆ ಹಣದುಬ್ಬರ ಏಪ್ರಿಲ್ ನಲ್ಲಿ 8 ವರ್ಷಗಳ ಗರಿಷ್ಠ ಮಟ್ಟ ಶೇ.7.79ಕ್ಕೆ ಏರಿಕೆಯಾಗಿದ್ದು, ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. 
 

Follow Us:
Download App:
  • android
  • ios