ಅಬ್ಬಬ್ಬಾ.. 75000 ರು. ದಾಟಿದ ಶುದ್ಧ ಚಿನ್ನದ ಬೆಲೆ: ಬೆಂಗಳೂರು ಮಾರುಕಟ್ಟೆಯಲ್ಲಿ ಎಷ್ಟಿದೆ ಗೊತ್ತಾ?
ಮಧ್ಯಪ್ರಾಚ್ಯದ ಸಂರ್ಘಷದ ನಡುವೆ ಭಾರತದಲ್ಲಿ ಮಂಗಳವಾರ ಚಿನ್ನ, ಬೆಳ್ಳಿಯ ದರ ಸಾರ್ವಕಾಲಿಕ ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲಿ 99.5 ಶುದ್ಧತೆಯ ಚಿನ್ನ ಪ್ರತಿ 10 ಗ್ರಾಂಗೆ 75820 ರು.ಗೆ ತಲುಪಿದೆ.
ನವದೆಹಲಿ (ಏ.17): ಮಧ್ಯಪ್ರಾಚ್ಯದ ಸಂರ್ಘಷದ ನಡುವೆ ಭಾರತದಲ್ಲಿ ಮಂಗಳವಾರ ಚಿನ್ನ, ಬೆಳ್ಳಿಯ ದರ ಸಾರ್ವಕಾಲಿಕ ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲಿ 99.5 ಶುದ್ಧತೆಯ ಚಿನ್ನ ಪ್ರತಿ 10 ಗ್ರಾಂಗೆ 75820 ರು.ಗೆ ತಲುಪಿದೆ. ಇದು ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ಸಾರ್ವಕಾಲಿಕ ಗರಿಷ್ಠ ದರವಾಗಿದೆ. ಇನ್ನು ಪ್ರತಿ ಕೆಜಿ ಚಿನ್ನದ ಬೆಲೆ ಕೂಡಾ ಸಾರ್ವಜನಿಕ ಗರಿಷ್ಠವಾದ 86200 ರು.ಗೆ ತಲುಪಿದೆ.
ಇನ್ನು ರಾಜಧಾನಿ ನವದೆಹಲಿಯಲ್ಲಿ ಚಿನ್ನದ ಬೆಲೆ 700 ರು. ಏರಿಕೆ ಕಂಡಿದ್ದು 10 ಗ್ರಾಂ ಚಿನ್ನದ 73,750 ರು. ಆಗಿದೆ. ಆದೇ ರೀತಿ ಬೆಳ್ಳಿ ದರವೂ 800 ರು.ನಷ್ಟು ಏರಿಕೆ ಕಂಡಿದ್ದು, ಕೆಜಿ ಬೆಳ್ಳಿ 86,500 ರು.ಗೆ ತಲುಪಿದೆ. ಮುಂಬೈನಲ್ಲಿ 99.5 ಶುದ್ಧತೆಯ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 73008 ರು. ತಲುಪಿದ್ದರೆ, ಶೇ.99.9 ಶುದ್ಧತೆಯ ಚಿನ್ನದ ದರ 73302 ರು.ಗೆ ಏರಿದೆ. ಅದೇ ರೀತಿ ಬೆಳ್ಳಿ ಬೆಲೆ 83213 ರು. ಮುಟ್ಟಿದೆ.
ಚಿನ್ನದ ಬೆಲೆ ಇನ್ನಷ್ಟು ಹೆಚ್ಚುತ್ತಾ?: ಚಿನ್ನದ ಬೆಲೆ ಗಗನಕ್ಕೇರಿದೆ. ಬಂಗಾರದ ಬೆಲೆಯಲ್ಲಿ ಏರಿಳಿತವಾಗೋದು ಸಹಜ. ಆದ್ರೆ, ಈ ತಿಂಗಳು (ಏಪ್ರಿಲ್ ನಲ್ಲಿ) ಮಾತ್ರ ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ ಕಾಣುವ ಮೂಲಕ ಆಭರಣ ಖರೀದಿಯ ಕನಸು ಕಾಣುತ್ತಿರೋರಿಗೆ ಏಟು ನೀಡಿದೆ. ಆದರೆ, ಚಿನ್ನದ ಮೇಲೆ ಹೂಡಿಕೆ ಮಾಡಿರೋರಿಗೆ ಮಾತ್ರ ಬಂಪರ್ ರಿಟರ್ನ್ಸ್ ನೀಡಿದೆ. ಈ ವರ್ಷದಲ್ಲಿ ಇಲ್ಲಿಯ ತನಕದ ಚಿನ್ನದ ಮೇಲಿನ ಹೂಡಿಕೆಗೆ ಶೇ.14ರಷ್ಟು ಗಳಿಕೆ ಸಿಕ್ಕಿದೆ.
ಅಬ್ಬಬ್ಬಾ! : 10 ಗ್ರಾಂ ಚಿನ್ನಕ್ಕೆ ಈಗ 71 ಸಾವಿರ: ದಾಖಲೆ ಪ್ರಮಾಣದಲ್ಲಿ ಏರಿಕೆ
ಇದು ಕಳೆದ ವರ್ಷದ ಗಳಿಕೆ ಪ್ರಮಾಣ ಶೇ.13ರಷ್ಟನ್ನು ಮೀರಿಸಿದೆ. ಸತತ ನಾಲ್ಕು ವಾರಗಳಿಂದ ಚಿನ್ನದ ಬೆಲೆಯಲ್ಲಿ ಜಾಗತಿಕವಾಗಿ ಏರಿಕೆ ಕಂಡುಬಂದಿದೆ. ಚಿನ್ನದ ಬೆಲೆ ಔನ್ಸ್ ಗೆ 2,410 ಅಮೆರಿಕನ್ ಡಾಲರ್ ದಾಟುವ ಮೂಲಕ ಬಂಗಾರ ಖರೀದಿಸೋರಿಗೆ ಶಾಕ್ ನೀಡಿದೆ. ಮಧ್ಯ ಪೂರ್ವದಲ್ಲಿನ ಸಂಘರ್ಷದ ಕಾರ್ಮೋಡ ಬರೀ ಒಂದೇ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಶೇ.3ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಬಹುದು.